ಚೀನಾದಲ್ಲಿ ಇನ್ನು ಅಪ್ರಾಪ್ತ ಮಕ್ಕಳಿಗೆ ದಿನದಲ್ಲಿ ಕೇವಲ ಎರಡು ಗಂಟೆಯ ಕಾಲ ಇಂಟರ್ನೆಟ್ ಉಪಯೋಗ !

ಬೀಜಿಂಗ (ಚೀನಾ) – ಚೀನಾ ಸರಕಾರ ಅಪ್ರಾಪ್ತ ಮಕ್ಕಳಿಗೆ ಇಂಟರ್ನೆಟ್ ಉಪಯೋಗಿಸುವ ಕುರಿತು ಕೆಲವು ಮಿತಿಗಳನ್ನು ಹೇರಲು ಯೋಚಿಸುತ್ತಿದೆ. ಇದರ ಅಡಿಯಲ್ಲಿ ೧೮ ವರ್ಷ ವಯಸ್ಸಿಗಿಂತಲೂ ಕಡಿಮೆ ವಯಸ್ಸಿನ ಮಕ್ಕಳಿಗೆ ದಿನದಲ್ಲಿ ಗರಿಷ್ಠ ಎರಡು ಗಂಟೆ ಮೊಬೈಲ್ ನಲ್ಲಿ ಇಂಟರ್ನೆಟ್ ಉಪಯೋಗಿಸುವ ಅವಕಾಶವಿದೆ. ಇದರ ಅಂತರ್ಗತ ಚೀನಾ ಸರಕಾರದಿಂದ ಎಲ್ಲಾ ಮೊಬೈಲ್ ಕಂಪನಿಗೆ, ‘ಮೈನರ್ ಮೋಡ’ ಎಂದು ಒಂದು ವಿಧಾನ ಕಂಡುಹಿಡಿಯಿರಿ. ಇದರಿಂದ ಮಕ್ಕಳು ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೬ ರ ಕಾಲಾವಧಿಯಲ್ಲಿ ಇಂಟರ್ನೆಟ್ ಉಪಯೋಗಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದರ ಬಗ್ಗೆ ಜನರಿಂದ ಅಭಿಪ್ರಾಯ ಕೇಳಲಾಗಿದ್ದೂ ಸೆಪ್ಟೆಂಬರ್ ೨ ರ ವರೆಗೆ ಅದನ್ನು ಸರಕಾರಕ್ಕೆ ಕಳುಹಿಸುವರು, ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.

ಈ ನಿರ್ಣಯದ ಪ್ರಕಾರ ೧೬ ರಿಂದ ೧೮ ವಯಸ್ಸಿನ ಮಕ್ಕಳು ಗರಿಷ್ಠ 2 ಗಂಟೆ ಇಂಟರ್ನೆಟ್ ಉಪಯೋಗಿಸಬಹುದು. ೮ ರಿಂದ ೧೬ ವರ್ಷದ ಮಕ್ಕಳು ಒಂದು ಗಂಟೆ ಹಾಗೂ ಅದಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಕೇವಲ ೮ ನಿಮಿಷ ಇಂಟರ್ನೆಟ್ ಉಪಯೋಗಿಸಬಹುದು.

ಸಂಪಾದಕೀಯ ನಿಲುವು

ಭಾರತ ಸರಕಾರ ಕೂಡ ಮಕ್ಕಳುನ್ನು ಮೊಬೈಲ ಚಟದಿಂದ ಹೊರ ತರುವುದಕ್ಕಾಗಿ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !