ನೂಹ್ (ಹರಿಯಾಣ) ದ ಹಿಂಸಾಚಾರದ ಪ್ರಕರಣದಲ್ಲಿ ಬಂಧಿತ ಬಿಟ್ಟು ಬಜರಂಗಿ ಬಜರಂಗದಳದ ಸದಸ್ಯನಲ್ಲ ! – ವಿಹಿಂಪನ ಸ್ಪಷ್ಟೀಕರಣ

ಗೋರಕ್ಷಕ ಬಿಟ್ಟು ಭಜರಂಗಿ

ನೂಹ್ (ಹರಿಯಾಣ) – ಇಲ್ಲಿ ಕಳೆದ ತಿಂಗಳು ನಡೆದ ಹಿಂದೂಗಳ ಜಲಾಭಿಷೇಕ ಯಾತ್ರೆಯ ಮೇಲೆ ಮುಸ್ಲಿಂ ಮತಾಂಧರು ನಡೆಸಿದ ದಾಳಿ ಮತ್ತು ಹಿಂಸಾಚಾರದ ಹಿಂದೆ ರಾಜಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿ ಹಿಂದುತ್ವನಿಷ್ಠನ ಕೈವಾಡವಿದೆ ಎಂದು ತಥಾಕಥಿತ ಜಾತ್ಯತೀತವಾದಿಗಳು ಮತ್ತು ಮತಾಂಧ ಮುಸ್ಲಿಮರಿಂದ ಸುದ್ದಿ ಹಬ್ಬಿಸಲಾಗಿತ್ತು. ಬಿಟ್ಟು ಬಜರಂಗಿ ಜುಲೈ 31 ಕ್ಕೆ ಅಂದರೆ ಹಿಂಸಾಚಾರದ 1 ದಿನದ ಮೊದಲು ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ವೀಡಿಯೊವನ್ನು ಪ್ರಸಾರ ಮಾಡಿದ್ದರಿಂದ ಈ ಹಿಂಸಾಚಾರ ನಡೆಯಿತು ಎಂದು ಅವರ ಮೇಲೆ ಆರೋಪ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆಗಸ್ಟ್ 15 ರಂದು ಹರಿಯಾಣ ಪೊಲೀಸರು ಬಿಟ್ಟು ಬಜರಂಗಿಯನ್ನು ಫರಿದಾಬಾದ್‌ನಲ್ಲಿರುವ ಅವರ ನಿವಾಸದಿಂದ ಬಂಧಿಸಿದ್ದರು. ಬಂಧನದ ನಂತರ ವಿಶ್ವ ಹಿಂದೂ ಪರಿಷತ್, ಬಿಟ್ಟು ಬಜರಂಗಿ ಬಜರಂಗದಳದ ಕಾರ್ಯಕರ್ತನಲ್ಲ ಎಂದು ಸ್ಪಷ್ಟಪಡಿಸಿದೆ. ಪರಿಷತ್ತು, ಬಜರಂಗಿ ಅವರ ವೀಡಿಯೊದ ವಿಷಯವು ಅನುಚಿತವಾಗಿತ್ತು. ಬಿಟ್ಟು ಬಜರಂಗಿ ಅವರು ‘ಗೋರಕ್ಷಕ ಬಜರಂಗ ದಳ’ದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದೆ.