ಶೀರ್ಷಿಕೆಯನ್ನು ಓದಿಯೆ ನಿಮಗೆ ಅರಿವಾಗಿರಬಹುದು, ಒಂದು ತಥಾಕಥಿತ ಪ್ರೇಮಪ್ರಕರಣವೇ (ಸೀಮಾ ಹೈದರ್ ಮತ್ತು ಸಚಿನ್‌ಮೀಣಾ ಇವರ) ಸದ್ಯ ಎಲ್ಲೆಡೆ ಚರ್ಚೆಯಲ್ಲಿದೆ. ವಾರ್ತಾವಾಹಿನಿಗಳು, ಸಾಮಾಜಿಕ ಮಾಧ್ಯಮಗಳು ಇತ್ಯಾದಿ ಎಲ್ಲರನ್ನೂ ಸೀಮಾ ಹೈದರ್ ಪ್ರಕರಣವು ಆವರಿಸಿಕೊಂಡಿದೆ. ಸೀಮಾ ಹೈದರ್ ಎಂಬ ಹೆಸರಿನ ಪಾಕಿಸ್ತಾನಿ ಮಹಿಳೆ ತನ್ನ ೪ ಮಕ್ಕಳೊಂದಿಗೆ ತನ್ನ ಪ್ರಿಯಕರನಿಗಾಗಿ ಕಾನೂನುಬಾಹಿರವಾಗಿ ನೇಪಾಳ ಮಾರ್ಗವಾಗಿ ಭಾರತಕ್ಕೆ ಬರುತ್ತಾಳೆ. ಕೇವಲ ಬರುವುದು ಮಾತ್ರವಲ್ಲ, ಭಾರತದ ಪೌರತ್ವವನ್ನು ಪಡೆಯಲು ರಾಷ್ಟ್ರಪತಿಗಳಿಗೆ ದಯಾಯಾಚನೆಯನ್ನೂ ಸಲ್ಲಿಸುತ್ತಾಳೆ ! ವಿಶೇಷವೆಂದರೆ ಆಡಳಿತವು ಎಚ್ಚರವಾಗುವ ಮೊದಲೇ ಭಾರತೀಯ ಪ್ರಸಿದ್ಧಿ ಮಾಧ್ಯಮಗಳು ಮತ್ತು ಸ್ಥಳೀಯರು ಅವಳನ್ನು ‘ಸೆಲೆಬ್ರಿಟಿ’ (ಸುತ್ತುವರಿದ ವ್ಯಕ್ತಿ) ಎಂದು ನಿರ್ಧರಿಸುತ್ತಾರೆ. ಇವೆಲ್ಲ ಪ್ರಕರಣಗಳಿಗೆ ‘ಗಡಿಯಾಚೆಯ ಪ್ರೇಮ’ (ಲವ್ ವಿದೌಟ್ ಬಾರ್ಡರ್ಸ್), ಎಂಬ ಕಾಲ್ಪನಿಕ ಹೆಸರನ್ನು ಕೊಡಲಾಗುತ್ತದೆ.
‘ಗದರ್’ ಈ ಹಿಂದಿ ಚಲನಚತ್ರದಲ್ಲಿನ ಪ್ರೇಮದ ಸಂದರ್ಭವನ್ನು ನೀಡುತ್ತಾ ಈ ಮಹಿಳೆ ಭಾರತದೊಳಗೆ ನುಸುಳುತ್ತಾಳೆ. ಇದೆಲ್ಲ ನಾಟಕ ಸಹಜವಾಗಿ ನಡೆಯುತ್ತದೆ. ‘ಸೀಮಾ ಹೈದರ್ ಇವಳು ಪಾಕಿಸ್ತಾನದ ‘ಐ.ಎಸ್.ಐ.’ಯ ದಲಾಲಿ ಆಗಿರಬಾರದೇಕೆ ?’, ಎಂಬ ಪ್ರಶ್ನೆ ಜನಸಾಮಾನ್ಯರ ಮನಸ್ಸಿನಲ್ಲಿ ಮೂಡಿದೆ.
೧. ಸೀಮಾ ಹೈದರ್ ಪ್ರಕರಣವು ‘ಕಪಟ’ ನಾಟಕವೆ ?
ಇತ್ತೀಚೆಗಷ್ಟೇ ಪ್ರಸಿದ್ಧವಾದ ಭಾರತೀಯ ರಿಝರ್ವ್ ಬ್ಯಾಂಕಿನ ವರದಿಗನುಸಾರ ಭಾರತದ ವಿದೇಶಿ ಮೀಸಲು ನಿಧಿ (ಡಾಲರ್ ಸಂಗ್ರಹ) ಸುಮಾರು ೬೦೦ ಬಿಲಿಯನ್ ಡಾಲರ್ಸ್‌ರ ಗಡಿ ದಾಟಿದೆ. ಸಂಪೂರ್ಣ ಪಾಕಿಸ್ತಾನದ ಬೆಲೆ ಕೂಡ ಅಷ್ಟಿರಲಿಕ್ಕಿಲ್ಲ, ಅಷ್ಟು ನಮ್ಮಲ್ಲಿ (ಭಾರತದ) ವಿದೇಶಿ ಮೀಸಲುನಿಧಿ ಇದೆ. ೧೯೪೮ ರಿಂದ ೧೯೯೯ ಈ ಅವಧಿಯಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ ಭಾರತದೊಂದಿಗೆ ೪ ಬಾರಿ ಬಹಿರಂಗ ಹಾಗೂ ರಹಸ್ಯ ಯುದ್ಧ ಮಾಡಿ ನೋಡಿತು. ಆದರೆ ಪ್ರತಿಯೊಂದು ಯುದ್ಧದಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಸೊಂಟ ಮುರಿದಿದೆ. ಆದ್ದರಿಂದ ಭಾರತೀಯ ಸೈನ್ಯದೊಂದಿಗೆ ಮುಖಾ ಮುಖಿ ಯುದ್ಧ ಮಾಡುವುದು ದೂರದ ಮಾತು, ಸಾಮಾನ್ಯ ಬಂದೂಕಿನ ಗುಂಡು ಕೂಡ ನಮ್ಮಲ್ಲಿಲ್ಲ, ಎಂಬುದರ ಕಲ್ಪನೆ ಪಾಕಿಸ್ತಾನಕ್ಕಿದೆ; ಆದ್ದರಿಂದಲೇ ಇಂತಹ ವಿವಿಧ ಪ್ರಕಾರದ ಷಡ್ಯಂತ್ರಗಳನ್ನು ಪಾಕಿಸ್ತಾನ ನಿರಂತರ ರಚಿಸುತ್ತಾ ಬಂದಿದೆ. ಸೀಮಾ ಹೈದರ್ ಆ ಕಪಟ ನಾಟಕದ ಭಾಗವೇ ಆಗಿರಬಾರದೇಕೇ ?
೨. ಸೀಮಾ ಹೈದರ್ ಯಾರು ?
ಸೀಮಾ ಹೈದರಳ ಹೇಳಿಕೆಗನುಸಾರ ಅವಳು ಮೂಲತಃ ಪಾಕಿಸ್ತಾನದ ಸಿಂಧ ಪ್ರಾಂತದವಳಾಗಿದ್ದು ಅಲ್ಲಿಯೆ ಇವಳು ೫ ನೇ ತರಗತಿಯ ವರೆಗೆ ಶಿಕ್ಷಣ ಪಡೆದಿದ್ದಾಳೆ ಹಾಗೂ ೨೦೧೪ ರಲ್ಲಿ ಗುಲಾಮ್ ಹೈದರನೊಂದಿಗೆ ಇವಳ ವಿವಾಹವಾಯಿತು. ಮನೆಯವರ ವಿರೋಧವಿದ್ದುದರಿಂದ ಗುಲಾಮ ಹೈದರನು ಸೀಮಾಳೊಂದಿಗೆ ನ್ಯಾಯಾಂಗ ವಿವಾಹ (ಕೋರ್ಟ್ ಮ್ಯಾರೇಜ್) ಆದನು. ೧೫ ನೇ ವಯಸ್ಸಿನಲ್ಲಿಯೆ ಅವಳಿಗೆ ಮೊದಲ ಸಂತಾನ ಆಯಿತು. ಅನಂತರ ಅವಳು ೪ ಮಕ್ಕಳ ತಾಯಿಯಾದಳು. ಅನಂತರ ೨೦೧೯ ರಲ್ಲಿ ಅವಳ ಗಂಡ ನೌಕರಿಯ ನಿಮಿತ್ತ ಸೌದಿ ಅರೇಬಿಯಾಗೆ ಹೋದನು.
