ಕಾಂಗ್ರೆಸ್-ಚೀನೀ ಭಾಯಿ ಭಾಯಿ!

ರಾಹುಲ ಗಾಂಧಿ ಮತ್ತು ಕೇಂದ್ರಸಚಿವ ಅನುರಾಗ ಠಾಕುರ

ಸ್ವದೇಶದ ಮಾಹಿತಿಯನ್ನು ಶತ್ರು ದೇಶಕ್ಕೆ ಪೂರೈಸುವುದು ಅಥವಾ ಹಣ ಪಡೆದು ಶತ್ರು ದೇಶದ ನೀತಿಗಳನ್ನು ದೇಶದಲ್ಲಿ ಜಾರಿಗೆ ತರುವುದು ಇವು ವಿಶ್ವಾಸಘಾತವಾಗಿದೆ. ಇಂತಹ ವಿಶ್ವಾಸಘಾತವನ್ನು ಕಾಂಗ್ರೆಸ್ ಯಾವಾಗಲೂ ಮಾಡುತ್ತಾ ಬಂದಿದೆ. ಭಾಜಪ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ಸಿನ ಈ ಪ್ರವೃತ್ತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ‘ನ್ಯೂಸ್ ಕ್ಲಿಕ್’ ಹೆಸರಿನ ಚೀನಾಪರ ಸುದ್ದಿ ಜಾಲತಾಣದ ಮೂಲಕ ಚೀನಾ ಭಾರತದಲ್ಲಿ ಸಾಮ್ಯವಾದಿ ಪಕ್ಷಗಳ ಭಾರತವಿರೋಧಿ ನೀತಿಗಳನ್ನು ಹರಡುತ್ತಿದ್ದು, ಕಾಂಗ್ರೆಸ್ ಈ ಸುದ್ದಿ ಜಾಲತಾಣವನ್ನು ಬೆಂಬಲಿಸುತ್ತಿದೆ ಎಂದು ಭಾಜಪ ನಾಯಕ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಇವರು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪದ ಬಗ್ಗೆ ಕಾಂಗ್ರೆಸ್‌ನಿಂದ ಇದುವರೆಗೂ ಯಾವುದೇ ಉತ್ತರ ಅಥವಾ ಸ್ಪಷ್ಟನೆ ಬಂದಿಲ್ಲ. ಅವರಿಂದ ಎಂದಿನಂತೆ ಬರುವುದೂ ಇಲ್ಲ.

ಕಾಂಗ್ರೆಸ್-ಚೀನಾದ ಹಳೆಯ ‘ಮೈತ್ರಿ’ !

