|
ವಾರಾಣಸಿ (ಉತ್ತರಪ್ರದೇಶ) – ಜ್ಞಾನವಾಪಿಯ ಸಮೀಕ್ಷೆಗೆ ಒಂದು ವಾರ ಆಗಿದ್ದು ಮುಸಲ್ಮಾನ ಪಕ್ಷಗಳಲ್ಲಿನ ಒಂದಾಗಿರು ಅಂಜುಮನ್ ಇಂತೆಜಾಮಿಯ ಮಸೀದ್ ಕಮಿಟಿ ಇದರ ವಿರುದ್ಧ ಜಿಲ್ಲಾ ನ್ಯಾಯಾಲಯಕ್ಕೆ ಹೋಗಿದೆ. ಈ ಸಮಯದಲ್ಲಿ ಕಮಿಟಿಯಿಂದ ಜುಲೈ ೨೧, ೨೦೨೩ ರಂದು ಜಿಲ್ಲಾ ನ್ಯಾಯಾಲಯಕ್ಕೆ ನೀಡಿರುವ ಆದೇಶದ ಹಿನ್ನೆಲೆ ನೀಡುತ್ತಾ, ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆ ನಡೆಸುವ ಖರ್ಚು ಹಿಂದೂ ಪಕ್ಷ ನಡೆಸಬೇಕು. ಕಮಿಟಿಯು, ಇಲಾಖೆಯ ಖರ್ಚು ಹಿಂದೂ ಪಕ್ಷದಿಂದ ನೀಡದಿದ್ದರೆ ಸಮೀಕ್ಷೆ ತಕ್ಷಣ ನಿಲ್ಲಿಸಬೇಕು. ಎಂದು ಹೇಳಿದೆ. ಈ ಪ್ರಕರಣದಲ್ಲಿ ಆಗಸ್ಟ್ ೧೭ ರಂದು ಹಿಂದೂ ಪಕ್ಷ ತಮ್ಮ ಅಭಿಪ್ರಾಯ ಮಂಡಿಸುವುದು.
ಈ ಸಮಯದಲ್ಲಿ ಕಮೀಟಿಯಿಂದ ಪುರಾತತ್ವ ಇಲಾಖೆಯ ಅಧಿಕಾರಿಗಳ ಕಾರ್ಯ ಪದ್ಧತಿಯ ಮೇಲೆ ಬೊಟ್ಟು ಮಾಡಿದೆ. ಕಮಿಟಿ, ಇಲಾಖೆಯ ಸದಸ್ಯರು ಯಾವುದೋ ಸಮಯದಲ್ಲಿ ಸಮೀಕ್ಷೆ ಆರಂಭಿಸುತ್ತಾರೆ. ಅವರ ಕಾರ್ಯಕ್ಕೆ ಯಾವುದೇ ಸಮಯ ಮಿತಿ ಇರುವುದಿಲ್ಲ. ಅವರ ಕಾರ್ಯಪದ್ಧತಿಗೆ ಕೂಡ ನ್ಯಾಯಾಲಯ ಆದೇಶ ನೀಡಬೇಕು. ಅದಕ್ಕಾಗಿ ಕೂಡ ಸಮೀಕ್ಷೆ ನಿಲ್ಲಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
ज्ञानवापी के ASI सर्वे पर मीडिया कवरेज पर रोक लगाने की मांग, कोर्ट पहुंचा मुस्लिम पक्ष @iSamarthS #GyanvapiMosque https://t.co/pbOg5BkyaK
— AajTak (@aajtak) August 9, 2023
ಜ್ಞಾನವಾಪೀಯ ಸಮೀಕ್ಷೆಯ ಮಾಹಿತಿ ಪ್ರಸಾರ ಮಾಧ್ಯಮಗಳಿಗೆ ಪೂರೈಸದಿರಲು ನ್ಯಾಯಾಲಯದ ಆದೇಶ !
ಕಳೆದ ವಾರದಿಂದ ಜ್ಞಾನವಾಪಿ ಪರಿಸರದ ಸಮೀಕ್ಷೆ ಆರಂಭವಾಗಿದೆ. ಇದರಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ಹಾಗೂ ಹಿಂದೂ ಮತ್ತು ಮುಸಲ್ಮಾನ ಪಕ್ಷದ ಸದಸ್ಯರು ಕೂಡ ಸಹಭಾಗಿದ್ದಾರೆ. ಇಂತಹದರಲ್ಲಿ ಸಮೀಕ್ಷೆಯಲ್ಲಿ ಸಹಭಾಗಿ ಆಗಿರುವವರು ಪ್ರಸಾರ ಮಾಧ್ಯಮಗಳಲ್ಲಿ ಇದರ ಸಂದರ್ಭದಲ್ಲಿನ ಯಾವುದೇ ಮಾಹಿತಿ ಪೂರೈಸದಂತೆ ವಾರಣಾಸಿ ನ್ಯಾಯಾಲಯವು ಆಗಸ್ಟ್ ೯ ರಂದು ಆದೇಶ ನೀಡಿದೆ. ಹಾಗೂ ಜ್ಞಾನವಾಪಿಯ ಹೊರಗೆ ಪ್ರಸಾರ ಮಾಧ್ಯಮಗಳಿಗೆ ಪತ್ರಿಕೋದ್ಯಮ ನಡೆಸದಂತೆಯೂ ನ್ಯಾಯಾಲಯ ಆದೇಶ ನೀಡಿದೆ.
ಸಂಪಾದಕೀಯ ನಿಲುವುಯಾವುದೇ ರೀತಿಯಲ್ಲಾದರೂ ಸರಿ ಜ್ಞಾನವಾಪಿಯ ಸತ್ಯ ಜಗತ್ತಿನೆದರು ಬರಬಾರದೆಂದು ಅಂಜುಮನ್ ಇಂತೆಜಾಮಿಯಾ ಮಸೀದಿ ಕಮಿಟಿಯಿಂದ ವಿಫಲ ಪ್ರಯತ್ನ ! ‘ಸುಳ್ಳು ಹೇಳುವವರ ಮನಸ್ಸಿನಲ್ಲಿ ಅಸುರಕ್ಷಿತತೆ ವಾಸವಾಗಿರುತ್ತದೆ’, ಈ ಮನೋವೈಜ್ಞಾನಿಕ ಸಿದ್ಧಾಂತದ ಯೋಚನೆ ಮಾಡುತ್ತಾ ಕಮಿಟಿಯಿಂದ ಈ ವರ್ತನೆ ಏನು ತೋರಿಸುತ್ತದೆ ? |