‘ಜಿ-೨೦ ಯಲ್ಲಿ ಸದ್ಯ ೧೯ ದೇಶಗಳು ಹಾಗೂ ಯುರೋಪಿಯನ್ ಮಹಾಸಂಘ ಹೀಗೆ ಸದಸ್ಯ ದೇಶಗಳಿವೆ. ಶ್ರೀನಗರದಲ್ಲಿನ ಸಭೆಯಲ್ಲಿ ಇವುಗಳ ಪೈಕಿ ಒಟ್ಟು ೧೬ ದೇಶಗಳು ಹಾಗೂ ಯುರೋಪೀಯನ್ ಮಹಾಸಂಘ ಉಪಸ್ಥಿತವಿತ್ತು. ‘ಜಿ-೨೦’ ಸಂಘಟನೆಯ ಕಾರ್ಯಘಟಕಗಳ ಎಷ್ಟು ಸಭೆಗಳು ಕಳೆದ ಕೆಲವು ಕಾಲಾವಧಿಯಲ್ಲಿ ನೇರವೇರಿದವು, ಆ ಎಲ್ಲ ಸಭೆಗಳಿಗಿಂತ ಅತೀ ಹೆಚ್ಚು ಸದಸ್ಯರು ಶ್ರೀನಗರದ ಸಭೆಯಲ್ಲಿ ಉಪಸ್ಥಿತರಿದ್ದರು. ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ, ಅಮೇರಿಕಾ, ರಶಿಯಾ, ಇಂಗ್ಲೆಂಡ್, ಫ್ರಾನ್ಸ್ ಹಾಗೂ ಚೀನಾ ಈ ಸುರಕ್ಷಾ ಪರಿಷತ್ತಿನ ೫ ಶಾಶ್ವತ ಸದಸ್ಯರಲ್ಲಿ ಚೀನಾದ ಹೊರತು ಉಳಿದ ೪ ಶಾಶ್ವತ ಸದಸ್ಯ ದೇಶಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಆದ್ದರಿಂದ ಈ ಸಭೆ ಅಭೂತಪೂರ್ವ ರೂಪದಲ್ಲಿ ಯಶಸ್ವಿಯಾಯಿತು. ಪಾಕಿಸ್ತಾನ ಹಾಗೂ ಚೀನಾಗೆ ಈ ಘಟನೆ ಒಂದು ಛಡಿಯೇಟೇ ಆಗಿದೆ.
೧. ‘ಜಿ-೨೦’ಯ ಅಧ್ಯಕ್ಷತೆ ಸಿಕ್ಕಿದಾಗಿನಿಂದ ಭಾರತದಲ್ಲಿ ವಿವಿಧ ಸಭೆಗಳು ಯಶಸ್ವಿಯಾಗಿ ಆಯೋಜಿಸಲ್ಪಟ್ಟವು
‘ಜಿ-೨೦’ಯ ಅಧ್ಯಕ್ಷತೆ ಭಾರತದ ಕಡೆಗೆ ಬಂದನಂತರ ಅದನ್ನು ನಿಜವಾದ ಅರ್ಥದಲ್ಲಿ ಆಚರಿಸುವ ನಿರ್ಣಯವನ್ನು ಕೇಂದ್ರಸರಕಾರ ತೆಗೆದುಕೊಂಡಿತು. ಈ ಆಚರಣೆಗೆ ಪ್ರದರ್ಶನದ ಆಡಂಬರ ಇಲ್ಲ, ಅದನ್ನು ಒಂದು ಪ್ರಕಾರದ ಚಳುವಳಿ ಎಂದು ಅದರ ಕಡೆಗೆ ನೋಡಲಾಗುತ್ತಿದೆ. ಇದರಲ್ಲಿ ‘ದೇಶದ ಎಲ್ಲ ಜನರ ಸಹಭಾಗ ಇರಬೇಕೆಂದು, ‘ಜಿ-೨೦’ ಸಂಘಟನೆ ಅಂದರೆ ನಿರ್ದಿಷ್ಟವಾಗಿ ಏನಾಗಿದೆ ? ಅದರ ಮಹತ್ವ ಏನು ? ಇಲ್ಲಿಂದ ಹಿಡಿದು ಅದು ಭಾರತದ ಕಡೆಗೆ ಬಂದಿರುವ ಅಧ್ಯಕ್ಷತೆಯ ನಿಜವಾದ ಪರಿಣಾಮ ಏನಾಗಲಿಕ್ಕಿದೆ ? ಎಂಬುದರ ಮಾಹಿತಿ ಜನರಿಗೆ ತಿಳಿಯಬೇಕು’, ಇದನ್ನು ಅದರ ಮುಖ್ಯ ಉದ್ದೇಶವನ್ನಾಗಿ ಮಾಡಲಾಗಿದೆ. ಈ ಜನರ ಸಹಭಾಗದಿಂದ ನಿಜವಾದ ಅರ್ಥದಲ್ಲಿ ವಿದೇಶ ಧೋರಣೆಗೆ ಪ್ರಜಾಪ್ರಭುತ್ವಿಕರಣ ಆಗಬೇಕು ಇದು ಇದರ ಹಿಂದಿನ ಭೂಮಿಕೆಯಾಗಿದೆ. ಅದಕ್ಕನುಸಾರ ಭಾರತದ ವಿವಿಧ ನಗರಗಳಲ್ಲಿ ೨೫೦ ಸಭೆಗಳನ್ನು ಆಯೋಜಿಸಲಾಗುತ್ತಿದ್ದು ಅವು ಅತೀ ಉತ್ಸಾದಿಂದ ನೆರವೇರುತ್ತಿವೆ.
