‘ಭಾರತ ಮತ್ತು ಪಾಕಿಸ್ತಾನದ ನಡುವೆ ಚರ್ಚೆ ನಮ್ಮ ಬೆಂಬಲವಿದೆಯಂತೆ ! – ಅಮೇರಿಕಾ

ವಾಷಿಂಗ್ಟನ್ (ಅಮೆರಿಕ) – ನಾವು ಹಿಂದೆ ಹೇಳಿದಂತೆ ಭಾರತ ಮತ್ತು ಪಾಕಿಸ್ತಾನ ಇವರಲ್ಲಿನ ವಿವಾದಿತ ಅಂಶಗಳ ಬಗ್ಗೆ ನೇರ ಚರ್ಚೆ ನಡೆಸಲು ನಾವು ಬೆಂಬಲ ನೀಡುತ್ತೇವೆ ಎಂದು ಅಮೇರಿಕಾದ ವಿದೇಶಾಂಗ ಸಚಿವಾಲಯದ ವಕ್ತಾರ ಮ್ಯಾಥ್ಯು ಮಿಲರ ಹೇಳಿಕೆ ನೀಡಿದರು.

ಪಾಕಿಸ್ತಾನದ ಪ್ರಧಾನಮಂತ್ರಿ ಶಹಾಬಾಜ ಶರೀಫ್ ಇವರು ಎರಡು ದಿನಗಳ ಹಿಂದೆ ಭಾರತದ ಜೊತೆಯ ಚರ್ಚಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮ್ಯಾಥ್ಯು ಮಿಲರ ಇವರಿಗೆ ಪ್ರಶ್ನೆ ಕೇಳಲಾಗಿತ್ತು. ಈ ಮೊದಲು ಇದೇ ವರ್ಷ ಮಾರ್ಚನಲ್ಲಿ ಅಮೆರಿಕಾದ ವಿದೇಶಾಂಗ ಸಚಿವಾಲಯದ ಆಗಿನ ವಕ್ತಾರ ನೆಡ್ ಪ್ರೈಸ್ ಇವರು ಒಂದು ಪ್ರಶ್ನೆಯ ಉತ್ತರ ನೀಡುವಾಗ, ಅಮೇರಿಕಾ ಎರಡು ದೇಶದ ಚರ್ಚೆಗಾಗಿ ಸಿದ್ಧಗೊಳಿಸಲು ತಯಾರಿದೆ ಆದರೆ ಅವರೇ ಇದಕ್ಕಾಗಿ ತಯಾರಾಗಬೇಕು. ನಾವು ಮಧ್ಯಸ್ಥಿಕೆ ವಹಿಸಲು ಸಿದ್ಧರಿದ್ದೇವೆ ಎಂದು ಹೇಳಿದರ

ಸಂಪಾದಕೀಯ ನಿಲುವು

‘ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಇತ್ತು ಮತ್ತು ಯಾವಲು ಇರಲಿದೆ. ಆದ್ದರಿಂದ ಪಾಕಿಸ್ತಾನದ ಜೊತೆಗೆ ಚರ್ಚೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ ಅಮೇರಿಕಾ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಬಾರದೆಂದು ಭಾರತ ಅಮೆರಿಕಾಗೆ ತಾಕೀತ್ತು ಮಾಡಬೇಕು !

ಭಾರತ ಮತ್ತು ಪಾಕಿಸ್ತಾನ ಇವರಲ್ಲಿನ ಸಮಸ್ಯೆ ಪರಿಹರಿಸುವುದಕ್ಕೆ ಪಾಕಿಸ್ತಾನವು ಮೊದಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತಕ್ಕೆ ಹಿಂತಿರುಗಿಸಬೇಕು ಮತ್ತು ಕಾಶ್ಮೀರದಲ್ಲಿ ನಡೆಸುವ ಪಾಕಿಸ್ತಾನ ಪೋಷಿತ ಭಯೋತ್ಪಾದನೆ ನಿಲ್ಲಿಸಬೇಕು ! ಹೀಗಾದರೆ ಚರ್ಚೆ ನಡೆಸುವ ಅವಶ್ಯಕತೆಯೇ ಇರುವುದಿಲ್ಲ !