ಮಣಿಪುರದಲ್ಲಿ ಮತ್ತೆ ಹಿಂಸಾಚಾರ : ಭಯೋತ್ಪಾದಕರಿಂದ ಮೂವರ ಹತ್ಯೆ

ಇಂಫಾಲ್ – ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾದಲ್ಲಿ ಆಗಸ್ಟ್ ೫ ರ ರಾತ್ರಿ ನಡೆದ ಹಿಂಸಾಚಾರದಲ್ಲಿ ಭಯೋತ್ಪಾದಕರು ತಂದೆ, ಮಗ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಹೀಗೆ ಮೂರು ಜನರನ್ನು ಕೊಂದರು. ಮೂವರು ಮಲಗಿದ್ದ ವೇಳೆ ಉಗ್ರರು ಗುಂಡು ಹಾರಿಸಿ ಕತ್ತಿಗಳಿಂದ ತುಂಡರಿಸಿದ್ದಾರೆ. ಪೊಲೀಸರ ಪ್ರಕಾರ, ‘ಈ ಮೂವರು ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುತ್ತಿದ್ದರು; ಆದರೆ ಹಿಂಸಾಚಾರದ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ, ಅವರು ಆಗಸ್ಟ್ ೪ ರಂದು ಕ್ವಾಕ್ಟಾದಲ್ಲಿರುವ ತಮ್ಮ ಮನೆಗೆ ಮರಳಿದ್ದರ” ಎಂದು ಹೇಳಿದರು.

ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಘರ್ಷಣೆ !

ಶನಿವಾರ ಬೆಳಗ್ಗೆ ಕ್ವಾಕ್ಟಾದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಭಾರೀ ಗುಂಡಿನ ಚಕಮಕಿ ನಡೆದು ಅದರಲ್ಲಿ ಮೂವರು ಗಾಯಗೊಂಡಿದ್ದಾರೆ. ಮೂವರು ಗಾಯಾಳುಗಳನ್ನು ಚಿಕಿತ್ಸೆಗಾಗಿ ಇಂಫಾಲ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ.’ ಎಂದು ಹೇಳಿದ್ದಾರೆ. ಹಿಂಸಾಚಾರದ ಘಟನೆಗಳ ಹೆಚ್ಚಳದಿಂದಾಗಿ, ಜಿಲ್ಲಾಡಳಿತವು ಇಂಫಾಲ್ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ಅನ್ನು ಸ್ವಲ್ಪ ಬಿಗಿಗೊಳಿಸಿದೆ.