೨. ಜಮ್ಮು-ಕಾಶ್ಮೀರದಲ್ಲಿ ‘ಜಿ-೨೦’ಯ ಪ್ರವಾಸ ಕಾರ್ಯಸಮೂಹದ ಸಭೆ ನೆರವೇರಿದ ಕಾರಣ ಶಾಂತಿಯ ಗಾಳಿ ಬೀಸುತ್ತಿರುವುದರ ಸ್ಪಷ್ಟವಾಗಿ ಕಾಣಿಸುತ್ತಿದೆ
ಈ ಎಲ್ಲ ಸಭೆಗಳಲ್ಲಿನ ಒಂದು ಮಹತ್ವದ ಸಭೆ ಇತ್ತೀಚೆಗೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನೆರವೇರಿತು. ಈ ಸಭೆ ‘ಜಿ-೨೦’ ಸಂಘಟನೆಯ ಪ್ರವಾಸ ಕೃತಿ ಸಮೂಹದ್ದಾಗಿತ್ತು. ಅದು ಅನೇಕ ಅರ್ಥದಿಂದ ಮಹತ್ವದ್ದಾಯಿತು. ಇದರ ಒಂದು ಕಾರಣವೆಂದರೆ ಪ್ರವಾಸ ಹಾಗೂ ಜಮ್ಮು-ಕಾಶ್ಮೀರಕ್ಕಿದ್ದ ಉತ್ತಮ ಸಂಬಂಧ. ಪ್ರವಾಸೋದ್ಯಮದಿಂದಲೇ ಜಮ್ಮು-ಕಾಶ್ಮೀರಕ್ಕೆ ಹೆಚ್ಚಿನ ಆದಾಯ ಬರುತ್ತದೆ. ಜಮ್ಮು-ಕಾಶ್ಮೀರನ್ನು ‘ಪೃಥ್ವಿಯ ಮೇಲಿನ ನಂದನವನ’ವೆಂದು ಗುರುತಿಸಲಾಗುತ್ತದೆ. ಜಗತ್ತಿನಾದ್ಯಂತದ ಪ್ರವಾಸಿಗಳಿಗೆ ಕಾಶ್ಮೀರದ ನಿಸರ್ಗಸೌಂದರ್ಯದ ವೈಶಿಷ್ಟ್ಯ ಮೊದಲಿನಿಂದಲೇ ತಿಳಿದಿದೆ. ಪ್ರತಿವರ್ಷ ಜಗತ್ತಿನಾದ್ಯಂತದ ಭಾರತಕ್ಕೆ ಬರುವ ಪ್ರವಾಸಿಗಳು ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಆದರೂ ಕೆಲವು ವರ್ಷಗಳ ಹಿಂದೆ ಜಮ್ಮು-ಕಾಶ್ಮೀರವು ಭಯೋತ್ಪಾದಕ ಹಿಂಸಾಚಾರದ ತಾಣವೆಂದು ಜಗತ್ತಿನಲ್ಲಿ ಎಲ್ಲಕಡೆಗಳಲ್ಲಿ ಗುರುತಿಸಲು ಆರಂಭವಾಯಿತು. ಪಾಕಿಸ್ತಾನ ಪುರಸ್ಕೃತ ಭಯೋತ್ಪಾದಕ ಸಂಘಟನೆಗಳು ಈ ನಂದನವನದಲ್ಲಿ ರಾಷ್ಟ್ರದ್ವೇಷದ ವಿಷಬೀಜಗಳನ್ನು