ಉತ್ತರ ಪ್ರದೇಶದ ಕಾನಪುರ ಕ್ರೈಸ್ತ ಮಿಷನರಿಗಳ ಮತಾಂತರ ಚಟುವಟಿಕೆಗಳ ತಾಣ !

ಕಳೆದ ಕೆಲವು ವರ್ಷದಿಂದ ನೂರಾರು ಹಿಂದು ಕುಟುಂಬಗಳ ಮತಾಂತರ !

ಕಾನಪುರ (ಉತ್ತರಪ್ರದೇಶ) – ನಗರದಲ್ಲಿ ಪ್ರತಿ ತಿಂಗಳು ಮತಾಂತರದ ಒಂದಾದರೂ ಪ್ರಕರಣ ಬೆಳಕಿಗೆ ಬರುತ್ತದೆ. ನಗರವು ಮತಾಂತರದ ನೆಲೆಯಾಗಿದೆ. ಕ್ರೈಸ್ತ ಮಿಷನರಿಗಳು ಇಲ್ಲಿಯ ಗುಡಿಸಿಲಿಗೆ ಹೋಗಿ ಹಿಂದುಗಳಿಗೆ ಚಿಕಿತ್ಸೆ, ಹಣ, ವಿವಾಹ, ನೌಕರಿ, ಕೆಲಸ ಮುಂತಾದರ ಆಮಿಷ ತೋರಿಸಿ ಅವರನ್ನು ಮತಾಂತರಿಸುತ್ತಿದ್ದಾರೆ. ಇಂತಹ ಘಟನೆಗಳು ಬೆಳಕಿಗೆ ಬಂದ ನಂತರ ಪೊಲೀಸರು ಸಂಬಂಧಪಟ್ಟ ಮಿಷೀನರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಕೆಲವರನ್ನು ಬಂದಿಸಲಾಗಿದೆ; ಆದರೆ ಇದರ ಹಿಂದಿನ ಸೂತ್ರಧಾರದವರೆಗೆ ತಲುಪುವುದು ಕಠಿಣವಾಗಿದೆ. ಮಿಶನರಿಗಳಿಗೆ ವಿದೇಶದಿಂದ ಹಣ ಪೂರೈಕೆ ಆಗುತ್ತಿರುವುದರ ಸಾಕ್ಷಿಗಳು ಕೂಡ ಪೊಲೀಸರಿಗೆ ದೊರೆತಿದೆ. ನಗರದಲ್ಲಿನ ಘಾಟಮಪುರ, ಚಕೆರಿ, ರಾವತಪುರ, ಕರ್ನಲಗಂಜ ಮತ್ತು ಈಗ ಮುನ್ನಿಪುರವ ಇಲ್ಲಿಯ ಮತಾಂತರದ ಘಟನೆ ಬೆಳಕಿಗೆ ಬಂದಿದೆ.

(ಸೌಜನ್ಯ – ABP NEWS)

೧. ಮುನ್ನಿಪುರವ : ಇತ್ತೀಚಿಗೆ ಬೆಳಕಿಗೆ ಬಂದಿರುವ ಕಾನಪುರದ ನವಾಬಗಂಜ ಇಲ್ಲಿಯ ಮುನ್ನಿಪುರವ ಪ್ರದೇಶದಲ್ಲಿ ಮತಾಂತರದ ಪ್ರಕರಣದಲ್ಲಿ ನೂರಾರು ಹಿಂದೂ ಕುಟುಂಬಗಳಿಗೆ ಆಮಿಷ ತೋರಿಸಿ ಮತಾಂತರ ಮಾಡಲಾಗಿದೆ. ಈ ಕುರಿತು ಪ್ರಾರ್ಥನಾ ಸಭೆಯಲ್ಲಿ ಸಹಭಾಗಿ ಆಗಲು ಒತ್ತಡ ಹೇರಿದ ನಂತರ ಒಂದು ಮತಾಂತರವಾದ. ಕುಟುಂಬ ಮಿಶನರಿಯರನ್ನು ನಿಷೇಧಿಸುತ್ತಾ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಪೊಲೀಸ್ ಇವರಿಗೆ ಮಾಹಿತಿ ನೀಡಿದರು. ಬಬಲಿದೇವಿ ಎಂಬ ಚೋಟುವಿನ ಪತ್ನಿಯು ಧೈರ್ಯ ತೋರಿಸಿ ಪೊಲೀಸರಿಗೆ ದೂರು ಕೂಡ ನೀಡಿದ್ದಾಳೆ. ಇದರ ನಂತರ ಪೊಲೀಸರು ಆಗಸ್ಟ್ ೧೧ ರಂದು ಕ್ರಮ ಕೈಗೊಳ್ಳುತ್ತಾ ಮ್ಯಾಕ್ಲೋನ್ ಸಿಂಹ ಮತ್ತು ಮ್ಯಾರಿಸ ಸಿಂಹ ಇವರ ವಿರುದ್ಧ ಮತಾಂತರ ವಿರೋಧಿ ಕಾನೂನಿನ ಕಲಂ ಅಡಿಯಲ್ಲಿ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ. ಸಂತ್ರಸ್ತ ಕುಟುಂಬದವರು, ಮತಾಂತರ ಗೊಳ್ಳುವವರಿಗೆ ೧೦ ರಿಂದ ೩೦ ಸಾವಿರ ರೂಪಾಯಿ ನೀಡುತ್ತಾರೆ. ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ ಹಾಗೂ ಅವಿವಾಹಿತರ ವಿವಾಹ ಮಾಡಿಸುತ್ತಾರೆ. ಆದ್ದರಿಂದ ಅಸಹಾಯಕ ಹಿಂದೂ ಕುಟುಂಬಗಳು ಮತಾಂತರವಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸ ಅಧಿಕಾರಿ ಅಕಮಲ ಖಾನ್ ಇವರು, ಕಳೆದ ೪ – ೫ ವರ್ಷಗಳಲ್ಲಿ ೨೦೦ ಹಿಂದೂ ಕುಟುಂಬಗಳು ಕ್ರೈಸ್ತರನ್ನಾಗಿ ಮತಾಂತರಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ವಿಷ್ಣುಪುರಿಯಲ್ಲಿ ‘ಸಮೃದ್ಧ ಚರ್ಚ್’ ಕಟ್ಟಲಾಗಿದೆ. ಇಲ್ಲಿ ಪ್ರಾರ್ಥನಾ ಸಭೆಯ ಆಯೋಜನೆ ಮಾಡಿ ಜನರಿಗೆ ಚಿಕಿತ್ಸೆ, ಹಣ, ವಿವಾಹ, ನೌಕರಿ, ವ್ಯವಸಾಯ ಮುಂತಾದ ಆಮಿಷ ತೋರಿಸಿ ಅವರನ್ನು ಮತಾಂತರಗೊಳಿಸುತ್ತಾರೆ.

