ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರತ 109 ಜಿಹಾದಿ ಭಯೋತ್ಪಾದಕರ ಪೈಕಿ 71 ಜನ ಪಾಕಿಸ್ತಾನಿಗಳು !

ಶ್ರೀನಗರ (ಜಮ್ಮು-ಕಾಶ್ಮೀರ) – ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿ 107 ಭಯೋತ್ಪಾದಕರು ಕಾರ್ಯನಿರತವಾಗಿದ್ದೂ, ಅವರಲ್ಲಿ 71 ಜನ ಪಾಕಿಸ್ತಾನಿಗಳಾಗಿದ್ದಾರೆ, ಉಳಿದ 38 ಜನ ಜಮ್ಮು-ಕಾಶ್ಮೀರದ ನಿವಾಸಿಗಳು ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ. ಕಳೆದ ಕೆಲವು ವರ್ಷಗಳಿಂದ ಸೇನೆ ನಡೆಸುತ್ತಿರುವ ಶೋಧ ಕಾರ್ಯಾಚರಣೆಯಲ್ಲಿ ನಡೆದ ಚಕಮಕಿಯಲ್ಲಿ ಹಲವು ಭಯೋತ್ಪಾದಕರು ಹತರಾಗಿದ್ದಾರೆ. ಕಳೆದ ವರ್ಷ 187 ಉಗ್ರರನ್ನು ಹತ್ಯೆ ಮಾಡಿದ್ದರೆ, ಈ ವರ್ಷ ಜುಲೈ 20 ರವರೆಗೆ 35 ಉಗ್ರರನ್ನು ಚಕಮಕಿಯಲ್ಲಿ ಹತ್ಯೆ ಮಾಡಲಾಗಿದೆ.

ಕಳೆದ 5 ವರ್ಷಗಳಲ್ಲಿ ಹತರಾದ ಭಯೋತ್ಪಾದಕರ ಸಂಖ್ಯೆ !

ವರ್ಷ

ಹತರಾಗಿದ್ದ ಭಯೋತ್ಪಾದಕರು

2018 257
2019 157
2020 221
2021 180
2022 187
2023 35

ಶರಣಾಗಿದ್ದ ಭಯೋತ್ಪಾದಕರ ಸಂಖ್ಯೆ ಏಕೆ ಕಡಿಮೆ ?

ಜಮ್ಮು – ಕಾಶ್ಮೀರ ಪೊಲೀಸರು ಮತ್ತು ಸೇನಾ ಅಧಿಕಾರಿಗಳು, ಸ್ಥಳಿಯ ನಿವಾಸಿಗಳಲ್ಲಿ ಯಾರು ‘ಭಯೋತ್ಪಾದಕರು’ ಎಂದು ಭಯೋತ್ಪಾದಕ ಸಂಘಟನೆಗಳಿಗೆ ಸೇರುತ್ತಾರೆಯೋ ಅವರಲ್ಲಿ ಕೆಲವರಷ್ಟೇ ಸೇನೆಗೆ ಶರಣಾಗುತ್ತಾರೆ. ಕಳೆದ 5 ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ, ಈ ಸಂಖ್ಯೆ ಕೇವಲ 13 ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು, ಯಾವಾಗ ಕಾಶ್ಮೀರಿ ಯುವಕ ನಾಪತ್ತೆಯಾದಾಗ, ಪೊಲೀಸರು ಮತ್ತು ಆನತ ಕುಟುಂಬವು ಅವನನ್ನು ಹುಡುಕಲು ಪ್ರಾರಂಭಿಸುತ್ತಾರೆ ಎಂದು ಹೇಳಿದರು. ಸುಮಾರು 3-4 ವಾರಗಳ ನಂತರ, ಭಯೋತ್ಪಾದಕ ಸಂಘಟನೆಗಳು ಆ ಯುವಕರ ಕೈಯಲ್ಲಿ ಶಸ್ತ್ರಾಸ್ತ್ರಗಳು ಇರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತವೆ. ಆದ್ದರಿಂದಲೇ ಭದ್ರತಾ ವ್ಯವಸ್ಥೆಯು ಆ ಯುವಕರನ್ನು ‘ಭಯೋತ್ಪಾದಕರು’ ಎಂದು ಘೋಷಿಸುತ್ತದೆ.

ಇದನ್ನು ಎರಡು ಅಸ್ತ್ರಗಳನ್ನಾಗಿ ಭಯೋತ್ಪಾದಕರು ಲಾಭ ಮಾಡಿಕೊಳ್ಳುತ್ತಾರೆ. ಯುವಕರು ಮತ್ತೆ ಮುಖ್ಯವಾಹಿನಿಗೆ ಪ್ರವೇಶಿಸಲು ಬಯಸಿದರೆ, ಶಸ್ತ್ರಗಳೊಂದಿಗೆ ಅವರ ಚಿತ್ರಗಳನ್ನು ಆದ್ಯತೆಯಾಗಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತದೆ. ಹೀಗಾಗಿ ಅವರನ್ನು ಭಯೋತ್ಪಾದಕರು ಎಂದು ಸೇನೆ ಘೋಷಿಸುತ್ತದೆ. ಸ್ವಾಭಾವಿಕವಾಗಿ ಅಂತಹ ಯುವಕರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುವುದಿಲ್ಲ. ಅವರನ್ನು ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅನಿವಾರ್ಯ ಪಡಿಸಲಾಗುತ್ತದೆ. ಇದಕ್ಕಾಗಿಯೇ ಕಳೆದ 5 ವರ್ಷಗಳಲ್ಲಿ ಕೆಲವೇ ಕೆಲವು ಯುವಕರು ಭಯೋತ್ಪಾದಕ ಸಂಘಟನೆಗಳನ್ನು ತೊರೆದು ಹಿಂತಿರುಗಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ನೇಮಕಾತಿಯ ವಾರ್ಷಿಕ ಅಂಕಿಸಂಖ್ಯೆಗಳು !

ವರ್ಷ

ಭಯೋತ್ಪಾದಕರ ಸಂಖ್ಯೆ

2018 187
2019 121
2020 181
2021 142
2022 91

ಚಕಮಕಿಯಲ್ಲಿ ಹತರಾದ ಭಯೋತ್ಪಾದಕ ಸಂಘಟನೆ ಸಹಿತ ಸಂಖ್ಯೆ !

ಭಯೋತ್ಪಾಕ ಸಂಘಟನೆ

ಹತರಾದ ಭಯೋತ್ಪಾದಕರು

ಲಷ್ಕರ-ಎ-ತೊಯಬಾ 5
ಹಿಜಬಲ್‌ ಮುಜಾಹಿದ್ದೀನ 1
ಅಲ್‌-ಬದರ್‌ 1
ಜೈಶ್‌-ಎ-ಮಹಂಮ್ಮದ 1
ಗುರುತಿಲ್ಲದ 27
‌ಒಟ್ಟು 35

ಜಮ್ಮು-ಕಾಶ್ಮೀರದಲ್ಲಿ ಹೆಚ್ಚುತ್ತಿರುವ ‘ಹೈಬ್ರಿಡ್’ ಭಯೋತ್ಪಾದಕರ ಬಿಕ್ಕಟ್ಟು !

ಭದ್ರತಾಪಡೆಯ ಓರ್ವ ಹಿರಿಯ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಪ್ರಸ್ತುತ 109 ಭಯೋತ್ಪಾದಕರು ರಾಜ್ಯದಲ್ಲಿ ಸಕ್ರಿಯರಾಗಿದ್ದಾರೆ. ಅವರಲ್ಲಿ 38 ಸ್ಥಳೀಯರು ಮತ್ತು 71 ವಿದೇಶಿ ಭಯೋತ್ಪಾದಕರು ಇದ್ದಾರೆ. ಇತ್ತೀಚೆಗೆ ನುಸುಳುವಿಕೆಯ ಯಾವುದೇ ದೊಡ್ಡ ಘಟನೆ ನಡೆದಿಲ್ಲ. ಪ್ರಸ್ತುತ ಈ ಭಯೋತ್ಪಾದಕರು ಎಲ್ಲಿ ಅಡಗಿದ್ದಾರೆಂದು ಶೋಧಿಸಲಾಗುತ್ತಿದೆ; ಆದರೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ‘ಹೈಬ್ರಿಡ್’ ಭಯೋತ್ಪಾದಕರನ್ನು ಸಿದ್ಧಪಡಿಸುತ್ತಿವೆ. ‘ಹೈಬ್ರಿಡ್’ ಭಯೋತ್ಪಾದಕರು ಎಂದರೆ ಭೂಗತವಾಗಿರುವ ಜಿಹಾದಿಗಳು. ಅವರು ಬಹಿರಂಗ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗುವುದಿಲ್ಲವಾದ್ದರಿಂದ, ಸ್ಥಳೀಯ ಜನರಿಗೆ ಮತ್ತು ಪೊಲೀಸರಿಗೆ ಅವರ ಬಗ್ಗೆ ಸಂದೇಹ ಬರುವುದಿಲ್ಲ.

 

ಸಂಪಾದಕೀಯ ನಿಲುವು

ಪಾಕಿಸ್ತಾನ ಜಿಹಾದಿ ಭಯೋತ್ಪಾದನೆಯ ಜನ್ಮಸ್ಥಳವಾಗಿದೆ. ಭಾರತೀಯರಿಗೆ ಮಾರಕವಾಗಿರುವ ಈ ಜಿಹಾದಿಗಳನ್ನು ನಾಶಮಾಡಲು ಭಾರತ ಅದರ ಸೃಷ್ಟಿಕರ್ತ ಪಾಕಿಸ್ತಾನವನ್ನು ಯಾವಾಗ ನಾಶಮಾಡಲಿದೆ ?