ಬಿತ್ತಿದವು ಹಾಗೂ ಅಲ್ಲಿನ ಶಾಂತಿಗೆ ಗ್ರಹಣ ಹಿಡಿಯಿತು. ಬಹಳಷ್ಟು ಕಾಲ ಈ ಭಯೋತ್ಪಾದಕರ ವಿರುದ್ಧದ ಯುದ್ಧ ಮುಂದುವರಿಯಿತು. ೨೦೧೪ ರಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಬಂದನಂತರ ಕಾಶ್ಮೀರದಲ್ಲಿನ ಶಾಂತಿಯ ಬಗ್ಗೆ ಗಾಂಭೀರ್ಯದಿಂದ ನೋಡಿಕೊಳ್ಳುವುದರ ಜೊತೆಗೆ ಕಾಶ್ಮೀರದ ಎಲ್ಲ ಸಮಸ್ಯೆಗಳಿಗೆ ಒಂದು ಬೇರೆಯೆ ದೃಷ್ಟಿಕೋನವನ್ನು ನೀಡಲಾಯಿತು. ಇದರಲ್ಲಿ ಪ್ರಾಮುಖ್ಯವಾಗಿ ಸೈನಿಕರಿಗೆ ನಿರ್ಣಯಾಧಿಕಾರವನ್ನು ನೀಡಲಾಯಿತು. ಆ ಮೇಲೆ ೨೦೧೯ ರಲ್ಲಿ ಕಲಮ್ ೩೭೦ (ಜಮ್ಮು-ಕಾಶ್ಮೀರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ನೀಡುವ ಕಲಮ್) ಹಾಗೂ ೩೫ ಅ ರದ್ದುಪಡಿಸಿ ಕೇಂದ್ರ ಸರಕಾರ ‘ಮಾಸ್ಟರ್‌ಸ್ಟ್ರೋಕ್’ (ಅತ್ಯಂತ ಕುಶಲ ಹಾಗೂ ತಕ್ಕ ಸಮಯದಲ್ಲಿ ಮಾಡಿದ ಕೃತಿ) ನೀಡಲಾಯಿತು. ಭಾರತೀಯ ಸೈನಿಕರು ಕೂಡ ‘ಮಿಶನ್ ಆಲ್ಟ್’ (ಭಯೋತ್ಪ್ಪಾದನೆ ಮುಕ್ತ ಅಭಿಯಾನ) ವನ್ನು ಹಮ್ಮಿಕೊಂಡು ಜಮ್ಮು-ಕಾಶ್ಮೀರದಲ್ಲಿನ ಭಯೋತ್ಪಾದಕರ ಹೆಡೆಮುರಿ ಕಟ್ಟಲಾಯಿತು. ‘ಎನ್.ಐ.ಎ. (ರಾಷ್ಟ್ರೀಯ ತನಿಖಾ ವಿಭಾಗ)’ದಂತಹ ಸಂಸ್ಥೆಗಳು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳ ಆರ್ಥಿಕ ನಾಡಿಯನ್ನು ಅದುಮಿದುವು. ಇವೆಲ್ಲವುಗಳ ಪರಿಣಾಮ ಇಂದು ಸ್ಪಷ್ಟವಾಗಿ ಕಾಣಿಸುತ್ತ್ತಿದೆ.