೨೦೧೯ ರಲ್ಲಿ ಸಂಚಾರಿವಾಣಿಯ ಮೂಲಕ ಆನ್‌ಲೈನ್ ‘ಪಬಜೀ’ ಆಟ ಆಡುವಾಗ ಸೀಮಾಳು ಮೊಟ್ಟಮೊದಲು ಭಾರತದ ಉತ್ತರಪ್ರದೇಶದ ಗೌತಮ ಬುದ್ಧ ನಗರದ ಸಚಿನ್ ಮೀಣಾನ ಜೊತೆಗೆ ‘ಆನ್ ಲೈನ್’ ಆಟ ಆಡಲು ಪ್ರಾರಂಭಿಸಿದಳು. ಇಬ್ಬರಲ್ಲಿಯೂ ಸಂಭಾಷಣೆ ಮುಂದುವರಿಯಿತು ಹಾಗೂ ಆತ್ಮೀಯತೆ ಹೆಚ್ಚಾಯಿತು. ಅನಂತರ ಸೀಮಾಳಿಗೆ ಪಾಸ್‌ಪೋರ್ಟ್ ಸಿಕ್ಕಿದಾಗ ಅವಳು ‘ಪ್ರವಾಸ ವೀಸಾ’ ಪಡೆದು ಯುನೈಟೆಡ್ ಅರಬ ಅಮಿರಾತೀ ಮಾರ್ಗವಾಗಿ ನೇಪಾಳಕ್ಕೆ ಬಂದಳು ಹಾಗೂ ಅಲ್ಲಿ ಅವಳಿಗೆ ಸಚಿನ್‌ನೊಂದಿಗೆ ಮೊದಲ ಭೇಟಿಯಾಯಿತು. ಮೊದಲ ಭೇಟಿಯಲ್ಲಿಯೆ ಮಾರ್ಚ್ ೧೩ ರಂದು ಪಶುಪತಿನಾಥ ಮಂದಿರದಲ್ಲಿ ಹಿಂದೂ ಪದ್ಧತಿಯಂತೆ ಅವರು ವಿವಾಹವಾದರು. ಅನಂತರ ಸೀಮಾ ಪುನಃ ಮಾರ್ಚ್ ೧೭ ರಂದು ಕರಾಚಿಗೆ ಹೋದಳು, ಅದು ಭಾರತಕ್ಕೆ ಹಿಂತಿರುಗಿ ಬರುವುದಾಗಿ ಆಣೆ ಮಾಡಿಯೆ ಹೋದಳು! ನಂತರ ಸೀಮಾ ಪಾಕಿಸ್ತಾನದಲ್ಲಿದ್ದ ತನ್ನ ಸ್ಥಿರ ಆಸ್ತಿಯನ್ನು ೧೪ ಲಕ್ಷಕ್ಕೆ ಮಾರಾಟ ಮಾಡಿ ಅವಳು ಕರಾಚಿಯಿಂದ ಭಾರತಕ್ಕೆ ಬರಲು ಹೊರಟಳು. ಆಗ ಅವಳಲ್ಲಿ ಕೇವಲ ೩೦೦ ಡಾಲರ್, ಅಂದರೆ ೨೫ ಸಾವಿರ ಭಾರತೀಯ ರೂಪಾಯಿ ಉಳಿದಿತ್ತು. ನಂತರ ಮೇ ೧೦ ರಂದು ದುಬೈ ಮಾರ್ಗವಾಗಿ ಕಠ್ಮಂಡೂಗೆ ತನ್ನ ೪ ಮಕ್ಕಳೊಂದಿಗೆ ತಲುಪಿದಳು. ನಂತರ ಅವಳು ಕಠ್ಮಂಡೂನಿಂದ ದೆಹಲಿ ಮಾರ್ಗವಾಗಿ ಪೋಖರಾ ಹೀಗೆ ಪ್ರವಾಸ ಮಾಡಿದಳು. ಅವಳು ಜುಲೈ ೧೩ ರ ರಾತ್ರಿ ಯಮುನಾ ಹೆದ್ದಾರಿಯಲ್ಲಿ (ಹೈವೇಯಲ್ಲಿ) ಇಳಿದಳು, ಅಲ್ಲಿ ಸಚಿನ್ ಅವಳ ದಾರಿ ಕಾಯುತ್ತಿದ್ದನು. ಈ ಸಂಪೂರ್ಣ ಪ್ರಕರಣದಲ್ಲಿ ಸೀಮಾ ತಾನು ನೇಪಾಳದಿಂದ ಭಾರತದ ವರೆಗೆ ಕಾನೂನು ಬಾಹಿರ ಪ್ರವಾಸಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
೩. ಸೀಮಾಗೆ ‘ಸತೀ-ಸಾವಿತ್ರಿ’ ಎಂದು ಹೇಳುವ ಸಾಮಾಜಿಕ ಮಾಧ್ಯಮಗಳ ಹೊಣೆಗೇಡಿತನ !
