|
ಲಾಹೋರ್ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿನ ಅಕ್ಬರ್ ರಾಮನೆಂಬ ಹಿಂದೂ ವ್ಯಕ್ತಿಯು ಕಥಿತ ಇಸ್ಲಾಂಗೆ ಆಗೌರವ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ ೧೧ ರಂದು ಅವನನ್ನು ಬಂಧಿಸಲಾಯಿತು. ಆ ಸಮಯದಲ್ಲಿ ಪೊಲೀಸರು, ಆಕ್ರೋಶಗೊಂಡ ಗುಂಪಿನಿಂದ ಅವನ ಜೀವಕ್ಕೆ ಅಪಾಯ ಇತ್ತು, ಅವನನ್ನ ಬಂಧಿಸಿ ಅವನ ಪ್ರಾಣ ಉಳಿಸಿದೆವು ಎಂದು ಹೇಳಿದರು.
भीड़ ने पीटा, जान बचाने को गाँव से भागा परिवार: Pak में ईशनिंदा के नाम पर हिन्दू युवक गिरफ्तार, शिक्षक की भी हुई थी हत्या#Blasphemy #Pakistan #HindusUnderAttackhttps://t.co/mOq659kVay
— ऑपइंडिया (@OpIndia_in) August 15, 2023
೧. ಈ ಘಟನೆ ಸಿಂಧಪ್ರಾಂತದಲ್ಲಿನ ರಹಿಮಯಾರ ಖಾನ ಇಲ್ಲಿಯದಾಗಿದ್ದು ಫೈಸಲ ಮುನೀರ್ ಎಂಬ ಮುಸಲ್ಮಾನನು ಪೊಲೀಸ ಠಾಣೆಗೆ ಬಂದು ಅಕ್ಬರ್ ರಾಮನ ವಿರುದ್ಧ ದೂರು ದಾಖಲಿಸಿದನು. ಅವನು, ರಾಮನು ಅವನ ವಾಹನ ದುರಸ್ತಿಗಾಗಿ ಅಂಗಡಿಗೆ ಬಂದು ಅಲ್ಲಿ ಇಸ್ಲಾಂ ಮತ್ತು ಮುಸಲ್ಮಾನರ ತೀರ್ಥಕ್ಷೇತ್ರಗಳ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದನು. ಅದಕ್ಕಾಗಿ ಮುನಿರನು ಇತರ ಇಬ್ಬರು ಸಾಕ್ಷಿಗಳ ಸಹಿತ ಅವನ ಜೊತೆಗೆ ಠಾಣೆಗೆ ಹೋಗಿದ್ದನು. ಇದರಿಂದ ಅಕ್ಬರ್ ರಾಮನ ವಿರುದ್ಧ ತಕ್ಷಣ ಧರ್ಮನಿಂದನೆಯ ಕಾನೂನಿನಡಿಯಲ್ಲಿ ದೂರು ದಾಖಲಿಸಲಾಗಿದೆ.
೨. ಪೊಲೀಸ ಅಧಿಕಾರಿ ಸಫದರ ಹುಸೇನ್ ಇವರು, ಅಕ್ಬರ್ ರಾಮ ಇವನನ್ನು ಬಂಧಿಸಲು ನಾವು ಅವನ ಮನೆಗೆ ಹೋಗಿರುವಾಗ, ಮನೆಯ ಹೊರಗೆ ಅನೇಕ ಜನರು ಸೇರಿದ್ದರು. ನಾವು ಪರಿಸ್ಥಿತಿ ಹತೋಟಿಗೆ ತಂದು ಅಕ್ಬರ್ ರಾಮನನ್ನು ವಶಕ್ಕೆ ಪಡೆದೆವು. ಆಕ್ರೋಶಗೊಂಡಿರುವ ಗುಂಪು ‘ರಾಮನನ್ನು ನಮಗೆ ಒಪ್ಪಿಸಿ’ ಎಂದು ಆಗ್ರಹಿಸುತ್ತಿದ್ದರು. ಸ್ಥಳೀಯ ಮಾಧ್ಯಮಗಳಿಂದ ದೊರೆತಿರುವ ಮಾಹಿತಿಯ ಪ್ರಕಾರ ರಾಮನ ಕುಟುಂಬದವರು ಗ್ರಾಮ ಬಿಟ್ಟು ಪಲಾಯನ ಮಾಡಿದ್ದಾರೆ.
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿ ಹಿಂದುಗಳ ಜೀವ ಎಷ್ಟು ಅಸುರಕ್ಷಿತವಾಗಿದೆ, ಇದರ ಕಲ್ಪನೆ ಪಾಕಿಸ್ತಾನಿ ಪೊಲೀಸರ ಈ ಹೇಳಿಕೆಯಿಂದ ತಿಳಿಯಬಹುದು. ಇದರ ಬಗ್ಗೆ ಉಪಾಯ ಹುಡುಕುವುದರಲ್ಲಿ ಭಾರತದಲ್ಲಿನ ಎಲ್ಲಾ ರಾಜಕಾರಣಿಗಳು ವಿಫಲವಾಗಿದ್ದು ಕೇವಲ ಹಿಂದೂ ರಾಷ್ಟ್ರದಲ್ಲಿಯೇ ಎಲ್ಲಾ ಕಡೆಯ ಹಿಂದುಗಳ ರಕ್ಷಣೆ ಆಗುವುದು, ಇದನ್ನು ತಿಳಿಯಿರಿ ! ಪಾಕಿಸ್ತಾನದಲ್ಲಿ ಧರ್ಮನಿಂದನೆಯ ಕಾನೂನಿನ ಅಡಿಯಲ್ಲಿ ಅಲ್ಲಿಯ ಬಹುಸಂಖ್ಯಾತ ಮುಸಲ್ಮಾನರು ಹಿಂದುಗಳ ಪ್ರಾಣತೆಗೆಯಲು ಕಾಯುತ್ತಿರುತ್ತಾರೆ. ಭಾರತದಲ್ಲಿ ಅವರು ಅಲ್ಪಸಂಖ್ಯಾತರಾಗಿದ್ದರು ಕೂಡ ಅವರು ಹಿಂದುತ್ವನಿಷ್ಠ ಕಮಲೇಶ ತಿವಾರಿ, ಕನೈಹ್ಯಾಲಾಲ್, ಡಾ. ಕೊಲ್ಹೆ ಇವರಂತವರನ್ನು ಕೂಡ ಇದೇ ಕಾರಣದಿಂದ ಹತ್ಯೆ ಮಾಡುತ್ತಾರೆ, ಈ ಪರಿಸ್ಥಿತಿ ಹಿಂದೂಗಳಿಗೆ ಲಜ್ಜಾಸ್ಪದ ! |