ಕಳೆದ ೪ ವರ್ಷಗಳಲ್ಲಿ ಕಾಶ್ಮೀರದಲ್ಲಿನ ಹಿಂಸಾಚಾರದ ಪ್ರಮಾಣ ಬಹಳಷ್ಟು ಕಡಿಮೆ ಆಗಿದೆ. ಕಾಶ್ಮೀರ ಬದಲಾಗುತ್ತಿದೆ. ಈ ಬದಲಾವಣೆಗೆ ಮುದ್ರೆಯೊತ್ತುವ ಕಾರ್ಯವನ್ನು ಜಿ-೨೦’ಯ ಪ್ರವಾಸಸಮೂಹದ ಸಭೆಯು ಮಾಡಿದೆ. ಕೆಲವು ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಇಂತಹ ಸಭೆಯ ಆಯೋಜನೆ ಮಾಡುವ ವಿಚಾರವನ್ನು ಕೂಡ ಯಾರೂ ಮಡುತ್ತಿರಲಿಲ್ಲ; ಆದರೆ ಈಗಿನ ಕೇಂದ್ರ ಸರಕಾರ ಕೇವಲ ವಿಚಾರ ಮಾಡುವುದಲ್ಲ, ಅದನ್ನು ಪ್ರತ್ಯಕ್ಷ ಕಾರ್ಯರೂಪಕ್ಕೆ ತಂದು ಯಶಸ್ವಿಯಾಗಿ ನೆರವೇರಿಸಿತು. ಇದರಿಂದ ಕೇಂದ್ರ ಸರಕಾರದ ನಿಯೋಜನ ಕೌಶಲ್ಯ ಹಾಗೂ ನಿರ್ಧಾರದ ಕ್ಷಮತೆಯ ತುಣುಕು ಜಗತ್ತಿಗೆ ಕಾಣಿಸಿತು. ಒಂದು ಕಾಲದಲ್ಲಿ ಭಯೋತ್ಪಾದಕ ಹಿಂಸಾಚಾರದಿಂದ ಜಗತ್ತಿನಾದ್ಯಂತ ಅಶಾಂತಿ, ಅಸುರಕ್ಷಿತ ಕ್ಷೇತ್ರವೆಂದು ಗುರುತಿಸಲ್ಪಡುತ್ತಿದ್ದ ಕಾಶ್ಮೀರದಲ್ಲಿ ಜಗತ್ತಿನ ಅತೀ ದೊಡ್ಡ ಅಂತರರಾಷ್ಟ್ರೀಯ ಸಂಘಟನೆಯ ಸಭೆಯು ನಿರ್ವಿಘ್ನವಾಗಿ ಹಾಗೂ ಸುಖದಾಯಕವಾಗಿ ನೆರವೇರುವುದರಿಂದ ಸಂಪೂರ್ಣ ಜಗತ್ತಿಗೆ ಒಂದು ಸಂದೇಶ ಹೋಗಿದೆ. ಈ ಪ್ರದೇಶದಲ್ಲಿ ಶಾಂತಿಯ ಗಾಳಿ ಬೀಸಲು ಆರಂಭವಾಗಿರುವುದರ ಸ್ಪಷ್ಟ ಸಂಕೇತ ಈ ಸಭೆಯ ಉಶಸ್ಸಿನಿಂದ ಸಿಕ್ಕಿದೆ. ಈ ಪರಿಷತ್ತಿನ ದೂರದೃಷ್ಟಿಯ ಸಕಾರಾತ್ಮಕ ಪರಿಣಾಮ ಭವಿಷ್ಯದಲ್ಲಿ ಕಾಶ್ಮೀರದಲ್ಲಿ ಕಾಣಿಸಲಿಕ್ಕಿದೆ. ಕಾಶ್ಮೀರ ಅಲ್ಲಿನ ಹಸ್ತಕಲೆಗಾಗಿ (ಹ್ಯಾಂಡ್‌ಕ್ರಾಫ್ಟ್) ಜಗತ್ತಿನಾದ್ಯಂತ ಪ್ರಸಿದ್ದವಿದೆ. ಆದುದರಿಂದ ಜಮ್ಮು-ಕಾಶ್ಮೀರದ ಆಡಳಿತವು ‘ಜಿ-೨೦’ ಸಭೆಗಾಗಿ ‘ಕ್ರಾಫ್ಟ್’ ಮಾರುಕಟ್ಟೆಯನ್ನೂ ಆಯೋಜಿಸಿತ್ತು. ಇದರಲ್ಲಿ ಹ್ಯಾಂಡ್‌ಕ್ರಾಫ್ಟ್’ ವಸ್ತುಗಳ ಪ್ರದರ್ಶನದೊಂದಿಗೆ ಈ ವಸ್ತುಗಳನ್ನು ಹೇಗೆ ತಯಾರಿಸಲಾಗುತ್ತದೆ, ಎಂಬುದರ ಆಯೋಜನೆಯನ್ನೂ ಮಾಡಲಾಗಿತ್ತು. ಇದರಲ್ಲಿ ಕಾಶ್ಮೀರಿ ಶಾಲ್ ಮತ್ತು ಕಾಲೀನ ಸಹಿತ ಮಾಚಿಸ್ ಮತ್ತು ತಾಮ್ರದ ವಸ್ತುಗಳ ಪ್ರದರ್ಶನವನ್ನೂ ಇಡಲಾಗಿತ್ತು.
೩. ಪಾಕಿಸ್ತಾನದಿಂದ ಭಯೋತ್ಪಾದಕ ಆಕ್ರಮಣದ ಸಾಧ್ಯತೆ ಇದ್ದರೂ ಪ್ರವಾಸಸಮೂಹದ ಗುಂಪಿನ ಸಭೆ ನಿರ್ವಿಘ್ನವಾಗಿ ನೆರವೇರುವುದು
ಕಾಶ್ಮೀರದಲ್ಲಿನ ಈ ಸಭೆಯ ಆಯೋಜನೆಯಲ್ಲಿ ಅತಿ ದೊಡ್ಡ ಅಪಾಯವೂ ಇತ್ತು, ಏಕೆಂದರೆ, ಪಾಕಿಸ್ತಾನ ಪ್ರಾರಂಭದಿಂದಲೆ ಈ ಸಭೆಗೆ ವಿರೋಧ ಮಾಡಿತ್ತು. ಪಾಕಿಸ್ತಾನ ೨ ಪದ್ಧತಿಯಲ್ಲಿ ಈ ಸಭೆಯನ್ನು ನಿಷ್ಫಲಗೊಳಿಸಲು ಹೊಂಚು ಹಾಕಿತ್ತು. ಒಂದು ಜಮ್ಮು-ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರ ಸಂಘಟನೆಗಳ ಮೂಲಕ ಈ ಸಭೆಯ ಪರಿಸರದಲ್ಲಿ ಭಯೋತ್ಪಾದನೆಯ ಆಕ್ರಮಣ ಮಾಡುವುದು. ಈ ಸಭೆಯಲ್ಲಿ ಭದ್ರತೆಯ ದೃಷ್ಟಿಯಲ್ಲಿ ಒಂದು ಸಣ್ಣ ತಪ್ಪಾದರೂ ಅದು ದೇಶದ ಪ್ರತಿಷ್ಠೆ ಹಾಗೂ ವಿಶ್ವಾಸಾರ್ಹತೆಗೆ ಅಪಾಯವನ್ನುಂಟು ಮಾಡುವುದಾಗಿತ್ತು. ಆದ್ದರಿಂದ ಈ ಸಭೆಯ ಭದ್ರತೆಗಾಗಿ ಶ್ರೀನಗರದಲ್ಲಿ ‘ಸ್ಪೆಶಲ್ ಫೋರ್ಸ್’ನ ‘ಮಾರ್ಕೋಸ್ ಕಮಾಂಡೊ’ ವನ್ನು ನೇಮಕ ಮಾಡಲಾಗಿತ್ತು. ‘ಮಾರ್ಕೋಸ್’ ಇದು ಭಾರತೀಯ ನೌಕಾದಳದ ‘ಸ್ಪೆಶಲ್ ಮರೀನ್ ಕಮಾಂಡೋ’ ಆಗಿದೆ. ಈ ಕಮಾಂಡೋಗಳಿಗೆ ಎಷ್ಟು ಕೆಟ್ಟ ಪರಿಸ್ಥಿತಿಯಿದ್ದರೂ, ಅದನ್ನು ನಿಯಂತ್ರಿಸುವ ಕ್ಷಮತೆಯಿದೆ ಎಂದು ಹೇಳಲಾಗುತ್ತದೆ. ಶತ್ರುಗಳ ಯೋಜನೆಯನ್ನು ಕ್ಷಣಾರ್ಧದಲ್ಲಿ ಧೂಳಿಪಟಗೊಳಿಸುವ ಕ್ಷಮತೆ ಅವರಲ್ಲಿದೆ. ಸೈನಿಕರು ಮತ್ತು ಗೂಡಚಾರ ವ್ಯವಸ್ಥೆಯ ಪ್ರಯತ್ನದಿಂದ ‘ಜಿ-೨೦’ ಯ ಸಭೆ ನಿರ್ವಿಘ್ನವಾಗಿ ನೆರವೇರಿತು.
