ಇಲೆಕ್ಟ್ರಿಕ್‌ ವಾಹನಗಳು ಪರಿಸರಕ್ಕೆ ಪೂರಕವೋ, ಹಾನಿಕರವೋ ?

೧. ಬ್ಯಾಟರಿ ತಯಾರಿಸಲು ಬೇಕಾಗುವ ‘ಲಿಥಿಯಂ’ ಭೂಮಿಯಿಂದ ತೆಗೆಯುವಾಗ ಆಗುವ ಪರಿಸರ ಮಾಲಿನ್ಯ ಮತ್ತು ಅದರಿಂದಾಗುವ ನೈಸರ್ಗಿಕ ಹಾನಿ ಇದರಲ್ಲಿ ೨ ಪ್ರಮುಖ ಭಾಗಗಳಿವೆ. ಅದೆಂದರೆ ಮೋಟಾರ ಮತ್ತು ಬ್ಯಾಟರಿ. ಅರ್ಥಾತ್‌ ವಾಹನವನ್ನು ಬ್ಯಾಟರಿ ಚಾರ್ಜ (ಬ್ಯಾಟರಿಯಲ್ಲಿ ಶಕ್ತಿಯನ್ನು ಭರಿಸಿ) ಮಾಡಿ ಉಪಯೋಗಿಸ ಬೇಕಾಗುತ್ತದೆ ಎಂದು ಎಲ್ಲರಿಗೂ ತಿಳಿದೇ ಇರುತ್ತದೆ.

ಸದ್ಯದ ಕಾಲದಲ್ಲಿ ಪ್ರಮುಖವಾಗಿ ಉಪಯೋಗಿಸಲಾಗುತ್ತಿರುವ ಬ್ಯಾಟರಿಯು ‘ಲೀಥಿಯಂ ಅಯಾನ್’ ತಂತ್ರಜ್ಞಾನದ ಮೇಲಾಧಾರಿತವಾಗಿದೆ. ಈ ಬ್ಯಾಟರಿಯನ್ನು ಲೀಥಿಯಂ, ನಿಕಲ್, ಮ್ಯಾಂಗನೀಸ ಮತ್ತು ಕೋಬಾಲ್ಟ್‌ನಂತಹ ಕೆಲವು ಖನಿಜಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ಭಾರತ ದಲ್ಲಿ ಇತ್ತೀಚೆಗೆ ಲೀಥಿಯಂನ ಹೇರಳವಾದ ನಿಕ್ಷೇಪಗಳನ್ನು ಕಂಡು ಹಿಡಿಯಲಾಗಿದ್ದರೂ, ಬ್ಯಾಟರಿ ತಯಾರಿಸಲು ಅಗತ್ಯ ವಿರುವ ಹೆಚ್ಚಿನ ಲೀಥಿಯಂ ದಕ್ಷಿಣ ಅಮೇರಿಕಾ ಖಂಡದ ಕೆಲವು ದೇಶಗಳಿಂದ ಬರುತ್ತಿದೆ. ಅದನ್ನು ಗಣಿಯಿಂದ ಹೊರ ತೆಗೆಯಲು ಬಳಸುವ ಯಂತ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಡಿಸೇಲ್‌ ಬೇಕಾಗುತ್ತವೆ. ಈ ಯಂತ್ರಗಳು ಕಾರ್ಬನ ಮೊನಾಕ್ಸೈಡ್‌ ಮತ್ತು ಇತರ ಹಾನಿಕರ ಅನಿಲಗಳನ್ನು ವಾತಾವರಣದಲ್ಲಿ ಹೊರ ಬಿಡುತ್ತವೆ. ಈ ಲೀಥಿಯಂಅನ್ನು