ಪುಣೆಯಲ್ಲಿ ಹಿಂದೂ ಹುಡುಗಿಯರನ್ನು ‘ಲವ್ ಜಿಹಾದ್’ನ ಬಲೆಯಲ್ಲಿ ಸೆಳೆದು ಅವರಿಂದ ಮಾದಕ ಪದಾರ್ಥಗಳನ್ನು ಮಾರಾಟ ಮಾಡಿಸುತ್ತಿದ್ದ ಮುಸಲ್ಮಾನನ ಬಂಧನ !

  • 2 ಸಾವಿರ ಯುವತಿಯರನ್ನು ‘ಲವ್ ಜಿಹಾದ್’ಗೆ ಸೆಳೆಯುವ ಸಂಚು ಬಯಲು !

  • ಲವ್ ಜಿಹಾದ್‌ನಿಂದ ಹಿಂದೂ ಯುವತಿಯರ ಜೀವನ ಯಾವ ರೀತಿ ನಾಶವಾಗುತ್ತಿದೆ ಎನ್ನುವುದು ಇದರಿಂದ ಅರಿವಾಗುತ್ತದೆ !

ಪುಣೆ, ಆಗಸ್ಟ್ 12 (ಸುದ್ದಿ) – ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಹಿಂದೂ ಯುವತಿಯರನ್ನು ‘ಲವ್ ಜಿಹಾದ್’ನ ಬಲೆಗೆ ಸೆಳೆದು ಅವರಿಂದ ಮಾದಕ ಪದಾರ್ಥಗಳನ್ನು ಮಾರಾಟ ಮಾಡಿಸುತ್ತಿರುವ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಹಿಂದೂ ಸಂತ್ರಸ್ತೆ ವಿಶ್ರಾಂತವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಪ್ರಕರಣದಲ್ಲಿ ಮತಾಂಧ ಅಯಾನ್ ನನ್ನು ಟಿಂಗರೆನಗರದಿಂದ ಬಂಧಿಸಲಾಗಿದೆ. ಇದರಲ್ಲಿ ಅಯಾನ್ ಮತ್ತು ಅವನ ಅಣ್ಣ ಬಿಲಾಲ್ ಇನಾಮದಾರ್ ಹಾಗೆಯೇ ಸಂಪೂರ್ಣ ಕುಟುಂಬ ಭಾಗಿಯಾಗಿರುವ ಸಂಶಯವಿದೆ. ಈ ಮತಾಂಧರು 2 ಸಾವಿರ ಹುಡುಗಿಯರನ್ನು ಲವ್ ಜಿಹಾದ್ ನಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಪ್ರಕರಣವನ್ನು ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ (ಮತಾಂಧರಿಗೆ) ಗಲ್ಲುಶಿಕ್ಷೆ ವಿಧಿಸಬೇಕು ಎಂದು ಸಂತ್ರಸ್ತೆಯ ಕುಟುಂಬ ಆಗ್ರಹಿಸಿದೆ.

ಬಿಲಾಲನು ಮಾದಕ ಪದಾರ್ಥಗಳ ಮಾರಾಟದ ದೊಡ್ಡ ಜಾಲವನ್ನು ಹೊಂದಿದ್ದು, ಆತನೇ ಇದರ ಪ್ರಮುಖ ಸೂತ್ರಧಾರನಾಗಿದ್ದಾನೆ. ಅಯಾನ್ ಹಿಂದೂ ಹುಡುಗಿಯರಿಗೆ ಆಮಿಷ ತೋರಿಸಿ ‘ಲವ್ ಜಿಹಾದ್’ನ ಬಲೆಗೆ ಸೆಳೆಯುತ್ತಿದ್ದ. ಅಯಾನ್ ತನ್ನ ಕೈಯಲ್ಲಿ ತ್ರಿಶೂಲ ಹಚ್ಚೆ ಹಾಕಿಸಿಕೊಂಡಿದ್ದ ಮತ್ತು ಕುತ್ತಿಗೆಯಲ್ಲಿ ರುದ್ರಾಕ್ಷಿಯನ್ನು ಧರಿಸಿದ್ದ. ಈತ ತನ್ನ ನೈಜ ಗುರುತನ್ನು ಮರೆಮಾಚಿ ಹಿಂದೂ ಎಂದು ಬಿಂಬಿಸಿ ಹಿಂದೂ ಹೆಣ್ಣು ಮಕ್ಕಳನ್ನು ವಂಚಿಸುತ್ತಿದ್ದನು. ಬಿಲಾಲ್ ಮತ್ತು ಅಯಾನ್ ವಂಚನೆಗೊಳಗಾದ ಹುಡುಗಿಯರನ್ನು ಬಲವಂತದಿಂದ ವಿವಿಧೆಡೆ ಮಾದಕ ಪದಾರ್ಥಗಳ ಮಾರಾಟ ಮಾಡಲು ಅನಿವಾರ್ಯಗೊಳಿಸುತ್ತಿದ್ದರು. ಪುಣೆಯ ಕೋರೆಗಾಂವ್ ಪಾರ್ಕ್‌ನಲ್ಲಿರುವ ಕೆಲವು ‘ಪಬ್’ಗಳಲ್ಲಿ ಸಂತ್ರಸ್ತ ಹಿಂದೂ ಹುಡುಗಿಯರ ಮೂಲಕ ಮಾದಕ ಪದಾರ್ಥಗಳ ಮಾರಾಟ ಮಾಡಲಾಗುತ್ತಿದೆ ಎಂಬ ಸಂಶಯವೂ ವ್ಯಕ್ತವಾಗುತ್ತಿದೆ.