೪. ಪಾಕಿಸ್ತಾನದ ಒತ್ತಡವನ್ನು ಕಡೆಗಣಿಸಿ ಭಾರತವು ಕಾಶ್ಮೀರದಲ್ಲಿ ಅತ್ಯಂತ ಯಶಸ್ವಿ ರೀತಿಯಲ್ಲಿ ಸಭೆಯನ್ನು ನೆರವೇರಿಸಿತು
ಪಾಕಿಸ್ತಾನ ಎರಡನೆಯ ಹಂತದಲ್ಲಿ ಎಲ್ಲ ಇಸ್ಲಾಮೀ ದೇಶಗಳಿಗೆ ಹಾಗೂ ಅದರ ಮಿತ್ರ ದೇಶಗಳಿಗೆ ಈ ಸಭೆಯ ಮೇಲೆ ಬಹಿಷ್ಕಾರ ಹಾಕಲು ಕರೆ ನೀಡಿತ್ತು. ‘ಕಾಶ್ಮೀರ ವಿವಾದಾತ್ಮಕ ಭೂಭಾಗವಾಗಿದ್ದು ಅಲ್ಲಿ ಅಲ್ಪಸಂಖ್ಯಾತರ ಮಾನವಾಧಿಕಾರಗಳ ಉಲ್ಲಂಘನೆಯಾಗುತ್ತಿದೆ, ಅಲ್ಲಿ ಸೈನ್ಯದ ದಬ್ಬಾಳಿಕೆ ನಡೆಯುತ್ತಿದೆ’, ಇತ್ಯಾದಿ ಅಪಪ್ರಚಾರ ಮಾಡಿ ಅಲ್ಲಿಗೆ ಹೋಗಬಾರದೆಂದು ಕರೆ ನೀಡಿತ್ತು. ಪಾಕಿಸ್ತಾನದ ಈ ನಿಲುವಿಗೆ ಅದರ ಸಮೀಪದ ಮಿತ್ರ ಚೀನಾ ಅದನ್ನು ಅನುಮೋದಿಸಿತು. ಚೀನಾ ಕೂಡ ಈ ಸಭೆ ಯಶಸ್ವಿಯಾಗಬಾರದೆಂದು ಸಾಕಷ್ಟು ಪ್ರಯತ್ನ ಮಾಡಿತು ಹಾಗೂ ತುಂಬಾ ಶಕ್ತಿಯನ್ನೂ ಖರ್ಚು ಮಾಡಿತು. ಆದ್ದರಿಂದ ಈ ಸಭೆಯನ್ನು ಸಮಯಕ್ಕನುಸಾರ ಯಶಸ್ವಿಯಾಗಿ ನೆರವೇರಿಸುವುದು ಭಾರತಕ್ಕೆ ಒಂದು ದೊಡ್ಡ ಸವಾಲಾಗಿತ್ತು. ಈ ಸವಾಲನ್ನು ಎದುರಿಸಿ ಭಾರತ ಈ ಸಭೆಯನ್ನು ಅತ್ಯಂತ ಯಶಸ್ವಿ ರೀತಿಯಲ್ಲಿ ನೆರವೇರಿಸಿತು.
೫. ಭಾರತ ಮುತ್ಸದ್ದಿತನದಿಂದ ಪಾಕಿಸ್ತಾನ ಮತ್ತು ಚೀನಾಗೆ ನೀಡಿದ ಸ್ಪಷ್ಟ ಸಂದೇಶ
ಶ್ರೀನಗರಕ್ಕಿಂತ ಮೊದಲು ಲಡಾಕ್‌ನಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ ನೆರವೇರಿದ ‘ಜಿ-೨೦’ ಯ ಸಭೆಗಳಿಗೂ ಚೀನಾದ ಆಕ್ಷೇಪವಿತ್ತು; ಆದರೆ ಭಾರತ ಚೀನಾದ ಆಕ್ಷೇಪವನ್ನು ದುರ್ಲಕ್ಷಿಸಿ ‘ಭಾರತಕ್ಕೆ ತನ್ನ ಸಾರ್ವಭೌಮತ್ವವಿರುವ ಭೂಮಿಯ ಮೇಲೆ ಆಯೋಜನೆ ಮಾಡುವುದರಿಂದ ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ’, ಎಂದು ಸ್ಪಷ್ಟವಾದ ಸಂದೇಶವನ್ನು ಈ ಸಭೆಯಿಂದ ನೀಡಿದೆ. ಅದೇ ರೀತಿ ‘ಜಮ್ಮ-ಕಾಶ್ಮೀರ ಇದು ಭಾರತದ ಅವಿಭಾಜ್ಯ ಅಂಗವಾಗಿದೆ. ಅದು ವಿವಾದಾತ್ಮಕ ಪ್ರದೇಶವಾಗಿಲ್ಲ. ಪಾಕಿಸ್ತಾನ ಸ್ವಾರ್ಥಕ್ಕಾಗಿ ಇತರ ದೇಶಗಳು ಅಲ್ಲಿ ಹಸ್ತಕ್ಷೇಪ ಮಾಡಬೇಕು ಎಂದು ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಕರಣ ಮಾಡಲು ಪ್ರಯತ್ನಿಸುತ್ತಿದೆ, ಭಾರತದ ಈ ನಿಲುವಿಗೆ ‘ಜಿ-೨೦’ಯ ೧೭ ಜನ ಸದಸ್ಯರು ಮನ್ನಣೆ ನೀಡಿದ್ದಾರೆ, ಎಂಬುದನ್ನು ಕೂಡ ಸಭೆ ಸ್ಪಷ್ಟಪಡಿಸಿದೆ. ಈ ಹಿಂದೆ ಇಂತಹ ಅಂತರರಾಷ್ಟ್ರೀಯ ಸಂಘಟನೆಗಳ ಪ್ರನಿಧಿಗಳು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲು ಹಿಂಜರಿಯುತ್ತಿದ್ದರು. ಆದರೆ ಈ ವರ್ಷ ಹಾಗಾಗಲಿಲ್ಲ. ಇದರಿಂದ ಭಾರತದ ಮುತ್ಸದ್ದಿತನ ಹಾಗೂ ವಿದೇಶ ಧೋರಣೆ ಯಶಸ್ವಿಯಾಗಿದೆ.