ಕಾಂಗ್ರೆಸ್ ಮತ್ತು ಚೀನಾದ ನಡುವೆ ಆಳವಾದ ಸೌಹಾರ್ದಯುತ ಸಂಬಂಧವಿದೆ. ಕಾಂಗ್ರೆಸ್ ಗೆ ಪಕ್ಷ ನಡೆಸಲು ಸಿಗುವ ದೇಣಿಗೆಯಲ್ಲಿ ಚೀನಾ ನೀಡಿರುವ ದೇಣಿಗೆಯ ಪಾಲು ಅಧಿಕವಿರುವುದು ವಿಶೇಷವಾಗಿದೆ. ಈ ವಿಷಯವನ್ನು ಕೆಲವು ವರ್ಷಗಳ ಹಿಂದೆ ಭಾಜಪ ಬಹಿರಂಗಪಡಿಸಿತ್ತು ಮತ್ತು ಆಗಲೂ ಕಾಂಗ್ರೆಸ್ ಈಗಿನಂತೆ ಮೌನವಹಿಸಿತ್ತು. ಭಾರತಕ್ಕೆ ಕೊಳ್ಳಿ ಇಡುವ ಚೀನಾವು ಕಾಂಗ್ರೆಸ್‌ಗೆ ದೇಣಿಗೆದಾರನಾಗಿರುವುದು ಮತ್ತು ಅಂತಹ ಶತ್ರುವಿನಿಂದ ದೇಣಿಗೆ ಸ್ವೀಕರಿಸಲು ಕಾಂಗ್ರೆಸ್ ಗೆ ಯಾವುದೇ ಹಿಂಜರಿಕೆಯೆನಿಸದಿರುವುದು ಇದರಲ್ಲಿಯೇ ಎಲ್ಲವೂ ಅರ್ಥವಾಗುತ್ತದೆ. ಕಾಂಗ್ರೆಸ್‌ಗೆ ಚೀನಾದ ಮೇಲೆ ವಿಶೇಷ ಪ್ರೀತಿ ಇದೆ, ಆದರೆ ಕಾಂಗ್ರೆಸ್‌ ಮೇಲೆ ಚೀನಾದ ವಿಶೇಷ ಗಮನವಿದೆ! ಈ ಕಾರಣದಿಂದಾಗಿಯೇ ಏನೋ ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಹಸ್ಯವಾಗಿ ಚೀನಾಕ್ಕೆ ಭೇಟಿ ನೀಡಿದ್ದರು. ಆಗಲೂ ಅದರ ಮೇಲೆ ಆರೋಪಗಳಾಗಿತ್ತು; ಆದರೆ ಅವರು ಹಾರಿಕೆಯ ಉತ್ತರ ನೀಡಿ ಮೂಲ ವಿಷಯದಿಂದ ದೂರ ಸರಿದಿದ್ದರು. ಕಾಂಗ್ರೆಸ್‌ನ ಪೂರ್ವಜರಿಗೂ ಚೀನಾದೊಂದಿಗೆ ವಿಶೇಷವಾದ ಪ್ರೀತಿಯಿತ್ತು. ದೇಶದ ಬಹುದೊಡ್ಡ ಭಾಗವನ್ನು ಚೀನಾದ ಬಾಯಿಗೆ ಹಾಕುವ ಭರದಲ್ಲಿ ನೆಹರೂ ‘ಏನೂ ಬೆಳೆಯದಿರುವ ಆ ನೆಲದಿಂದ ಏನು ಪ್ರಯೋಜನ?’ ಎನ್ನುವ ಆಶಯದ ಹೇಳಿಕೆ ನೀಡಿದ್ದರು. ಇಂದಿಗೂ ಭಾರತದ ಆ ಬಹುದೊಡ್ಡ ಭೂಭಾಗ ಚೀನಾದ ವಶದಲ್ಲಿದೆ. ಕಾಂಗ್ರೆಸ್ಸಿನ ಚೀನಾಪ್ರೇಮ ಇಷ್ಟಕ್ಕೇ ನಿಲ್ಲಲಿಲ್ಲ, ಅದೇ ಕಾಂಗ್ರೆಸ್ ‘ಹಿಂದಿ-ಚೀನಿ ಭಾಯಿಭಾಯಿ’ ಎಂದು ಘೋಷಿಸುತ್ತಾ, ಚೀನಾ ಹೆಗಲಿಗೆ ಹೆಗಲು ಜೋಡಿಸಿತು ಮತ್ತು ನಂತರ ಚೀನಾ ಮೋಸದಿಂದ ಯುದ್ಧ ಮಾಡಿ ಭಾರತದ ಕತ್ತು ಕೊಯ್ದಿತ್ತು. ಇವೆಲ್ಲಾ ಘಟನೆಗಳಿಂದ ಕಾಂಗ್ರೆಸ್ಸಿನ ಚೀನಾಪರ ನಿಲುವು ಬಯಲಾಗುವುದರೊಂದಿಗೆ ‘ಕಾಂಗ್ರೆಸ್-ಚೀನಿ ಭಾಯಿ ಭಾಯಿ’ ಇರುವುದು ಸಾಬೀತಾಗಿದೆ. ಪಾಕಿಸ್ತಾನ ಭಾರತದ ರಹಸ್ಯಮಾಹಿತಿಯನ್ನು ಪಡೆಯಲು ‘ಹನಿ ಟ್ರ್ಯಾಪ್’ನ (ಮಹಿಳೆಯರನ್ನು ಬಳಸಿಕೊಂಡು ಭಾರತೀಯ ಅಧಿಕಾರಿಗಳನ್ನು ಪ್ರೇಮ ಜಾಲಕ್ಕೆ ಸೆಳೆಯಲು ಮತ್ತು ಅವರಿಂದ ಬಯಸಿದ ಮಾಹಿತಿಯನ್ನು ಪಡೆಯಲು) ಆಶ್ರಯಿಸುತ್ತಿದೆ. ಆದರೆ ಕಾಂಗ್ರೆಸ್ ಚೀನಾ ದೇಶಕ್ಕಾಗಿ ಇದೇ ರೀತಿಯ ಕೆಲಸವನ್ನು ಮಾಡುತ್ತಿದೆ ಎಂದು ಯಾರಾದರೂ ಭಾವಿಸಿದರೆ, ಅದರಲ್ಲಿ ತಪ್ಪೇನಿದೆ?

