ಲವ್ ಜಿಹಾದ್ ಮತ್ತು ಮತಾಂತರಕ್ಕೆ ಕಡಿವಾಣ ಹಾಕಲು ಗ್ರಾಮ ಪಂಚಾಯಿತಿಗಳಿಂದ ನಿರ್ಣಯ !
ಅಶೋಕನಗರ (ಮಧ್ಯಪ್ರದೇಶ) – ರಾಜ್ಯದಲ್ಲಿ ನಿರಂತರವಾಗಿ ಬಹಿರಂಗವಾಗುತ್ತಿರುವ ಲವ್ ಜಿಹಾದ್ ಮತ್ತು ಮತಾಂತರದ ಘಟನೆಗಳನ್ನು ತಡೆಯುವ ಸಲುವಾಗಿ ಅಶೋಕನಗರ ಜಿಲ್ಲೆಯ 4 ಗ್ರಾಮಗಳಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ವ್ಯಾಪಾರಿಗಳಿಗೆ ಗ್ರಾಮದಲ್ಲಿ ಪ್ರವೇಶಿಸುವುದನ್ನು ನಿಷೇಧಿಸಿವೆ. ಜಿಲ್ಲೆಯ ಧೌರಾ ಗ್ರಾಮದ ಪಂಚಾಯಿತಿ ಸಭೆಯಲ್ಲಿ ಸರಪಂಚರು ಈ ರೀತಿಯ ಪ್ರಸ್ತಾವನೆಯನ್ನು ಮುಂದಿಟ್ಟರು. ಇದಕ್ಕೆ ಗ್ರಾಮಸ್ಥರೆಲ್ಲರೂ ಅನುಮೋದನೆ ನೀಡಿದ ನಂತರ ಈ ನಿರ್ಣಯವನ್ನು ಅಂತಿಮಗೊಳಿಸಲಾಯಿತು. ಇದರಿಂದಾಗಿ ಪಂಚಾಯಿತಿ ವ್ಯಾಪ್ತಿಯ 4 ಗ್ರಾಮಗಳಲ್ಲಿ ಈ ನಿರ್ಣಯ ಜಾರಿಯಾಗಿದೆ. ಆಗಸ್ಟ್ 7 ರಂದು ಗ್ರಾಮಗಳ ವೃತ್ತಗಳಲ್ಲಿ ಈ ಆದೇಶ ಬರೆದ ಫಲಕವನ್ನು ಹಾಕಲಾಗಿದೆ. ಈ ಫಲಕದಲ್ಲಿ ಕ್ರೈಸ್ತ ಮತ್ತು ಮುಸ್ಲಿಂ ವ್ಯಾಪಾರಿಗಳಿಗೆ ಗ್ರಾಮಗಳಲ್ಲಿ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಹೊರಗಿನಿಂದ ಬರುವ ವ್ಯಾಪಾರಿಗಳು ತಮ್ಮ ಆಧಾರ್ ಕಾರ್ಡ್ ಅನ್ನು ತಮ್ಮೊಂದಿಗೆ ತರಬೇಕು. ಅದರ ಪರಿಶೀಲನೆಯ ನಂತರವೇ ಅವರನ್ನು ಗ್ರಾಮದಲ್ಲಿ ಪ್ರವೇಶಿಸಲು ಅನುಮತಿಸಲಾಗುವುದು. ಈ ನಿರ್ಣಯವನ್ನು ಗ್ರಾಮಸ್ಥರೆಲ್ಲರ ಒಪ್ಪಿಗೆ ಮೇರೆಗೆ ಕೈಗೊಳ್ಳಲಾಗಿದೆ ಎಂದು ಬರೆಯಲಾಗಿದೆ.
गांव में मुस्लिम व इसाई व्यापारियों की एंट्री पर प्रतिबंध, धर्म की जांच करने देखा जाएगा आधार कार्ड #MadhyaPradesh | #MPNews
— IBC24 News (@IBC24News) August 8, 2023
ಸಂಪಾದಕೀಯ ನಿಲುವುಹಿಂದೂಗಳ ಮೇಲಿನ ದಾಳಿಗಳನ್ನು ತಡೆಯುವಲ್ಲಿ ಸರಕಾರಿ ವ್ಯವಸ್ಥೆ ವಿಫಲವಾಗಿರುವುದರಿಂದ ಹಿಂದೂಗಳು ಇಂತಹ ತೀಕ್ಷ್ಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರೆ ತಪ್ಪೇನಿದೆ ? ದೇಶಾದ್ಯಂತ ಹಿಂದೂಗಳನ್ನು ರಕ್ಷಿಸಲು ಈಗಲಾದರೂ ಸರಕಾರ ಕಠಿಣ ಲವ್ ಜಿಹಾದ್ ಮತ್ತು ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುವುದೇ ? |