೬. ಇಸ್ಲಾಮೀ ದೇಶಗಳಿಗೆ ಸಹಾಯ ಮಾಡಿದ್ದರೂ ಅವರು ಪಾಕಿಸ್ತಾನದ ಒತ್ತಡದಿಂದಾಗಿ ‘ಜಿ-೨೦’ ಸಭೆಗೆ ಅನುಪಸ್ಥಿತರಿರುವುದು
ಕಾಶ್ಮೀರದ ಸಂದರ್ಭದಲ್ಲಿನ ಭಾರತದ ಪಾರಂಪರಿಕ ಭೂಮಿಕೆಗೆ ಸಿಕ್ಕಿದ ಬೆಂಬಲ ಇದು ಪಾಕಿಸ್ತಾನ ಹಾಗೂ ಚೀನಾಗೆ ಬಲವಾಗಿ ನೀಡಿದ ಛಡಿಯೇಟ ಆಗಿದೆ ಇಷ್ಟು ಮಾತ್ರವಲ್ಲ, ಪಾಕಿಸ್ತಾನದ ಆವಾಹನದಿಂದ ಈ ಸಭೆಯಲ್ಲಿ ಭಾಗವಹಿಸದ ದೇಶಗಳಿಗೂ ಈ ಘಟನಾವಳಿಗಳ ಛಡಿಯೇಟು ಕೊಡುವುದಾಗಿದೆ. ಸಭೆಗೆ ಅನುಪಸ್ಥಿತರಾಗಿದ್ದವರಲ್ಲಿ ಸೌದಿ ಅರೇಬಿಯಾ, ಓಮಾನ್, ಈಜಿಪ್ತ್, ತುರ್ಕಿ ಹಾಗೂ ಸಂಯುಕ್ತ ಅರಬ ಅಮಿರಾತೀ ಈ ದೇಶಗಳಿದ್ದವು. ಇವುಗಳಲ್ಲಿ ಸಂಯುಕ್ತ ಅರಬ ಅಮಿರಾತಿಯ ಅನುಪಸ್ಥಿತಿ ಚಿಂತಾಜನಕವಾಗಿದೆ, ಏಕೆಂದರೆ ಕಳೆದ ಕೆಲವು ವರ್ಷಗಳಿಂದ ಈ ದೇಶದೊಂದಿಗೆ ಭಾರತದ ಸಂಬಂಧ ತುಂಬಾ ಚೆನ್ನಾಗಿದೆ. ಸೌದಿ ಅರೇಬಿಯಾದ ಸಂಬಂಧದಲ್ಲಿಯೂ ಬಹಳಷ್ಟು ಸುಧಾರಣೆಯಾಗಿದೆ. ಸುದಾನ್‌ನಲ್ಲಿ ಸಿಲುಕಿದ ಭಾರತೀಯರನ್ನು ಬಿಡಿಸಿ ತರುವ ಆಂದೋಲನದಲ್ಲಿ (ರೆಸ್ಕ್ಯೂ ಒಪರೇಶನ್’ನಲ್ಲಿ) ಸೌದಿ ಮಾಡಿದ ಸಹಾಯ ಇದರ ಅನುಭವವಾಗಿದೆ, ಹೀಗಿರುವಾಗ ಈ ದೇಶಗಳು (ಸಂಯುಕ್ತ ಅರಬ ಅಮಿರಾತಿ ಮತ್ತು ಸೌದಿ ಅರೇಬಿಯಾ) ಪಾಕಿಸ್ತಾನದ ಒತ್ತಡಕ್ಕೆ ಸಿಲುಕಿ ಈ ಪರಿಷತ್ತಿಗೆ ಅನುಪಸ್ಥಿತವಾಗಿರುವುದು ಕೆಲವೊಂದು ರೀತಿಯಲ್ಲಿ ಮನಸ್ಸಿಗೆ ಒಪ್ಪಿಗೆ ಆಗದಂತಿದೆ.
