ಒಂದೂವರೆ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಂದ ಇಸ್ಮಾಯಿಲ್‌ಗೆ ಗಲ್ಲು ಶಿಕ್ಷೆ !

ಸೂರತ (ಗುಜರಾತ್) – ಸೂರತ ಜಿಲ್ಲಾ ನ್ಯಾಯಾಲಯವು ಆಗಸ್ಟ್ 2, 2023 ರಂದು ನೀಡಿದ ಒಂದು ಐತಿಹಾಸಿಕ ತೀರ್ಪಿನಲ್ಲಿ, ಒಂದೂವರೆ ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ಆರೋಪದಲ್ಲಿ ಇಸ್ಮಾಯಿಲ್ ಉಪಾಖ್ಯ ಯೂಸುಫ ಸಲೀಮ (23 ವರ್ಷ) ಗೆ ಗಲ್ಲು ಶಿಕ್ಷೆ ವಿಧಿಸಿತು. ಅತ್ಯಾಚಾರದ ಘಟನೆ ಬೆಳಕಿಗೆ ಬಂದ ತಕ್ಷಣ ಸರಕಾರ, ಆಡಳಿತದಿಂದ ಹಿಡಿದು ಪೊಲೀಸರವರೆಗೆ ಎಲ್ಲಾ ವ್ಯವಸ್ಥೆಗಳು ಜಾಗರೂಕವಾದವು. ಕೇವಲ 11 ದಿನಗಳಲ್ಲಿ ಆರೋಪಿಗಳ ವಿರುದ್ಧ ಆರೋಪ ಪತ್ರ ಸಲ್ಲಿಸಲಾಯಿತು. ಜುಲೈ 31, 2023 ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು ಎಲ್ಲಾ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿ ಇಸ್ಮಾಯಿಲ್‌ಗೆ ಶಿಕ್ಷೆ ವಿಧಿಸಿತು. ಅದರ ನಂತರ, ಆಗಸ್ಟ್ 2, 2023 ಈ ದಿನವನ್ನು ಶಿಕ್ಷೆಗಾಗಿ ನಿಗದಿಪಡಿಸಲಾಗಿತ್ತು.

ಸಂಪಾದಕೀಯ ನಿಲುವು

ಕಾಮುಕ ಮತಾಂಧ ! ಇಂತವರ ವಿರುದ್ಧ ಅಬು ಅಝಮಿ, ಓವೈಸಿಯಂತಹ ನಾಯಕರು ಎಂದೂ ಬಾಯಿ ಬಿಡುವುದಿಲ್ಲ, ಎಂಬುದನ್ನು ಗಮನಿಸಿ !