ಕೆಲವರಿಗೆ ಬೆಳಗ್ಗೆ ಏಳುತ್ತಲೇ ಚಹಾದ ಜೊತೆ ಜೊತೆ ಬಿಸ್ಕತ್ತು ತಿನ್ನುವ ಅಭ್ಯಾಸವಿರುತ್ತದೆ. ಒಂದು ವೇಳೆ ಬಿಸ್ಕತ್ ಇಲ್ಲದೇ ಹೋದರೂ ಕಡಿಮೆಪಕ್ಷ ಚಹಾ ಅಂತೂ ಬೇಕೆ ಬೇಕು ಹೀಗಿರುತ್ತದೆ. ಒಮ್ಮೆ ಒಂದು ನಿರ್ದಿಷ್ಟ ಸಮಯದಲ್ಲಿ ತಿನ್ನುವ ಅಭ್ಯಾಸ ಉಂಟಾದರೆ, ಪ್ರತಿದಿನ ಆ ಸಮಯದಲ್ಲಿ ಹಸಿವಾಗುತ್ತದೆ; ಆದರೆ ಈ ಹಸಿವು ‘ನಿಜವಾದ ಹಸಿವು’ ಆಗಿರುವುದಿಲ್ಲ.
ಬೆಳಗ್ಗೆ ಏನಾದರೂ ತಿನ್ನುವ ಮೊದಲು ಹೊಟ್ಟೆ ಸ್ವಚ್ಛವಾಗಿರಬೇಕು, ದೇಹ ಹಗುರವಾಗಿರಬೇಕು, ಹಸಿವಾಗಬೇಕು, ಈ ಮೂರೂ ಲಕ್ಷಣಗಳಿರಬೇಕಾಗುತ್ತದೆ. ಈ ಮೂರು ಲಕ್ಷಣಗಳು ಕಾಣಿಸಿಕೊಂಡರೆ, ತಿನ್ನಲು ಇದು ಸರಿಯಾದ ಸಮಯ ಎಂದು ತಿಳಿಯಬೇಕು. ಅಂತಹ ಲಕ್ಷಣಗಳು ಕಾಣಿಸಿಕೊಂಡಾಗ, ಚಹಾದೊಂದಿಗೆ ಬಿಸ್ಕತ್ತುಗಳನ್ನು ತಿನ್ನುವ ಬದಲು, ನೀವು ರವೆಯ ಉಪ್ಪಿಟ್ಟು, ಶಿರಾ, ಚಪಾತಿ – ಪಲ್ಯ, ರೊಟ್ಟಿ ಇಂತಹ ಶರೀರಕ್ಕೆ ಪೂರಕವಾದಂತಹ ಪದಾರ್ಥಗಳನ್ನು ತಿನ್ನಬೇಕು. ಚಹಾ, ಬಿಸ್ಕತ್ ಸೇವನೆಯಿಂದ ದೇಹಕ್ಕೆ ಏನೂ ಪ್ರಯೋಜನವಾಗದ ಕಾರಣ ಅದನ್ನು ತಿನ್ನದಿರುವುದು ಒಳಿತು. – ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (23.7.2023)