ಮಧ್ಯಪ್ರದೇಶದಲ್ಲಿ ಹನುಮಂತನ ಮೂರ್ತಿಯ ವಿಡಂಬನೆ ಮಾಡಿದ ಅಮಜದ ಖಾನ ಮನೆ ಬುಲ್ಡೋಜರ್ ನಿಂದ ನೆಲಸಮ !

  • ಮನೆ ಕಾನೂನ ಬಾಹಿರ ಇರುವುದರಿಂದ ಸರಕಾರದಿಂದ ಕ್ರಮ !

  • ರಾಷ್ಟ್ರೀಯ ಸುರಕ್ಷಾ ಕಾನೂನು ಅನ್ವಯಿಸಲು ಹಿಂದುತ್ವನಿಷ್ಠ ಸಂಘಟನೆಯ ಆಗ್ರಹ !

ಡಿಂಡೋರಿ (ಮಧ್ಯಪ್ರದೇಶ) – ಇಲ್ಲಿಯ ಶಾಹಪುರದಲ್ಲಿ ಆಯಿ ಶಾರದಾ ಬೆಟ್ಟದ ಮೇಲೆ ಇರುವ ದೇವಸ್ಥಾನದಲ್ಲಿನ ಹನುಮಂತನ ಮೂರ್ತಿಯ ಅವಮಾನ ಮಾಡಿರುವುದು ಇತ್ತೀಚಿಗೆ ಬೆಳಕಿಗೆ ಬಂದಿದೆ. ಇದರ ಹಿಂದೆ ಅಮಜದ್ ಖಾನ್ ಮತ್ತು ಫಿರೋಜ್ ಖಾನ್ ಈ ಮತಾಂಧ ಮುಸಲ್ಮಾನರ ಕೈವಾಡ ಇರುವುದು ಬೆಳಕಿಗೆ ಬಂದಿರುವುದರಿಂದ ಹಿಂದುತ್ವನಿಷ್ಠ ಸಂಘಟನೆಗಳಿಂದ ಇಬ್ಬರ ವಿರುದ್ಧ ರಾಷ್ಟ್ರೀಯ ಸುರಕ್ಷಾ ಕಾನೂನಿನಂತರ್ಗತ (ರಾಸುಕಾದ ಅಂತರ್ಗತ) ಕ್ರಮ ಕೈಗೊಳ್ಳುವುದರ ಜೊತೆಗೆ ಅವರ ಮನೆ ಬುಲ್ಡೋಜರ್ ನಿಂದ ನೆಲೆಸನ ಮಾಡಲು ಒತ್ತಾಯಿಸಿತ್ತು. ಸರಕಾರವು ಅಮಜದ ಖಾನ್ ನ ಮನೆ ಕಾನೂನಬಾಹಿರ ಎಂದು ಹೇಳಿ ಬುಲ್ಡೋಜರ್ ನಿಂದ ನೆಲಸಮ ಮಾಡಿದೆ.

ಈ ಘಟನೆಯಲ್ಲಿ ಹಿಂದುತ್ವನಿಷ್ಠ ಸಂಘಟನೆಯಿಂದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಖಾನ್ ಇವರ ಕುಟುಂಬದವರು ಶಾಹಪುರ ಬಿಟ್ಟು ಹೋಗಿರುವುದೆಂದು ಹೇಳಲಾಗುತ್ತಿದೆ, ಹೀಗೆ ಇದ್ದರು ಕೂಡ ಹಿಂದೂಗಳ ಸಂಘಟನೆಯ ವಿರೋಧ ಮುಗಿದಿಲ್ಲ. ಇನ್ನೊಬ್ಬ ಆರೋಪಿ ಅಮಾನತು ಆಗಿರುವ ಅರಣ್ಯ ರಕ್ಷಕ ಫಿರೋಜ್ ಖಾನ್ ಇವನ ಮನೆಯ ಮೇಲೆ ಕೂಡ ಬುಲ್ಡೋಜರ್ ನಡೆಸುಲು ಹಿಂದುತ್ವನಿಷ್ಠ ಸಂಘಟನೆಗಳು ಆಗ್ರಹಿಸಿದ್ದಾರೆ. ಫಿರೋಜ್ ನ ಮನೆ ಶಹಡೋಲ ಜಿಲ್ಲೆಯಲ್ಲಿ ಇರುವುದೆಂದು ಹೇಳುತ್ತಿದ್ದಾರೆ. ಇಬ್ಬರು ಆರೋಪಿಗಳ ಮೇಲೆ ರಾಷ್ಟ್ರೀಯ ಸುರಕ್ಷಾ ಕಾನೂನಿನ ಅಂತರ್ಗತ ಕ್ರಮ ಕೈಗೊಳ್ಳುವ ಪ್ರಸ್ತಾವ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ ಅಧಿಕಾರಿಗಳ ಹೇಳಿಕೆಯಾಗಿದೆ.

ಸಂಪಾದಕೀಯ ನಿಲುವು

ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದರ ವಿರುದ್ಧ ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳಲೇಬೇಕು; ಆದರೆ ಮೂಲತಃ ಇಂತಹವರ ಮನೆ ಕಾನೂನ ಬಾಹಿರ ಇದ್ದರೇ ಅದು ಹೇಗೆ ಕಟ್ಟುತ್ತಾರೆ ! ಅದರ ಬಗ್ಗೆ ಸರಕಾರಿ ಅಧಿಕಾರಿ ಆ ಸಮಯದಲ್ಲೇ ಏಕೆ ಕ್ರಮ ಕೈಗೊಳ್ಳುವುದಿಲ್ಲ ?