ಮಥುರಾದಲ್ಲಿನ ಬಾಂಕೇ ಬಿಹಾರಿಜಿ ಮಹಾರಾಜ ದೇವಸ್ಥಾನದ ಭೂಮಿಯಲ್ಲಿ ಮುಸಲ್ಮಾನರ ಕಾನೂನಬಾಹಿರ ಸ್ಮಶಾನ ಭೂಮಿ !

  • ಅಲಹಾಬಾದ್ ಉಚ್ಚ ನ್ಯಾಯಾಲಯವು ತಹಸಿಳದಾರರಿಗೆ ಉತ್ತರ ನೀಡುವ ಆದೇಶ !

  • ಭೂಮಿಯ ಮಾಲಿಕತ್ವವನ್ನು ಬದಲಾಯಿಸುವುದಕ್ಕೆ ಕಂದಾಯ ಇಲಾಖೆಯ ನಿಲುವು ಅನುಮಾನಾಸ್ಪದ !

ಪ್ರಯಾಗರಾಜ (ಉತ್ತರ ಪ್ರದೇಶ) – ರಾಜ್ಯದಲ್ಲಿನ ಮಥುರಾ ಜಿಲ್ಲೆಯಲ್ಲಿರುವ ಶಹಪುರ್ ಗ್ರಾಮದಲ್ಲಿನ ‘ಬಾಂಕೇ ಬಿಹಾರಿಜಿ ಮಹಾರಾಜ ದೇವಸ್ಥಾನ’ದ ಮಾಲೀಕತ್ವದ ಭೂಮಿಯಲ್ಲಿ ಮುಸಲ್ಮಾನರು ಕಾನೂನ ಬಾಹಿರವಾಗಿ ‘ಕಬ್ರ(ಸ್ಮಶಾನ ಭೂಮಿ) ಕಟ್ಟಿರುವ ಪ್ರಕರಣದ ವಿರುದ್ಧ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಸೌರಭ ಶ್ರೀವಾಸ್ತವ್ ಇವರು ಸಂಬಂಧಪಟ್ಟ ತಹಶೀಲದಾರ್ ಗೆ ಈ ಕುರಿತು ನ್ಯಾಯಾಲಯಕ್ಕೆ ಹಾಜರಾಗಿ ಉತ್ತರ ನೀಡುವ ಆದೇಶ ನೀಡಿದೆ. ಕಂದಾಯ ಇಲಾಖೆಯ ಅಧಿಕಾರಿಗಳಿಂದ ಈ ರೀತಿಯ ಬದಲಾವಣೆ ಹೇಗೆ ನಡೆಯುತ್ತದೆ, ಇದನ್ನು ತಹಸೀಲದಾರರು ಹೇಳಬೇಕಾಗಿದೆ. ಶ್ರೀ ಬಿಹಾರಿಜಿ ಸೇವಾ ನ್ಯಾಸವು ದಾಖಲಿಸಲಾಗಿರುವ ಅರ್ಜಿಯಲ್ಲಿ ಪುರಾತನ ಕಾಲದಿಂದ ಈ ಭೂಮಿ ‘ಬಾಂಕೇ ಬಿಹಾರಿಜಿ ಮಹಾರಾಜ್ ದೇವಸ್ಥಾನ’ದ ಹೆಸರಿನಲ್ಲಿ ನೋಂದಣಿಯಾಗಿದೆ. ೨೦೦೪ ರಲ್ಲಿ ಭೋಲಾ ಪಠಾಣ ಹೆಸರಿನ ವ್ಯಕ್ತಿಯು ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸೇರಿಕೊಂಡು ಈ ಭೂಮಿಯನ್ನು ಕಾನೂನ ಬಾಹಿರವಾಗಿ ಸ್ಮಶಾನ ಭೂಮಿಯ ಹೆಸರಿನಲ್ಲಿ ನೋಂದಾಯಿಸಿದ್ದಾನೆ.

ಇದರ ನಂತರ ಈ ಪ್ರಕರಣ ವಕ್ಫ್ ಬೋರ್ಡ್ ವರೆಗೆ ಹೋಯಿತು. (ದೇವಸ್ಥಾನದ ಭೂಮಿ ಇರುವಾಗ ವಕ್ಫ್ ಬೋರ್ಡ್ ಸಂಬಂಧ ಹೇಗೆ ಬರುತ್ತದೆ ? ಈಗ ಪ್ರಕರಣ ವಕ್ಫ್ ಬೋರ್ಡ್ ನ ನಿಲುವು ಅನುಮಾನಾಸ್ಪದ ವಾಗಿದ್ದರಿಂದ ಇದರ ಬಗ್ಗೆಯೂ ಸಮೀಕ್ಷೆ ನಡೆಯುವುದು ಅವಶ್ಯಕವಾಗಿದೆ ! – ಸಂಪಾದಕರು) ಇದರ ನಂತರ ೭ ಸದಸ್ಯ ಸಮಿತಿ ರಚಿಸಿ ಈ ಪ್ರಕರಣದ ತನಿಖೆ ನಡೆಯಿತು. ಇದರಲ್ಲಿ ಕಾನೂನ ಬಾಹಿರವಾಗಿ ಬದಲಾವಣೆ ಆಗಿರುವುದು ಬೆಳಕಿಗೆ ಬಂದ ನಂತರ ಕೂಡ ದೇವಸ್ಥಾನದ ನ್ಯಾಸಕ್ಕೆ ಈ ಭೂಮಿಯ ಮಾಲಿಕತ್ವದ ಹಕ್ಕು ದೊರೆಯಲಿಲ್ಲ. ಆದ್ದರಿಂದ ನ್ಯಾಯಾಲಯವು ನ್ಯಾಸಕ್ಕೆ ನ್ಯಾಯ ಕೊಡಿಸಬೇಕು ಎಂದು ಅರ್ಜಿದಾರರು ಬೇಡಿಕೆ ಸಲ್ಲಿಸಿದ್ದಾರೆ.

ಸಂಪಾದಕೀಯ ನಿಲುವು

ಇದು ‘ಲ್ಯಾಂಡ್ ಜಿಹಾದ’ನ ಘಟನೆಯಾಗಿದ್ದು ಮತಾಂಧ ಮುಸಲ್ಮಾನರು ಮತ್ತು ಅದರ ವಕ್ಫ್ ಬೋರ್ಡ್ ಭ್ರಷ್ಟ ಸರಕಾರಿ ಅಧಿಕಾರಿಗಳ ಸಹಾಯದಿಂದ ಯಾವ ರೀತಿ ಹಿಂದುಗಳ ಭೂಮಿಯನ್ನು ನುಂಗುತ್ತಿದ್ದಾರೆ, ಇದು ಈ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ. ಲ್ಯಾಂಡ್ ಜಿಹಾದಿನ ಭೀಕರತೆಯನ್ನು ಆರಿತು ಈಗ ಕೇಂದ್ರ ಸರಕಾರವೇ ಅದರ ಮೇಲೆ ಅಂಕುಶವಿಡಲು ದೇಶದಾದ್ಯಂತ ಕಠಿಣ ಕಾನೂನು ರೂಪಿಸುವುದು ಅವಶ್ಯಕವಾಗಿದೆ !