ಸಾಮಾಜಿಕ ಮಾಧ್ಯಮಗಳಿಂದ ಸೀಮಾ ಹೈದರಳ ಧೈರ್ಯ, ಪ್ರೇಮ ಕಥನವನ್ನು ತೋರಿಸುವಾಗ ಅವಳಿಗೆ ‘ಸತಿ-ಸಾವಿತ್ರಿ’, ‘ಆದರ್ಶ ಭಾಬಿ’, ಇತ್ಯಾದಿ ಎಲ್ಲ ವಿಶೇಷಣಗಳಿಂದ ಗೌರವಿಸಲಾಯಿತು. ಅವಳ ಮೊದಲ ಗಂಡ ಗುಲಾಮ ಹೈದರನು ಅವಳನ್ನು ಮತ್ತು ಮಕ್ಕಳನ್ನು ತನಗೆ ಒಪ್ಪಿಸಬೇಕೆಂದು ಭಾರತ ಸರಕಾರಕ್ಕೆ ಮನವಿ ಮಾಡಿದ್ದಾನೆ. ಅವಳ ಬೇಡಿಕೆಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬೆದರಿಕೆಯೂ ಬಂದಿದೆ. ಅಷ್ಟು ಮಾತ್ರವಲ್ಲ, ಅಲ್ಲಿನ ಇಸ್ಲಾಮಿಕ್ ಮಾಫಿಯಾಗಳ ಗುಂಪಿನಿಂದ ಹಿಂದೂಗಳ ಮಂದಿರಗಳನ್ನೂ ರಾಕೇಟ್ ಮೂಲಕ ಉರುಳಿಸಲಾಯಿತು. ‘ಇಷ್ಟಾದರೂ ಸೀಮಾ ತನ್ನ ಸರ್ವಸ್ವವನ್ನೂ ತೊರೆದು ಭಾರತದಲ್ಲಿ ಅವಳ ಪ್ರಿಯಕರನಲ್ಲಿಗೆ ಬಂದಿದ್ದಾಳೆ. ಆದ್ದರಿಂದ ಅವಳ ತ್ಯಾಗ ಬಹಳ ದೊಡ್ಡದಾಗಿದೆ’, ಎಂದು ಕೆಲವರು ಹೇಳುತ್ತಾರೆ; ಆದ್ದರಿಂದಲೇ ದೇಶದ ಭದ್ರತೆಗಿಂತ ಅವರಿಗೆ ‘ದೇಶ ಅವಳನ್ನು ಸ್ವೀಕರಿಸಬೇಕು’, ಎಂದು ಅನಿಸುತ್ತದೆ.
ಸಚಿನ್ ಮತ್ತು ಸೀಮಾ ಕಾನೂನು ಪ್ರಕಾರ ವಿವಾಹವಾಗಲು ನೋಯಿಡಾದ ಒಬ್ಬ ವಕೀಲರಲ್ಲಿಗೆ ಹೋದರು. ಅವರಿಬ್ಬರ ಕಾಗದಪತ್ರಗಳನ್ನು ಪರಿಶೀಲಿಸಿದಾಗ ಸೀಮಾಳ ‘ಶಿನಾಖ್ತಿ ಕಾರ್ಡ್’ (ಪಾಕಿಸ್ತಾನದ ಆಧಾರಕಾರ್ಡ್) ನಿಂದ ಅವಳು ಪಾಕಿಸ್ತಾನಿ ನಾಗರಿಕಳೆಂದು ವಕೀಲರಿಗೆ ಅರಿವಾಯಿತು. ಅವರು ತಕ್ಷಣ ನೋಯಿಡಾ ಪೊಲೀಸರಿಗೆ ತಿಳಿಸಿದ್ದರಿಂದ ಆ ದಂಪತಿಗಳನ್ನು ಪೊಲೀಸರು ಬಂಧಿಸಿದರು. ಸೀಮಾಳ ಮೇಲೆ ವೀಸಾ ಇಲ್ಲದೆ ಭಾರತವನ್ನು ಪ್ರವೇಶಿಸಿದಳೆಂದು ಆರೋಪಿಸಲಾಗಿದೆ. ನಂತರ ನ್ಯಾಯಾಂಗ ಪ್ರಕ್ರಿಯೆಯೊಂದಿಗೆ ಜುಲೈ ೭ ರಂದು ಅವರಿಗೆ ಜಾಮೀನು ಸಿಕ್ಕಿತು. ಸೀಮಾಳಿಗೆ ೩೦ ಸಾವಿರ ರೂಪಾಯಿಗಳ ದಂಡ ವಿಧಿಸಲಾಯಿತು. ಅದೇ ರೀತಿ ನ್ಯಾಯಾಲಯ ಈ ಪ್ರಕರಣ ನಡೆಯುತ್ತಿರುವ ವರೆಗೆ ಸೀಮಾ ತನ್ನ ನಿವಾಸ ಸ್ಥಾನವನ್ನು ಬದಲಾಯಿಸುವ ಹಾಗಿಲ್ಲ ಹಾಗೂ ನ್ಯಾಯಾಲಯದ ಪೂರ್ವಸೂಚನೆಯಿಲ್ಲದೆ ದೇಶವನ್ನು ತೊರೆಯುವ ಹಾಗಿಲ್ಲ’, ಎಂದು ಶರತ್ತು ಹಾಕಲಾಗಿದೆ.