ತುರ್ಕಸ್ತಾನದ ವಿಚಾರ ಮಾಡಿದರೆ ಇತ್ತೀಚೆಗೆ ಆಗಿರುವ ಈ ದೇಶದಲ್ಲಿನ ಶಕ್ತಿಶಾಲಿ ಭೂಕಂಪದ ನಂತರ ಎಲ್ಲಕ್ಕಿಂತ ಮೊದಲು ಭಾರತ ಸಹಾಯದ ಹಸ್ತವನ್ನು ಮುಂದೆ ಮಾಡಿತು ಹಾಗೂ ಅತ್ಯಂತ ನಿಯೋಜನಬದ್ಧ ರೀತಿಯಲ್ಲಿ ಸಹಾಯ ಕಾರ್ಯವನ್ನು ಹಮ್ಮಿಕೊಂಡಿತು. ವಾಸ್ತವದಲ್ಲಿ ಜಮ್ಮು-ಕಾಶ್ಮೀರದಲ್ಲಿನ ಕಲಮ್ ೩೭೦ ರದ್ದು ಮಾಡಿದನಂತರ ಭಾರತವನ್ನು ವಿರೋಧಿಸುವ ಪಾಕಿಸ್ತಾನದ ನಂತರ ಎಲ್ಲಕ್ಕಿಂತ ಮೊದಲ ದೇಶ ತುರ್ಕಸ್ಥಾನವಾಗಿತ್ತು. ಇಂದಿನ ವರೆಗೆ ಕಾಶ್ಮೀರದ ವಿಷಯದಿಂದಾಗಿ ಅನೇಕ ಸಂಘಟನೆಗಳಲ್ಲಿಯೂ ಈ ದೇಶ ಭಾರತದ ವಿರುದ್ಧದಲ್ಲಿದೆ ; ಆದರೆ ಭಾರತ ಯಾವುದೇ ದುರಾಗ್ರಹ ಅಥವಾ ದ್ವೇಷವನ್ನಿಟ್ಟುಕೊಳ್ಳದೆ ಮಾನವತೆಯ ಸಂಬಂಧದಿಂದ ಈ ರಾಷ್ಟ್ರಕ್ಕೆ ಸಹಾಯ ಮಾಡಿತ್ತು. ಆದರೂ ತುರ್ಕಸ್ತಾನ ಈ ಸಭೆಗೆ ಅನುಪಸ್ಥಿತ ಇತ್ತು. ಅರ್ಥಾತ್ ಇಂತಹ ರಾಷ್ಟ್ರಗಳ ಅಡಿಪಾಯವೇ ಭಾರತವಿರೋಧಿಯಾಗಿದೆ. ಆದರೆ ಈ ಸಭೆಯ ಯಶಸ್ಸಿನಿಂದ ಎಲ್ಲ ಅಂತರರಾಷ್ಟ್ರೀಯ ಸಮೂಹಗಳ ಭಾರತ ಹಾಗೂ ಕಾಶ್ಮೀರವನ್ನು ನೋಡುವ ದೃಷ್ಟಿಕೋನ ಬದಲಾಗಲು ಸಹಾಯವಾಗಲಿಕ್ಕಿದೆ, ಎಂಬದು ನಿಶ್ಚಿತ ! ಕೆಲವು ತಿಂಗಳುಗಳ ಹಿಂದೆ ಕಾಶ್ಮೀರದಲ್ಲಿ ಚಲನಚಿತ್ರಗೃಹಗಳು ಆರಂಭವಾಗಿದ್ದವು. ಅನಂತರ ನೆರವೇರಿದ ಈ ಸಭೆಯಿಂದ ಕಾಶ್ಮೀರದಲ್ಲಿ ಭವಿಷ್ಯದಲ್ಲಿ ವಿಕಾಸದ ಗಾಳಿ ಬೀಸಲು ಆರಂಭವಾಗುವುದರ ಸ್ಪಷ್ಟ ಸಂಕೇತವನ್ನು ನೀಡಿದೆ.
ಲೇಖಕರು : ಡಾ. ಶೈಲೇಂದ್ರ ದೇವಳಾಣ್ಕರ್, ವಿದೇಶ ನಿಲುವಿನ ವಿಶ್ಲೇಷಕರು (ಆಧಾರ : ಸಾಪ್ತಾಹಿಕ ‘ವಿವೇಕ’ ಹಾಗೂ ಫೇಸ್‌ಬುಕ್, ೬.೬.೨೦೨೩)