ವಿವಿಧ ದೇಶಗಳಿಗೆ ಸಾಗಿಸುವ ಹಡಗು ಕೂಡ ಡಿಸೇಲ್‌ ಮೂಲಕ ಚಲಿಸುತ್ತದೆ. ಇದು ವಾಯುಮಾಲಿನ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಲೀಥಿಯಂನಂತೆಯೇ ಕೊಬಾಲ್ಟ್ ಅನ್ನು ಸಹ ಗಣಿಯಿಂದ ತೆಗೆಯಲಾಗುತ್ತದೆ. ಇದನ್ನು ಮುಖ್ಯವಾಗಿ ಆಫ್ರಿಕಾ ಖಂಡದ ಕಾಂಗೋದಂತಹ ದೇಶಗಳಿಂದ ತೆಗೆಯಲಾಗುತ್ತದೆ. ಅಲ್ಲಿಯೂ ತೆಗೆಯುವ ವಿಧಾನ ಒಂದೇ ರೀತಿಯಾಗಿದ್ದು, ಇದರಿಂದ ವಾಯು ಮಾಲಿನ್ಯ ಮತ್ತು ಭೂಮಿಯ ಹಾನಿ ಎರಡೂ ಆಗುತ್ತದೆ. ಇದಲ್ಲದೇ ಕಾಂಗೋ ಇದು ಬಡ ದೇಶವಾಗಿರುವುದರಿಂದ ಅಲ್ಲಿ ಈ ಕಾಮಗಾರಿಗಾಗಿ ಬಾಲ ಕಾರ್ಮಿಕರನ್ನು ದೊಡ್ಡ ಪ್ರಮಾಣ ದಲ್ಲಿ ಉಪಯೋಗಿಸುತ್ತಾರೆ. ಈ ಸಮಸ್ಯೆಯಂತೂ ಯಾರ ಕಣ್ಣಿಗೂ ಬೀಳದೇ ಮರೆಯಲ್ಲಿದೆ.

ಈ ವಿವಿಧ ಖನಿಜಗಳ ಸಮರ್ಪಕ ಪೂರೈಕೆಗಾಗಿ ಗಣಿಗಾರಿಕೆಯಿಂದ ಭೂಮಿಗೆ ಸರಿಪಡಿಸಲಾಗದಷ್ಟು ಹಾನಿಯಾಗುತ್ತಿದೆ. ಇದರಿಂದ ಕೆಲವು ದೇಶಗಳಲ್ಲಿ ಅಂತರ್ಜಲ ಮಟ್ಟ ಅನಿಯಮಿತ ವಾಗಿದೆ. ಇನ್ನೂ ಕೆಲವು ದೇಶಗಳಲ್ಲಿ ಇನ್ನೂ ಆಗಿರುವುದಿಲ್ಲ. ಇದಲ್ಲದೇ ಲೀಥಿಯಂನಿಂದ ತಯಾರಿಸಲಾಗಿರುವ ನಿರ್ಜೀವ ಬ್ಯಾಟರಿಗಳ ಮರುಬಳಕೆ ಮತ್ತು ವಿಲೇವಾರಿ ವಿಷಯದ ಬಗ್ಗೆ ಎಲ್ಲಿಯೂ ನಿರ್ದಿಷ್ಟ ಪರಿಹಾರವನ್ನು ಕಂಡು ಹಿಡಿಯಲಾಗಿಲ್ಲ.

೨. ವಿದ್ಯುತ್‌ ಉತ್ಪಾದನೆಯಿಂದ ವಾಯು ಮಾಲಿನ್ಯವಾಗುತ್ತಿದೆ. ಹಾಗೆಯೇ ಇಲೆಕ್ಟ್ರಿಕ್‌ ವಾಹನಗಳೂ ಮಾಲಿನ್ಯಕ್ಕೆ ವಿವಿಧ ರೀತಿಯಲ್ಲಿ ಕೊಡುಗೆ ಸಲ್ಲಿಸುತ್ತಿವೆ.
ಇದಲ್ಲದೆ ವಾಹನ ನಿಯಂತ್ರಣಾ ಘಟಕ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಅಗತ್ಯವಾದ ಅರೆವಾಹಕಗಳ ಉತ್ಪಾದನೆಗೆ ಬಹಳಷ್ಟು ನೀರು ತಗಲುತ್ತದೆ. ಸ್ವಲ್ಪ ಸಮಯದ ಹಿಂದೆ, ಅತಿದೊಡ್ಡ ಉತ್ಪಾದಕರಾಗಿರುವ ತೈವಾನನಲ್ಲಿ ನೀರಿನ ಕೊರತೆಯಿಂದಾಗಿ ಅರೆವಾಹಕಗಳ ಉತ್ಪಾದನೆಯನ್ನು ಹೆಚ್ಚ್ಚುಕಮ್ಮಿ ಸ್ಥಗಿತಗೊಳಿಸಲಾಗಿತ್ತು. ನೀರು ಮನುಷ್ಯ ಮತ್ತು ಇತರ ಪ್ರಾಣಿ ಗಳಿಗೆ ಅತ್ಯಂತ ಮಹತ್ವದ್ದಾಗಿರುವುದರಿಂದ ಅದು ಚಿಂತೆಯ ವಿಷಯವಾಗಿದೆ. ಇನ್ನು ಮುಂದಿನ ಅತ್ಯಂತ ಮುಖ್ಯವಾದ ವಿಷಯವೆಂದರೆ ಇಲೆಕ್ಟ್ರಿಕ್‌ ವಾಹನದ ಬ್ಯಾಟರಿಗಳನ್ನು ಭರಿತಗೊಳಿಸಲು (ಚಾರ್ಜ) ಬೇಕಾಗುವ ವಿದ್ಯುತ್‌ ಸರಬರಾಜು. ನಮ್ಮ ದೇಶದಲ್ಲಿ ಪೂರೈಕೆಯಾಗುವ ಒಟ್ಟು ವಿದ್ಯುತ್‌ ಸರಬರಾಜಿನಲ್ಲಿ ಸಾಧಾರಣವಾಗಿ ಶೇ. ೬೨ ರಷ್ಟು ವಿದ್ಯುತ್ತನ್ನು ಕಲ್ಲಿದ್ದಲನ್ನು ಬಳಸಿ ಉತ್ಪಾದಿಸಲಾಗುತ್ತದೆ. ಈ ಶಕ್ತಿಯ ಮೂಲವು ಸೀಮಿತವಾಗಿದೆ ಎಂಬ ಅಂಶದ ಹೊರತಾಗಿಯೂ ಇದರಲ್ಲಿ ಗಣಿಯಿಂದ ತೆಗೆಯುವುದರಿಂದ ಹಿಡಿದು ಅದರಿಂದ ವಿದ್ಯುತ್‌ ಉತ್ಪಾದಿಸುವವರೆಗೆ ವಾಯು ಮಾಲಿನ್ಯ ಕೂಡ ಅದೇ ರೀತಿಯಲ್ಲಿ ಸಂಭವಿಸುತ್ತದೆ. ಈ ಎಲ್ಲದರ ಸರಾಸರಿ ತೆಗೆದರೆ, ಇಲೆಕ್ಟ್ರಿಕ್‌ ವಾಹನಗಳು ಮಾಲಿನ್ಯಕ್ಕೆ ವಿವಿಧ ರೀತಿಯಲ್ಲಿ ಕೊಡುಗೆ ನೀಡುತ್ತಿವೆ. ಈ ಪ್ರಮಾಣವನ್ನು ನಾವು ಹೇಗೆ ನಿರ್ಧರಿಸಬಹುದೆಂದರೆ, ಪೆಟ್ರೋಲ ಅಥವಾ ಡಿಸೇಲ್‌ ಇಂಧನ ಗಳಿಂದ ನಡೆಯುವ ವಾಹನಗಳು ೧೦ ವರ್ಷಗಳಲ್ಲಿ ಸರಾಸರಿ ಎಷ್ಟು ಕಾರ್ಬನ್‌ ಬಿಡುಗಡೆ ಮಾಡುವುದೋ, ಅದರಲ್ಲಿ ಶೇ. ೪೦ ರಷ್ಟು ಹೊರಸೂಸುವಿಕೆಯನ್ನು