೪. ಭಾರತೀಯ ನಾಗರಿಕರಲ್ಲಿ ಉದ್ಭವಿಸುವ ಕೆಲವು ಪ್ರಶ್ನೆಗಳು
ಸೀಮಾ ನಿಜವಾಗಿಯೂ ಐ.ಎಸ್.ಐ.ಯ ಗೂಢಚಾರಿಣಿಯಾಗಿದ್ದಾಳೆಯೆ ಎಂದು ಉತ್ತರಪ್ರದೇಶದ ಭಯೋತ್ಪಾದಕ ವಿರೋಧಿ ದಳ ತನಿಖೆ ಮಾಡುತ್ತಿದೆ. ಆದರೂ ಒಬ್ಬ ಜಾಗರೂಕ ಭಾರತೀಯ ನಾಗರಿಕನೆಂದು ನಮ್ಮ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ.
ಅ. ಸಾಮಾಜಿಕ ಮಾಧ್ಯಮಗಳಲ್ಲಿ ‘ಮರಿಯಮ ಖಾನ್’ ಎಂಬ ಹೆಸರಿನಲ್ಲಿ ಖಾತೆ ತೆರೆದಿರುವ ಸೀಮಾಳು ‘ಸೀಮಾ’ ಎಂಬ ಹಿಂದೂ ಹೆಸರನ್ನು ಉದ್ದೇಶಪೂರ್ವಕ ಧಾರಣೆ ಮಾಡಿದ್ದಾಳೆಯೇ ?
ಆ. ಸೀಮಾಳ ಹೇಳಿಕೆಗನುಸಾರ ಅವಳ ಶಿಕ್ಷಣ ಪಾಕಿಸ್ತಾನದ ಶಿಕ್ಷಣ ಪದ್ಧತಿಯ ೫ ನೇ ತರಗತಿಯ ವರೆಗೆ ಆಗಿದೆ. ಆದರೆ ವಿಡಿಯೋ ಕೆಮೆರಾದ ಮುಂದೆ ಅವಳ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿನ ಸಂಭಾಷಣೆಯಿಂದ ಇದು ನಿಜವೆನಿಸುವುದಿಲ್ಲ. ಇದು ಅವಳಿಗೆ ವಿಶೇಷ ತರಬೇತಿ ಇಲ್ಲದೇ ಅಸಾಧ್ಯವೆನಿಸುವುದಿಲ್ಲವೇ ?
ಇ. ತನಗಿಂತ ೪ ವರ್ಷ ಕಿರಿಯನಾದ ಸಚಿನ್‌ನೊಂದಿಗೆ ಸಂಸಾರ ಆರಂಭಿಸಿ ಅವಳು ಉತ್ತರಭಾರತದಲ್ಲಿನ ಹಿಂದೂ ಪರಂಪರೆಗನುಸಾರ ಸೀರೆ ಉಡುವುದು, ತಲೆಯ ಮೇಲೆ ಸೆರಗನ್ನು ಎಳೆದುಕೊಳ್ಳುವುದು, ಕುಂಕುಮ ಹಚ್ಚುವುದು, ತುಳಸಿಯ ಪೂಜೆ ಮಾಡುವುದು, ಇವೆಲ್ಲವೂ ಆಶ್ಚರ್ಯವೆನಿಸುತ್ತದೆ. ಶೇ. ೯೮ ರಷ್ಟು ಮುಸಲ್ಮಾನರಿರುವ ಕರಾಚಿಯಲ್ಲಿ ಬೆಳೆದಿರುವ ಸೀಮಾ ತರಬೇತಿ ಇಲ್ಲದೇ ಹೀಗೆ ಹಿಂದೂ ಪರಂಪರೆಯನ್ನು ಪಾಲಿಸುವುದು ಅಸಾಧ್ಯವೆನಿಸುವುದಿಲ್ಲವೆ ?
ಈ. ಸೀಮಾಳಿಂದ ಪೊಲೀಸರು ೪ ಸಂಚಾರಿವಾಣಿ, ಪಾಕಿಸ್ತಾನದ ೫ ಪಾಸ್‌ಪೋರ್ಟ್ ಹಾಗೂ ಒಂದು ಖಾಲಿ ಪಾಸ್‌ಪೋರ್ಟ್ ವಶಪಡಿಸಿಕೊಂಡಿದ್ದಾರೆ. ಪಾಸ್‌ಪೋರ್ಟ್‌ನ ವಿಷಯದಲ್ಲಿ ವಿಚಾರಣೆಯಲ್ಲಿ ಅವಳು ನೇಪಾಳದ ‘ವೀಸಾ’ ಪಡೆಯಲು ಸೀಮಾ ಗುಲಾಮ್ ಹೈದರ್ ಎಂಬ ಹೆಸರಿನಲ್ಲಿ ಮನವಿ ಮಾಡಿದ್ದೆ ಎಂದು ಹೇಳಿದಳು. ವೀಸಾ ಸಿಗದ ಕಾರಣ ಅವಳು ಪುನಃ ಕೇವಲ ಸೀಮಾ ಹೆಸರಿನಲ್ಲಿ ಮನವಿಯನ್ನು ಮಾಡಿದಳು. ಇದು ಸಂಶಯಾಸ್ಪದವೆನಿಸುವುದಿಲ್ಲವೇ ?
