ದೂರು ದಾಖಲಿಸಿಕೊಳ್ಳಲು ವಿಳಂಬವಾಗಿರುವುದು ಸ್ಪಷ್ಟ ! – ಸರ್ವೋಚ್ಚ ನ್ಯಾಯಾಲಯ

ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ತೆಗೆದಿರುವ ಪ್ರಕರಣ

ನವ ದೆಹಲಿ – ಭಾರತದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಡಿ .ವೈ. ಚಂದ್ರಚೂಡ ಇವರ ಅಧ್ಯಕ್ಷತೆಯಲ್ಲಿ ಮಣಿಪುರದ ಪ್ರಕಾರಣದ ಬಗ್ಗೆ ಆಗಸ್ಟ್ ೧ ರಂದು ವಿಚಾರಣೆ ನಡೆಯಿತು. ಸರ್ವೋಚ್ಚ ನ್ಯಾಯಾಲಯವು ಈ ಸಮಯದಲ್ಲಿ, ಮೇ ೪ ರಂದು ಮಣಿಪುರದಲ್ಲಿ ೨ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ತೆಗೆದಿರುವ ಘಟನೆಯ ೨ ತಿಂಗಳ ನಂತರ ಎಂದರೆ ಜುಲೈ ೭ ರಂದು ದೂರ ದಾಖಲಿಸಿರುವುದು ಸ್ಪಷ್ಟವಾಗಿದೆ. ಸಂತ್ರಸ್ತೆಯ ಪರ ವಾದ ಮಂಡಿಸುವ ನ್ಯಾಯವಾದಿ ನಿಜಾಮ ಪಾಶ ಇವರು, ಕೇಂದ್ರ ತನಿಖಾ ದಳದಿಂದ ಸಂತ್ರಸ್ತೇಯ ಮೌಖಿಕ ಹೇಳಿಕೆ ನಮೂದಿಸಲು ಅವರನ್ನು ಕರೆದಿದ್ದಾರೆ. ಇನ್ನೊಂದು ಕಡೆ ಕೇಂದ್ರ ಮತ್ತು ರಾಜ್ಯ ಸರಕಾರದ ವತಿಯಿಂದ ಅವರ ಪಕ್ಷ ಮಂಡಿಸಲು ನ್ಯಾಯವಾದಿ ತುಷಾರ ಮೆಹತಾ ಇವರಿಗೆ ಅದರ ಸಂದರ್ಭದಲ್ಲಿ ಯಾವುದೇ ಮಾಹಿತಿ ಇರಲಿಲ್ಲ.

ಈ ಸಮಯದಲ್ಲಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ ಇವರು ಮಣಿಪುರ ಸರಕಾರವನ್ನು ಚಾಟಿ ಬೀಸುತ್ತಾ, ಮಣಿಪುರದಲ್ಲಿನ ಹಿಂಸಾಚಾರದ ಪ್ರಕರಣದಲ್ಲಿ ೧ – ೨ ದೂರು ದಾಖಲಿಸದೆ ಬಂಧನದ ಕ್ರಮ ಕೈಗೊಳ್ಳಲಾಗಿಲ್ಲ. ತನಿಖೆ ಕೂಡ ಮೇಲೆ ಮೇಲೆ ಮಾಡಲಾಯಿತು. ಇನ್ನೂವರೆಗೆ ಉತ್ತರ ಕೂಡ ನೋಂದಣಿ ಆಗಿಲ್ಲ. ನ್ಯಾಯಾಲಯ ಈ ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ ೭ ರಂದು ನಡೆಸಲಿದೆ ಮತ್ತು ಅವರು ಮಣಿಪುರ ರಾಜ್ಯದ ಪೊಲೀಸ ಮಹಾನಿರೀಕ್ಷಕರನ್ನು ನ್ಯಾಯಾಲಯದಲ್ಲಿ ಉಪಸ್ಥಿತರಿರಲು ಆದೇಶ ನೀಡಿದ್ದಾರೆ.

ಮೆರವಣಿಗೆ ತೆಗೆದಿರುವ ಮರುದಿನ ದೂರು ದಾಖಲಿಸಿದೆ ! – ಸರಕಾರದ ನಿಲುವು

ಕೇಂದ್ರ ಸರಕಾರದ ಪರವಾಗಿ ಮಾತನಾಡುವಾಗ ನ್ಯಾಯವಾದಿ ತುಷಾರ ಮೆಹತಾ ಇವರು, ರಾಜ್ಯ ಸರಕಾರವು ಜಾತಿಯ ಹಿಂಸಾಚಾರ ಪ್ರಚೋದಿಸುವುದರ ವಿರುದ್ಧ ಇಲ್ಲಿಯವರೆಗೆ ೬ ಸಾವಿರದ ೫೨೩ ದೂರುಗಳನ್ನು ದಾಖಲಿಸಿದೆ. ಬೆತ್ತಲೆಗೊಳಿಸಿ ಮೆರವಣಿಗೆ ತೆಗೆದಿರುವ ಪ್ರಕರಣದ ದೂರು ಮೇ ೫ ರಂದು ಎಂದರೆ ಘಟನೆಯ ಮರುದಿನವೇ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಓರ್ವ ಅಪ್ರಾಪ್ತ ಆರೋಪಿಯ ಸಹಿತ ೭ ಜನರನ್ನು ಬಂಧಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದರು.