|
ಮುಂಬಯಿ, ಆಗಸ್ಟ್ ೧೦, (ವಾರ್ತೆ) – ಆಜಾದ ಮೈದಾನದಲ್ಲಿ ಆಗಸ್ಟ್ ೧೧, ೨೦೧೨ ರಲ್ಲಿ ಮತಾಂಧ ಮುಸಲ್ಮಾನರು ನಡೆಸಿದ ಪೂರ್ವಯೋಜಿತ ಗಲಭೆಗೆ ಆಗಸ್ಟ್ ೧೧, ೨೦೨೩ ರಂದು ೧೧ ವರ್ಷ ಪೂರ್ಣವಾಗುವುದು. ದೌರ್ಭಾಗ್ಯವೆಂದರೆ ಇಷ್ಟು ಕಾಲಾವಧಿಯ ನಂತರ ಕೂಡ ಗಲಭೆಕೋರರ ವಿರುದ್ಧ ಇಲ್ಲಿಯವರೆಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಕೂಡ ಆರಂಭವಾಗಿಲ್ಲ. ಅಷ್ಟೇ ಅಲ್ಲದೆ ಗಲಭೆಕೋರರು ಸಾರ್ವಜನಿಕ ಆಸ್ತಿಯನ್ನು ನಾಶಗೊಳಿಸಿದರು ಕೂಡ ಅವರಿಂದ ಒಂದು ರೂಪಾಯಿ ಪರಿಹಾರ ಕೂಡ ವಸೂಲಿ ಮಾಡಲು ಸರಕಾರ ಮತ್ತು ಪೊಲೀಸರಿಗೆ ಸಾಧ್ಯವಾಗಿಲ್ಲ.
೧. ಈ ಗಲಬೆಯಲ್ಲಿ ಮದಾಂಧದಿಂದ ೨೬ ಪೊಲೀಸ ವಾಹನಗಳನ್ನು ಧ್ವಂಸ ಮಾಡಲಾಗಿತ್ತು. ೧೮೫೭ ರ ಸ್ವಾತಂತ್ರ ಹೋರಾಟದಲ್ಲಿನ ಸೈನಿಕರ ಸ್ಮಾರಕ ಇರುವ ‘ಅಮರ ಜವಾನ ಜ್ಯೋತಿ ಸ್ಮಾರಕ’ವನ್ನು ಮತಾಂಧರು ಕಾಲಲ್ಲಿ ಒದ್ದು ಧ್ವಂಸಗೊಳಿಸಿದ್ದರು. ಆಂಬುಲೆನ್ಸ್, ಪತ್ರಕರ್ತರ ವಾಹನ, ಮಹಾನಗರ ಪಾಲಿಕೆಯ ಬಸ್ಸುಗಳು ಮುಂತಾದವು ಮತಾಂಧರು ಧ್ವಂಸಗೊಳಿಸಿದ್ದರು.
೨. ಅಜಾದ ಮೈದಾನದಲ್ಲಿನ ಕಾರ್ಯಕ್ರಮಕ್ಕಾಗಿ ೧೫ ಸಾವಿರಕ್ಕಿಂತಲೂ ಹೆಚ್ಚಿನ ಜನರು ಸಹಭಾಗಿದ್ದರೂ ಕೇವಲ ೬೨ ಜನರಿಂದ ನಷ್ಟಪರಿಹಾರ ವಸೂಲಿಗೆ ಆದೇಶ ನೀಡಲಾಗಿದೆ. ಇದರಲ್ಲಿ ೧೮ ಜನರು ಮುಂಬಯಿಲ್ಲಿ, ೩೯ ಜನರು ನವಿಮುಂಬಯಿ ಮತ್ತು ಉಪನಗರದ ಪ್ರದೇಶದಲ್ಲಿ ಹಾಗೂ ೫ ಜನರು ಠಾಣೆಯಲ್ಲಿ ವಾಸಿಸುತ್ತಾರೆ. ಇದರಲ್ಲಿ ೨ ಹೆಸರುಗಳು ಕೈ ಬಿಡಲಾಗಿದೆ; ಆದರೆ ಇದರಲ್ಲಿನ ಅನೇಕ ಜನರು ಸಂಬಂಧಿತ ವಿಳಾಸದಲ್ಲಿ ವಾಸಿಸುತ್ತಿಲ್ಲ ಅಥವಾ ಇದ್ದರೆ ಅವರ ಹೆಸರಿನಲ್ಲಿ ಆಸ್ತಿ ಇಲ್ಲ ಎಂದು ಕಾರಣಗಳನ್ನು ನೀಡುತ್ತಾ ಪೊಲೀಸ ಮತ್ತು ಸರಕಾರವು ಸ್ಮಶಾನ ಮೌನ ತಾಳಿದ್ದಾರೆ.
೩. ಮಹಿಳಾ ಪೊಲೀಸರ ಮೇಲೆ ಅತ್ಯಾಚಾರ, ಕ್ರಾಂತಿಕಾರಕರ ಅವಮಾನ, ಪೊಲೀಸರ ಮೇಲಿನ ದಾಳಿ, ಸಾರ್ವಜನಿಕ ಆಸ್ತಿಗೆ ಹಾನಿ, ಮಾಧ್ಯಮಗಳ ಮೇಲೆ ದಾಳಿ ಮುಂತಾದ ಗಂಭೀರ ಕೃತ್ಯಗಳನ್ನು ನಡೆಸಿದರೂ ಗಲಭೆಯಲ್ಲಿನ ಆರೋಪಿಗಳು ಜಾಮೀನಿನ ಮೇಲೆ ಸ್ವತಂತ್ರವಾಗಿ ಓಡಾಡುತ್ತಿದ್ದಾರೆ.
ಸಂಪಾದಕೀಯ ನಿಲುವು
|