ಉ. ಉತ್ತರಪ್ರದೇಶದ ಭಯೋತ್ಪಾದಕ ದಳದ ವಿಚಾರಣೆಯಲ್ಲಿ ಬೆಳಕಿಗೆ ಬಂದ ಒಂದು ವಿಷಯವೆಂದರೆ, ಸೀಮಾ ಸಂಪರ್ಕ ಮಾಡಿರುವ ವ್ಯಕ್ತಿಗಳಲ್ಲಿ ಸಚಿನ್ ಮೊದಲಿಗನಲ್ಲ, ಈ ಹಿಂದೆಯೂ ಸೀಮಾ ಭಾರತದಲ್ಲಿನ ಕೆಲವು ಜನರೊಂದಿಗೆ ಪಬಜೀ ಆಟದ ನಿಮಿತ್ತ ಸಂಪರ್ಕ ಮಾಡಿದ್ದಳು. ಅವರಲ್ಲಿ ಹೆಚ್ಚಿನವರು ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಕ್ಷೇತ್ರದಲ್ಲಿನ (ಎನ್.ಸಿ.ಆರ್.’)ನಲ್ಲಿನವರಾಗಿದ್ದರು. ಸೀಮಾಳಿಗೆ ಭಾರತದ ರಾಜಧಾನಿ ಇರುವ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಕ್ಷೇತ್ರದಲ್ಲಿ ಇಷ್ಟು ಆಸಕ್ತಿ ಏಕೇ ?
ಊ. ಕರಾಚಿ-ದುಬಯಿ-ಕಠ್ಮಂಡೂ-ಪೋಖರಾ-ದೆಹಲಿ ಈ ಪ್ರವಾಸವನ್ನು ಸೀಮಾ ತನ್ನ ೪ ಮಕ್ಕಳೊಂದಿಗೆ ಯಾವ ಪುರುಷನ ಸಹಾಯವೂ ಇಲ್ಲದೆ ಮಾಡಿದಳು. ವಿಶೇಷವಾಗಿ ಕಠ್ಮಂಡೂನಿಂದ ದೆಹಲಿಯ ರಸ್ತೆಯಲ್ಲಿ ಒಬ್ಬ ೫ ನೇ ತರಗತಿ ಉತ್ತೀರ್ಣಳಾಗಿರುವ ಪಾಕಿಸ್ತಾನಿ ಮಹಿಳೆಯು ಪ್ರವಾಸ ಮಾಡುವುದು ಅಸಾಧ್ಯವೆನಿಸುತ್ತದೆ. ಅದರಲ್ಲಿಯೂ ಭಾರತದ ಗಡಿಯಲ್ಲಿ ಯಾವುದೇ ಅಧಿಕೃತ ಕಾಗದಪತ್ರಗಳಿಲ್ಲದೆ ೫ ಜನರು ಪ್ರವೇಶಿಸಿದುದನ್ನು ನಂಬಲು ಆಗುತ್ತಿಲ್ಲ ಭಾರತ-ನೇಪಾಳ ಗಡಿಯಲ್ಲಿ ಅವಳಿಗೆ ಯಾರಾದರೂ ದಲಾಲನ ಸಹಕಾರವಿರಬೇಕು ಹಾಗೂ ಈ ದಲಾಲ ಕೇವಲ ಪ್ರವಾಸದ ದಲಾಲ ಆಗಿರದೆ ಐ.ಎಸ್.ಐ.ಯ ಗೂಢಚರನಾಗಿರಬೇಕು, ಎನ್ನುವ ಸಂಶಯ ಬರುವುದಿಲ್ಲವೇ ?
ಎ. ಜೀನಸಿ ಅಂಗಡಿಯಲ್ಲಿ ಕೆಲಸ ಮಾಡಿ ಉದರಪೋಷಣೆ ಮಾಡುತ್ತಿರುವ ತಿಂಗಳಿಗೆ ೧೪ ಸಾವಿರ ವೇತನ ಪಡೆಯುವ ಸಚಿನ್ ಸೀಮಾಳ ೪ ಮಕ್ಕಳನ್ನು ಹೇಗೆ ಸಲಹುತ್ತಾನೆ ? ಇದು ಸೀಮಾಳ ಗಮನಕ್ಕೆ ಬಂದಿರಲಿಕ್ಕಿಲ್ಲವೇ ? ಅಥವಾ ಭಾರತೀಯ ಗೂಢಚಾರ ಇಲಾಖೆಗೆ ಸಂಶಯ ಬರಬಾರದೆಂದು ಐ.ಎಸ್.ಐ. ಸೀಮಾಳನ್ನು ೪ ಮಕ್ಕಳೊಂದಿಗೆ ಭಾರತಕ್ಕೆ ಕಳುಹಿಸಿರಬಹುದೇ ?