ಕಾಂಗ್ರೆಸ್ಸಿನ ದ್ವಿಮುಖ ನೀತಿ!

ನೇವಿಲ ರಾಯ ಸಿಂಘಮ್

ಕಾಂಗ್ರೆಸ್ ‘ನ್ಯೂಸ್ ಕ್ಲಿಕ್’ ಸುದ್ದಿ ಜಾಲತಾಣದ ಮೂಲಕ ಕೇಂದ್ರ ಸರ್ಕಾರವನ್ನು ವಿರೋಧಿಸುತ್ತಿದೆ. ಭಾರತದಲ್ಲಿ ಈ ಸುದ್ದಿ ಜಾಲತಾಣವನ್ನು ಜನಪ್ರಬೋಧನೆಗಾಗಿ ಎಂದೇನೂ ಪ್ರಾರಂಭಿಸಲಾಗಿಲ್ಲ. ಅನುರಾಗ್ ಠಾಕೂರ್ ನೀಡಿದ ಮಾಹಿತಿಯಂತೆ, ‘ನ್ಯೂಸ್ ಕ್ಲಿಕ್’ಗೆ ಚೀನಾದ ‘ಗ್ಲೋಬಲ್ ಮೀಡಿಯಾ’ದಿಂದ ಹಣಕಾಸು ನೆರವು ಪೂರೈಸಲಾಗುತ್ತದೆ. ‘ನ್ಯೂಸ್ ಕ್ಲಿಕ್’ ಮೇಲೆ ಭಾರತೀಯ ಸಂಸ್ಥೆಗಳು ನಡೆಸಿದ ದಾಳಿಯಲ್ಲಿ, ನೆವಿಲ್ ರಾಯ್ ಸಿಂಘಮ್ ಈತನು ಹಣ ಪೂರೈಸಿರುವುದು ಬಯಲಾಗಿದೆ. ಅವರು ಚೀನಾದ ಆಡಳಿತಾರೂಢ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ’ದ ಭಾರತವಿರೋಧಿ ಕಾರ್ಯಗಳನ್ನು ಮಾಡುವ ಶಾಖೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ. ಅದೇ ಶಾಖೆಯು ‘ಭಾರತ್ ತೋಡೊ’ ಅಭಿಯಾನವನ್ನು ನಡೆಸುತ್ತಿದೆ. ಈ ಸಿಂಘಮ್‌ ಗೆ ಚೀನಿ ಸಂಸ್ಥೆಗಳು ಹಣಕಾಸು ಪೂರೈಸುತ್ತವೆ. ಈ ಸುದ್ದಿ ಜಾಲತಾಣದ ಮೂಲಕ ಸುದ್ದಿಯ ಹೆಸರಿನಲ್ಲಿ ಭಾರತದ ಮಾನಹಾನಿ ಮಾಡಲಾಗುತ್ತಿತ್ತು. ಅಲ್ಲದೇ ಚೀನಾದ ಭಾರತವಿರೋಧಿ ನೀತಿಗಳನ್ನು ಬಿತ್ತರಿಸಲಾಗುತ್ತಿತ್ತು. ಆಕ್ರೋಶಕಾರಿ ವಿಷಯವೆಂದರೆ, ಇದಕ್ಕೆ ನಮ್ಮಲ್ಲಿನ ಕೆಲವರು ಅದನ್ನು ಬೆಂಬಲಿಸಿದರು. ಅಮೇರಿಕದ ಪ್ರತಿಷ್ಠಿತ ಪತ್ರಿಕೆ ‘ನ್ಯೂಯಾರ್ಕ್ ಟೈಮ್ಸ್’ ಕೂಡ ‘ನೆವಿಲ ರಾಯ್ ಸಿಂಘಮ್ ಮತ್ತು ಅವನ ‘ನ್ಯೂಸ್ ಕ್ಲಿಕ್’ ಸುದ್ದಿ ಜಾಲತಾಣ ಅತ್ಯಂತ ಅಪಾಯಕಾರಿಯಾಗಿದ್ದು, ಅದು ಚೀನಾ ಆಡಳಿತಾರೂಢ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ’ದ ಕುಟಿಲ ನೀತಿಗಳನ್ನು ಜಗತ್ತಿನ್ಯಾದ್ಯಂತ ಹರಡುವ ಕಾರ್ಯ ಮಾಡುತ್ತಿದೆ’ ಎಂದು ಬಹಿರಂಗಪಡಿಸಿದೆ. ಇಷ್ಟೇ ಅಲ್ಲದೇ ಈ ಸುದ್ದಿ ತಾಣವು ‘ಕೆಲವು ಸರ್ಕಾರೇತರ ಸಂಸ್ಥೆಗಳು ಮತ್ತು ಕಂಪನಿಗಳ ಮರೆಯಲ್ಲಿ ನೆವಿಲ್ ರಾಯ್ ಸಿಂಘಮ್ ಈತ ಚೀನಾದ ಸರಕಾರಿ ಮಾಧ್ಯಮಗಳೊಂದಿಗೆ ಕಾರ್ಯ ನಿರ್ವಹಿಸುತ್ತಾ, ಚೀನಿ ಸರಕಾರದ ನೀತಿಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡುತ್ತಿದ್ದಾನೆ. ಅವನು ಈ ಜಾಲಗಳನ್ನು ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಹೆಣೆದಿದ್ದಾನೆ. ಅದಕ್ಕಾಗಿ ಅವನಿಗೆ ದೊಡ್ಡ ಮೊತ್ತದ ಹಣವನ್ನೂ ನೀಡಲಾಗುತ್ತಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಕೊನೆಗೂ ಕೇಂದ್ರ ಸರ್ಕಾರ ೨೦೨೧ರಲ್ಲಿ ‘ನ್ಯೂಸ್ ಕ್ಲಿಕ್’ ಜಾಲತಾಣದ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ಕಾಂಗ್ರೆಸ್, ತೀವ್ರವಾಗಿ ವಿರೋಧಿಸಿ ‘ಮಾಧ್ಯಮಗಳ ಕತ್ತು ಹಿಸುಕಲಾಗುತ್ತಿದೆ’ ಎಂದು ಹೇಳಿದೆ. ಆದರೆ, ಅದೇ ಕಾಂಗ್ರೆಸ್ ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಪ್ರಸಾರ ಮಾಧ್ಯಮಗಳ ಯಾವ ಸ್ವಾತಂತ್ರ್ಯವನ್ನು ಕಾಪಾಡಿತ್ತು? ಎಂಬುದನ್ನು ಮರೆತಿದೆ. ಇತರರ ವಿರುದ್ಧ ಆರೋಪ ಮಾಡುವಾಗ ಕಾಂಗ್ರೆಸ್‌ಗೆ ಯಾವಾಗಲೂ ೩ ಬೆರಳುಗಳು ತಮ್ಮ ಕಡೆಗೆ ತೋರಿಸುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಚೀನಾದ ಹಣದಲ್ಲಿ ಕುಣಿಯುವ ಸುದ್ದಿವಾಹಿನಿಗಾಗಿ ಕಳವಳಗೊಳ್ಳುವ ಕಾಂಗ್ರೆಸ್ ಈಗಾಗಲೇ ದೇಶದಲ್ಲಿ ಹಲವಾರು ಪತ್ರಿಕೆಗಳನ್ನು ನಿಷೇಧಿಸಿರುವುದನ್ನು ಗಮನಿಸಿದರೆ ಕಾಂಗ್ರೆಸ್ಸಿನ ದ್ವಿಮುಖ ನೀತಿ ಮತ್ತು ಸುಳ್ಳುತನ ಬಹಿರಂಗವಾಗಿದೆ.