೨. ಘಟನಪುರ : ಘಾಟನಪುರದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ೧೫ ಕ್ಕಿಂತಲೂ ಹೆಚ್ಚಿನ ಚರ್ಚಗಳನ್ನು ಕಟ್ಟಲಾಗಿದೆ. ಈ ಪ್ರದೇಶದಲ್ಲಿ ನೂರಾರು ಹಿಂದೂ ಕುಟುಂಬಗಳ ಮತಾಂತರವಾಗಿದೆ. ಆರೋಪಿ ಕ್ರೈಸ್ತರಿಗೆ ಬಂಧಿಸಿ ಜಾಮೀನಿನ ಮೇಲೆ ಹೊರ ಬಂದ ನಂತರ ಮತ್ತೆ ಮತಾಂತರದ ಕಾರ್ಯ ಮುಂದುವರಿಸುತ್ತಾರೆ.

೩. ಶ್ಯಾಮನಗರ : ಶಾಮನಗರ ಪ್ರದೇಶದ ಅಭಿಜಿತ್ ಮತ್ತು ರಜತ ಜಿಪ್ಸಂ ಈ ಸೂತ್ರದಾರರನ್ನು ಬಂಧಿಸಲಾಗಿದೆ. ಇದರಲ್ಲಿನ ಸೂತ್ರದಾರ ರಜತ್ ಜಿಪ್ಸಂ ಇವನು ದಕ್ಷಿಣ ಕೋರಿಯಾದ ನಾಗರಿಕನಾಗಿದ್ದಾನೆ.

೪. ರಾವತಪುರ : ನಗರದಲ್ಲಿನ ರಾವತಪುರ. ಪ್ರದೇಶದಲ್ಲಿನ ಥಾರು ವಸತಿಯಲ್ಲಿ ವಾಸವಾಗಿರುವ ‘ನೀರಜ’ ಎಂಬ ಯುವಕ ಮಧ್ಯಪಾನ ಮಾಡುತ್ತಿರುವುದರಿಂದ ಅವನ ಮೂತ್ರಪಿಂಡ ಮತ್ತು ಯಕೃತ ನಿಷ್ಕ್ರಿಯವಾಗಿದ್ದವು. ಅದರ ನಂತರ ಈ ಪ್ರದೇಶದಲ್ಲಿ ಪಂಜಾಬದಿಂದ ಬಂದಿರುವುದೆಂದು ಹೇಳಿ ಒಬ್ಬ ಕ್ರೈಸ್ತ ಮಿಶಿನರಿ ರೋಗಿಗಳ ಮಾಹಿತಿ ಕಲೆ ಹಾಕಿದನು. ಇವರೆಲ್ಲರಿಗೆ ರೋಗ ವಾಸಿ ಮಾಡುವುದು ಎಂದು ಆಮಿಷ ತೋರಿಸುತ್ತಾ ಅಲ್ಲಿ ಪ್ರಾರ್ಥನಾಸಭೆ ಆಯೋಜಿಸಲಾಗುತ್ತಿದ್ದವು. ಸಭೆಗೆ ನೂರಾರು ಹಿಂದೂಗಳು ಉಪಸ್ಥಿತರಾಗುತ್ತಿದ್ದರು. ಪೊಲೀಸರಿಗೆ ಇದರ ಮಾಹಿತಿ ದೊರೆಯುತ್ತಲೇ ಎಲ್ಲಾ ಮಿಷಿನರಿ ಅಲ್ಲಿಂದ ಓಡಿ ಹೋದರು.

೫. ಕರ್ನಲಗಂಜ : ಕರ್ನಲಗಂಜ ಪ್ರದೇಶದಲ್ಲಿರುವ ಚಿನ್ನೀಗಂಜದ ‘ಎಪಿ ಫ್ಯಾನಿ ಶಾಲೆ’ಯ ಪರಿಸರದಲ್ಲಿ ಒಂದು ತಿಂಗಳಿಂದ ಪ್ರಾರ್ಥನಾ ಸಭೆ ಆಯೋಜಿಸಲಾಗುತ್ತಿತ್ತು. ಇದಕ್ಕೇ ನೂರಾರು ಹಿಂದುಗಳು ಉಪಸ್ಥಿತರಿದ್ದರು. ಅವರಿಗೆ ವಿವಿಧ ರೀತಿಯ ಆಮಿಷ ತೋರಿಸಿ ಮತಾಂತರಗೊಳಿಸುವ ಪ್ರಯತ್ನ ನಡೆಯುತ್ತಿತ್ತು. ಭಜರಂಗದಳ ಮತ್ತು ಇತರ ಹಿಂದುತ್ವನಿಷ್ಟ ಸಂಘಟನೆಗಳಿಗೆ ಇದರ ಮಾಹಿತಿ ದೊರೆಯುತ್ತಲೇ ಅವರು ಇದನ್ನು ವಿರೋಧಿಸಿದರು. ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುತ್ತಾ ದೂರು ದಾಖಲಿಸಿಕೊಂಡರು ಮತ್ತು ಪಾದ್ರಿ ಅಮಿತ್ ಲಯನ್ ಇವನ ಜೊತೆಗೆ ಇತರ ಒಬ್ಬ ಮಿಷಿನರಿಯನ್ನು ಬಂಧಿಸಿದರು.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಯಲ್ಲಿದ್ದರೂ ಕೂಡ ಈ ರೀತಿ ಹಿಂದೂಗಳನ್ನು ಹಾಡು ಹಗಲೇ ಮತಾಂತರಗೊಳಿಸುವುದು ಎಂದರೆ ಕ್ರೈಸ್ತ ಮಿಷನರಿಗಳಿಗೆ ಕಾನೂನಿನ ಭಯ ಉಳಿದಿಲ್ಲ ಇದೆ ಇದರಿಂದ ಸ್ಪಷ್ಟವಾಗುತ್ತದೆ. ಈ ಸ್ಥಿತಿ ಉತ್ತರಪ್ರದೇಶದ ಸರಕಾರಕ್ಕೆ ಲಚ್ಚಾಸ್ಪದ !

ಕಾನುಪುರದಂತಹ ಸಮೃದ್ಧ ನಗರದಲ್ಲಿ ಕ್ರೈಸ್ತ ಮಿಶಷನರಿಗಳಿಂದ ಹೆಚ್ಚುತ್ತಿರುವ ಚಟುವಟಿಕೆ ಹಾಗೂ ಗ್ರಾಮೀಣ ಭಾರತದಲ್ಲಿ ಅವರ ಕಾರ್ಯ ಯಾವ ಹಂತದವರೆಗೆ ತಲುಪಿದೆ ಇದರ ಯೋಚನೆ ಮಾಡದೆ ಇರುವುದೇ ಒಳಿತು ! ಈಗ ಇದಕ್ಕೆ ಹಿಂದೂ ರಾಷ್ಟ್ರವೇ ಏಕೈಕ ಪರ್ಯಾಯವಾಗಿದೆ, ಇದನ್ನು ತಿಳಿದುಕೊಳ್ಳಿ !

ಕಾನಪುರ ಇದು ಉತ್ತರ ಪ್ರದೇಶದಲ್ಲಿನ ಸಮೃದ್ಧ ನಗರಗಳಲ್ಲಿ ಒಂದು ಮಹತ್ವದ ನಗರವಾಗಿದೆ. ಇಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳು ಮತ್ತು ವಿಶ್ವ ಪ್ರಸಿದ್ಧ ‘ಐಐಟಿ ಕಾನಪುರ’ ಇದ್ದರೂ ಕೂಡ ಕ್ರೈಸ್ತ ಮಿಷೀನರಿ ಹಿಂದುಗಳ ಅಸಹಾಯಕತೆಯ ದುರುಪಯೋಗ ಮಾಡಿಕೊಳ್ಳುತ್ತಾರೆ. ಇದರಿಂದ ಜನರ ಸುರಕ್ಷತೆಗೆ ಸಮೃದ್ಧಿ ಮತ್ತು ಶಿಕ್ಷಣ ಇದರ ಎಳ್ಳಷ್ಟು ಸಂಬಂಧ ಇಲ್ಲ, ವಿಕಾಸದ ಜೊತೆಗೆ ಹಿಂದೂಗಳ ರಕ್ಷಣೆಯಾಗುವುದು ಇದು ಅತ್ಯಂತ ಅವಶ್ಯಕವಾಗಿದೆ !