ಐ. ಸೀಮಾ ಈ ಪ್ರವಾಸದ ಸಮಯದಲ್ಲಿ ನೇಪಾಳದಲ್ಲಿ ಬೇರೆಯವರಿಂದ ಇಂಟರ್‌ನೆಟ್ ಪಡೆದು ಸಚಿನ್‌ನೊಂದಿಗೆ ಸಂಪರ್ಕ ಮಾಡಿದ್ದಾಳೆ. ಇದರಿಂದ ಅವಳ ಆಧುನಿಕ ತಂತ್ರಜ್ಞಾನದ ಬಗ್ಗೆ ಇರುವ ಪರಿಚಯ ಹಾಗೂ ಚಾತುರ್ಯದ ಅನುಭವವಾಗುತ್ತದೆ. ಇದು ಒಬ್ಬ ಗೂಢಚಾರನಿಗೆ ಅನ್ವಯವಾಗುವ ಚಾತುರ್ಯವಲ್ಲವೇ ?
ಓ. ವಾರ್ತಾವಾಹಿನಿಗಳ ಕೆಮೆರಾಗಳ ಮುಂದೆ ಸೀಮಾ ನಿರಾತಂಕವಾಗಿ ಉತ್ತರಿಸುವುದು, ಕೆಲವೊಮ್ಮೆ ಪತ್ರಕರ್ತರಿಗೆ ಮರುಪ್ರಶ್ನೆ ಮಾಡುವುದು, ಪ್ರಸಂಗಾನುಸಾರ ಅಳುವುದು, ಮುಗ್ದರ ಹಾಗೆ ವರ್ತಿಸುವುದು ಹಾಗೂ ಭಾರತೀಯ ನಾಗರಿಕತ್ವಕ್ಕಾಗಿ ನೇರವಾಗಿ ಭಾರತದ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸುವುದು, ಇದು ಅವಳ ೫ ನೇ ತರಗತಿ ಉತ್ತೀರ್ಣ ಹಾಗೂ ಮುಸ್ಲಿಮ್ ವಾತಾವರಣದಲ್ಲಿ ಬೆಳೆದಿರುವ ಮಹಿಳೆಯ ಲಕ್ಷಣವಲ್ಲ. ಇದರಿಂದ ಸೀಮಾ ಧೂರ್ತಳೆಂದು ಅನಿಸುತ್ತದೆ. ಈ ಧೂರ್ತತನ
ಐ.ಎಸ್.ಐ. ಕಲಿಸಿರಬಾರದೇಕೆ ?
ಔ. ಪಾಕಿಸ್ತಾನದಿಂದ ಅನೇಕ ಪಾಕಿಸ್ತಾನಿ ಮುಸಲ್ಮಾನ ನಾಗರಿಕರು ಅಧಿಕೃತ ಮಾರ್ಗದಿಂದ ಭಾರತಕ್ಕೆ ಬರುತ್ತಾರೆ; ಆದರೆ ವೀಸಾ ಮುಗಿದರೂ ಅವರು ಹಿಂತಿರುಗುವುದಿಲ್ಲ. ಅನೇಕ ಬಾರಿ ಭಾರತೀಯ ವ್ಯವಸ್ಥೆಗೆ ಅವರ ಸುಳಿವೇ ಸಿಗುವುದಿಲ್ಲ. ಸಚಿನ್ ಮತ್ತು ಸೀಮಾ ಕಾನೂನು ಪದ್ಧತಿಯಲ್ಲಿ ವಿವಾಹ ಮಾಡದೆ ಒಟ್ಟಿಗೆ ಇರುತ್ತಿದ್ದರೆ ಸೀಮಾಳ ಗುಟ್ಟು ಬಯಲಾಗುತ್ತಿರಲಿಲ್ಲ. ಹೀಗೆ ಎಷ್ಟು ಸೀಮಾ ಹೈದರರು ಭಾರತದಲ್ಲಿ ಸುಖವಾಗಿ ಬಾಳುತ್ತಿರಬಹುದು, ಎಂಬುದರ ಕಲ್ಪನೆ ಮಾಡಲೂ ಸಾಧ್ಯವಿಲ್ಲ. ಹೀಗೆ ಭಾರತದಲ್ಲಿ ಅಡಗಿರುವ ಅನೇಕ ಸೀಮೆಗಳಿಂದ ಗಮನವನ್ನು ಬೇರೆ ಕಡೆಗೆ ಹೊರಳಿಸಲು ಐ.ಎಸ್.ಐ. ಯೋಜನೆ ಮಾಡಿ ‘ಸೀಮಾ ಹೈದರ್ ಕಾಂಡ’ ಮಾಡಿರಲಿಕ್ಕಿಲ್ಲವಲ್ಲ ?