ಇಲೆಕ್ಟ್ರಿಕ್‌ ವಾಹನಗಳು ನೀವು ಖರೀದಿಸುವಾಗಲೇ ಬಿಡುಗಡೆ ಮಾಡಿರುತ್ತದೆ. ಇನ್ನುಳಿದ ಶೇ. ೬೦ ರಷ್ಟು ಕಾರ್ಬನ ಹೊರಸೂಸುವಿಕೆ ಮತ್ತು ಮಾಲಿನ್ಯವು ಇಲೆಕ್ಟ್ರಿಕ್‌ ವಾಹನದ ಬ್ಯಾಟರಿಯನ್ನು ಚಾರ್ಜ ಮಾಡಲು ಅಗತ್ಯ ವಾದ ವಿದ್ಯುತ್ನ್ನು ಯಾವುದೇ ಖನಿಜಗಳನ್ನು ಸುಡದೆ ಅಥವಾ ಇಂಧನವನ್ನು ಸುಡದೆ ಜಲವಿದ್ಯುತ್‌ ಸ್ಥಾವರಗಳು ಅಥವಾ ಪರಮಾಣು ವಿದ್ಯುತ್‌ ಸ್ಥಾವರಗಳಂತಹ ಕಡಿಮೆ ಮಾಲಿನ್ಯಕಾರಿ ಅಥವಾ ಮಾಲಿನ್ಯಕರವಲ್ಲದ ಮೂಲಗಳಿಂದ ಉಪಯೋಗಿಸಿದಾಗ ನಿಲ್ಲಬಹುದು. ವಿದ್ಯುತ್‌ ಹೇರಳವಾಗಿ ಲಭ್ಯವಿದ್ದರೂ ಅದನ್ನು ತಯಾರಿಸುವ ನೈಸರ್ಗಿಕ ಸಂಪನ್ಮೂಲಗಳು ಸೀಮಿತವಾಗಿವೆ.

೩. ಇಲೆಕ್ಟ್ರಿಕ್‌ ವಾಹನಗಳು ಪರಿಸರಕ್ಕೆ ಪೂರಕವಲ್ಲ ಬ್ಯಾಟರಿ ತಯಾರಿಸಲು ಸಂಪೂರ್ಣ ಜಗತ್ತಿನ ವಿಜ್ಞಾನಿಗಳು ಲೀಥಿಯಂ ಬದಲಾಗಿ ಬೇರೆ ಪರ್ಯಾಯವನ್ನು ಸಂಶೋಧನೆ ನಡೆಸುತ್ತಿದ್ದಾರೆ. ತುರ್ತಾಗಿ ಇಲೆಕ್ಟ್ರಿಕ್‌ ವಾಹನಗಳು ದೇಶವನ್ನು ಇಂಧನ ಆಮದು ವೆಚ್ಚದಿಂದ ರಕ್ಷಿಸಬಹುದಾಗಿದೆ. ಹಾಗೆಯೇ ಅದಕ್ಕಾಗಿ ಇತರ ದೇಶಗಳನ್ನು ಅವಲಂಬಿಸುವ ಆವಶ್ಯಕತೆಯಿಲ್ಲ. ಇದನ್ನು ಹೊರತು ಪಡಿಸಿ ಹೆಚ್ಚುತ್ತಿರುವ ಇಂಧನ ಬೆಲೆಯಿಂದ ವೈಯಕ್ತಿಕವಾಗಿ ಇಲೆಕ್ಟ್ರಿಕ್‌ ವಾಹನಗಳ ಮಾಲೀಕರಿಗೆ ಸ್ವಲ್ಪ ಸಮಾಧಾನ ಸಿಗುತ್ತಿದೆ; ಆದರೆ ಈ ಎಲ್ಲ ಮಾಹಿತಿಗಳ ಕೊನೆ ಯಲ್ಲಿ ನಾನು ಹೇಳುವುದೇನೆಂದರೆ, ಈಗ ಲಭ್ಯವಿರುವ ಇಲೆಕ್ಟ್ರಿಕ್‌ ವಾಹನಗಳು ಪರಿಸರಕ್ಕೆ ನೀವು ತಿಳಿದಿರುವಷ್ಟು ಪೂರಕವಲ್ಲ.

– ಶ್ರೀ ಪಂಕಜ ಖಂಡೂ ರೆಪಾಳೆ, ಮಾಹಿತಿ ಮತ್ತು ತಂತ್ರಜ್ಞಾನ (ಹಾರ್ಡವೇರ) ಅಭಿಯಂತರು. (ಆಧಾರ: ಸಾಮಾಜಿಕ ಮಾಧ್ಯಮ)