ಕ್ರಮ ಕೈಕೊಳ್ಳಬೇಕು !

ಇಲ್ಲಿಯವರೆಗೆ ರಾಷ್ಟ್ರೀಯ ಹಿತಾಸಕ್ತಿಯ ಹಲವು ವಿಷಯಗಳಲ್ಲಿ ಪಾಕಿಸ್ತಾನ ಮತ್ತು ಚೀನಾದ ಪಾತ್ರವನ್ನು ಅಂದರೆ ವಿರೋಧಾತ್ಮಕ ಪಾತ್ರವನ್ನು ಕಾಂಗ್ರೆಸ್ ನಿರ್ವಹಿಸಿದೆ; ಇದೀಗ ದೇಶವಿರೋಧಿ ಕೃತ್ಯ ಎಸಗುವವರನ್ನು ಬಹಿರಂಗವಾಗಿ ಬೆಂಬಲಿಸುವ ಮಟ್ಟಕ್ಕೆ ಹೋಗಿದೆ. ಇದೀಗ ಎಲ್ಲಿಯಾದರೂ ನಿಲ್ಲಬೇಕಾಗಿದೆ. ಭಾಜಪ ಕೂಡ ಪ್ರತಿ ಬಾರಿಯೂ ದೇಶದ್ರೋಹಿಗಳ ಕ್ರತ್ಯಗಳ ವಿರುದ್ಧ ವಿವರಿಸುತ್ತಾ ಕುಳಿತು ಕೊಳ್ಳುವ ಬದಲು ಅವರ ವಿರುದ್ಧ ಶೀಘ್ರ ಕ್ರಮ ತೆಗೆದುಕೊಳ್ಳಬೇಕು, ಅದು ಕಾಂಗ್ರೆಸ್ ಇರಲಿ ಅಥವಾ ಯಾವುದೇ ಪ್ರಸಾರ ಮಾಧ್ಯಮಗಳಿರಲಿ! ಇಂತಹ ಕ್ರಮ ಭಾಜಪ ಕೈಗೊಂಡಿದ್ದರೆ ಯಾರೂ ದೇಶದ್ರೋಹಿ ಕೃತ್ಯ ಎಸಗಲು ಮುಂದಾಗುತ್ತಿರಲಿಲ್ಲ. ಇನ್ನೂ ಸಮಯ ಕಳೆದಿಲ್ಲ. ಶತ್ರು ದೇಶಗಳನ್ನು ಬೆಂಬಲಿಸುವ ‘ಚೀನಿ-ಕಾಂಗ್ರೆಸ್’ಗೆ ಭಾರತದಲ್ಲಿ ಏನು ಕೆಲಸ? ಸರಕಾರ ಅಂಥವರ ಮಾನ್ಯತೆಯನ್ನೇ ರದ್ದು ಮಾಡುವುದರಲ್ಲಿಯೇ ರಾಷ್ಟ್ರದ ಹಿತವಿದೆ.

ದೇಶವಿರೋಧಿ ಕೃತ್ಯ ಎಸಗುವ ರಾಜಕೀಯ ಪಕ್ಷಗಳ ಮೇಲೆ ಸರಕಾರ ಸಮಯವಿರುವಾಗಲೇ ಕ್ರಮ ಜರುಗಿಸುವುದು ಆವಶ್ಯಕವಾಗಿದೆ