ಸೀಮಾ ಹೈದರಳ ಸತ್ಯವನ್ನು ಭಯೋತ್ಪಾದನಾ ನಿಗ್ರಹ ದಳದವರು ಶೀಘ್ರವೇ ಕಂಡು ಹಿಡಿಯುವರು; ಆದರೆ ಅವಳ ವಿಚಾರಣೆ ಮಾಡುವುದು ಆವಶ್ಯಕವೆಂದು ತನಿಖಾದಳಕ್ಕೆ ಅನಿಸುವುದರಲ್ಲಿಯೆ ಎಲ್ಲವೂ ಅಡಗಿದೆ.
೫. ಪಾಕಿಸ್ತಾನದ ಕಪಟ ನಾಟಕವನ್ನು ಗುರುತಿಸಲು ನಿರಂತರ ಜಾಗೃತವಾಗಿರಬೇಕು !
ಕಳೆದ ೧೦ ವರ್ಷಗಳಲ್ಲಿ ಪಾಕಿಸ್ತಾನದ ಜಿಹಾದಿಗಳ ಹಾಗೂ ಭಯೋತ್ಪಾದಕರ ವಿವಿಧ ಪದ್ಧತಿಗಳು ಜಗತ್ತಿನಾದ್ಯಂತ ಬೆಳಕಿಗೆ ಬಂದಿವೆ. ಈಗ ಭಾರತದ ವಿರುದ್ಧ ಭಯೋತ್ಪಾದಕ ಕಾರ್ಯಾಚರಣೆ ಮಾಡುವುದೆಂದರೆ ತನ್ನ ಕಾಲಿಗೇ ಕೊಡಲಿಯೇಟು ಎಂಬುದನ್ನು ಪಾಕಿಸ್ತಾನ ಚೆನ್ನಾಗಿ ಗುರುತಿಸಿದೆ. ಆದ್ದರಿಂದಲೇ ಪಾಕಿಸ್ತಾನ ಭಾರತದ ವಿರುದ್ಧ ಸೈಬರ್ ವಾರ್ (ಗಣಕಯಂತ್ರದ ಸ್ತರದಲ್ಲಿನ ಯುದ್ಧ), ಸಾಮಾಜಿಕ ಮಾಧ್ಯಮ, ‘ಹನಿಟ್ರಾಪ್’ (ಶತ್ರುಗಳು ಮಹಿಳೆಯರ ಮೂಲಕ ಮಹತ್ವದ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಪ್ರೇಮಜಾಲದಲ್ಲಿ ಸಿಲುಕಿಸುವುದು) ಇತ್ಯಾದಿ ನಾನಾ ವಿಧಗಳ ಕಪಟ ಯುದ್ಧತಂತ್ರಗಳನ್ನು ಅವಲಂಬಿಸಿದೆ. ಮುಖಾಮುಖಿ ಹೋರಾಡುವ ಕ್ಷಮತೆ ಇಲ್ಲದಿರುವುದರಿಂದ ಹಾಗೂ ದಿನದಿಂದ ದಿನಕ್ಕೆ ಆತ್ಮನಿರ್ಭರವಾಗುತ್ತಿರುವ (ಸ್ವಾವಲಂಬಿಯಾಗುತ್ತಿರುವ) ಭಾರತದ ಪ್ರಗತಿಯನ್ನು ನೋಡಿ ಕಂಗಾಲಾಗಿರುವ ಪಾಕಿಸ್ತಾನ ಚಡಪಡಿಸುತ್ತಿದೆ. ಆದ್ದರಿಂದಲೆ ಪಾಕ್‌ಗೆ ಮಹಿಳೆಯರ ಬುರ್ಖಾದ ಮರೆಯಲ್ಲಿದ್ದು ಕಪಟನಾಟಕಗಳನ್ನು ಮಾಡಬೇಕಾಗುತ್ತದೆ. ಇದೆಲ್ಲವನ್ನೂ ನೋಡುವಾಗ ಸಮರ್ಥ ರಾಮದಾಸಸ್ವಾಮಿ ಹೇಳುವ ಹಾಗೆ ನಾವು ‘ನಿರಂತರ ಜಾಗರೂಕರಾಗಿರಬೇಕಾಗಿದೆ ! (ಆಧಾರ : ‘ವಿಶ್ವ ಸಂವಾದ ಕೇಂದ್ರ’ದ ಜಾಲತಾಣ, ೨೭.೭.೨೦೨೩)
ಸಂಪಾದಕೀಯ ನಿಲುವುದೇಶದಲ್ಲಿ ಸಂಶಯಾಸ್ಪದ ರೀತಿಯಲ್ಲಿ ನುಸುಳಿದ ಶತ್ರುದೇಶದ ಮಹಿಳೆಯನ್ನು ಸರಕಾರ ತಕ್ಷಣ ಗಡಿಪಾರು ಮಾಡಬೇಕು ! |