ಹಿಂದೂಗಳೇ, ಕರ್ಮಕಾಂಡದ ಮಹತ್ವವನ್ನು ಅರಿತುಕೊಳ್ಳಿರಿ!

ಅನೇಕ ಜನರಿಗೆ ಕರ್ಮಕಾಂಡವೆಂದರೆ ‘ಅದೊಂದು ಅತ್ಯಂತ ಕನಿಷ್ಠ ಮಟ್ಟದ ಉಪಾಸನಾ ಪದ್ಧತಿಯಾಗಿದೆ’ ಎಂದು ಅನಿಸುತ್ತದೆ. ಕರ್ಮಕಾಂಡ ಎಂಬ ಹೆಸರು ಕೇಳಿದೊಡನೆ ಅನೇಕರು ಮೂಗು ಮುರಿಯುತ್ತಾರೆ. ವಾಸ್ತವದಲ್ಲಿ ಇದೆಲ್ಲವೂ ಅಜ್ಞಾನದಿಂದಾಗಿ ಆಗುತ್ತದೆ. ಪ್ರಸ್ತುತ ಸಮಾಜದಲ್ಲಿನ ಬಹುತೇಕ ಜನರಿಗೆ ಇತರ ಯಾವುದೇ ಸಾಧನಾ ಮಾರ್ಗಗಳಿಗನುಸಾರ ಸಾಧನೆಯನ್ನು ಮಾಡುವ ಕ್ಷಮತೆಯಿಲ್ಲ. ಆದುದರಿಂದ ಅವರು ಕರ್ಮಕಾಂಡಕ್ಕನುಸಾರ ಸಾಧನೆಯನ್ನು ಮಾಡುವುದು ಅನಿವಾರ್ಯವಾಗಿದೆ. ಮನಸ್ಸು ಸಾತ್ತ್ವಿಕವಾಗಿದ್ದರೆ ಮಾತ್ರ ನಾಮ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಬುದ್ಧಿಯು ಸಾತ್ತ್ವಿಕವಾಗಿದ್ದರೆ ಮಾತ್ರ ಜ್ಞಾನಯೋಗಾನುಸಾರ ಸಾಧನೆಯನ್ನು ಮಾಡಬಹುದು. ಬಹುತೇಕ ಜನರ ಮನಸ್ಸು ಮತ್ತು ಬುದ್ಧಿಯು ಸಾತ್ತ್ವಿಕವಾಗಿರುವುದಿಲ್ಲ. ಆದುದರಿಂದ ಅವರು ಆ ಸಾಧನಾ ಮಾರ್ಗಗಳಿಂದ ಸಾಧನೆಯನ್ನು ಮಾಡಲು ಪ್ರಯತ್ನಿಸಿದರೂ ಅವರಿಗೆ ಅದರಿಂದ ಏನೂ ಲಾಭವಾಗುವುದಿಲ್ಲ. ಕರ್ಮಕಾಂಡದಿಂದ ಸಾಧನೆಯ ಅಡಿಪಾಯವು ನಿರ್ಮಾಣವಾಗುತ್ತದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