|
(ಸರ್ ತನ್ ಸೆ ಜುದಾ ಅಂದರೆ ತಲೆಯನ್ನು ದೇಹದಿಂದ ಬೇರ್ಪಡಿಸುವುದು)
ರತಲಾಮ (ಮಧ್ಯಪ್ರದೇಶ) – ಇಲ್ಲಿ ಒಂದು ಫೇಸ ಬುಕ್ ಪೋಸ್ಟ್ ಮೂಲಕ ಇಸ್ಲಾಂ ಗೆ ಅಗೌರವ ಮಾಡಿದ್ದಾರೆಂದು ಆರೋಪಿಸುತ್ತಾ ಕೆಲವು ಮತಾಂಧ ಮುಸ್ಲಿಮರು ಆಗಸ್ಟ್ 9ರ ರಾತ್ರಿ ಇಲ್ಲಿಯ ಪೊಲೀಸ್ ಸ್ಟೇಷನ್ ಗೆ ಮುತ್ತಿಗೆ ಹಾಕಿದರು, ಆ ಸಮಯದಲ್ಲಿ ‘ಸರ್ ತನ್ ಸೆ ಜುದಾ’ ಘೋಷಣೆಗಳನ್ನು ಕೂಗಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಟ ಮಾಡಿದ್ದ ಯುವತಿಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಹೇಳಿದರೂ ಅವರು ಠಾಣೆಯೊಳಗೆ ನುಗ್ಗುವ ಪ್ರಯತ್ನ ಮಾಡಿದರು.
Sar Tan Se Juda: मध्य प्रदेश में फिर गूंजा ‘सर तन से जुदा’, रतलाम में आधी रात को घेरी चौकी; इस बात को लेकर विरोध#MPNews #Raatlam #CrimeNews https://t.co/N2rMVJy9Co
— Zee MP-Chhattisgarh (@ZeeMPCG) August 10, 2023
ಮತಾಂತರ ಗುಂಪು, ತಕ್ಷಣವೇ ಯುವತಿಯನ್ನು ಬಂಧಿಸಬೇಕು, ಹಾಗೆಯೇ ಅವಳ ಮನೆಯ ಮೇಲೆ ಬುಲ್ಡೋಜರ್ ಹತ್ತಿಸಬೇಕು ಎಂದರು. ಈ ಸಂದರ್ಭದಲ್ಲಿ ಪೊಲೀಸರು ಸೈಬರ್ ಪೋಲೀಸರ ನೆರವಿನಿಂದ ಹುಡುಗಿಯನ್ನು ಬಂಧಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಸಂಪಾದಕೀಯ ನಿಲುವುಯಾರದೇ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ಖಂಡನೀಯವಾಗಿದೆ. ಆದರೆ ಈ ರೀತಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಮತಾಂಧ ಮುಸ್ಲಿಮರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ಇದೇ ರೀತಿಯ ಘೋಷಣೆಗಳನ್ನು ಮಾಡುವ ಮೂಲಕ ಅನೇಕ ಹಿಂದೂಗಳನ್ನು ಕೊಲ್ಲಲಾಯಿತು ಎಂಬುದನ್ನು ಮಧ್ಯಪ್ರದೇಶದ ಪೊಲೀಸರು ಗಮನಿಸಬೇಕು ! ಮತಾಂಧ ಮುಸಲ್ಮಾನರ ಇದೇ ಕಟ್ಟರತೆಗೆ ಪೊಲೀಸರು ಹಾಗೂ ಎಲ್ಲಾ ಸರಕಾರಿ ವ್ಯವಸ್ಥೆಗಳು ಹೆದರುತ್ತಾರೆ, ಇದು ದುರದೃಷ್ಟಕರ ! |