ಇಸ್ಲಾಮಾಬಾದ – ಪಾಕಿಸ್ತಾನದಲ್ಲಿ ಜುಲೈ ೩೦ ರಂದು ಖೈಬರ್ ಪಖ್ಟುನಖ್ವಾ ಪ್ರಾಂತದಲ್ಲಿನ ಬಾಜೌರ ಇಲ್ಲಿ ಒಂದು ರಾಜಕೀಯ ಸಭೆಯಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಇಲ್ಲಿಯವರೆಗೆ ೪೪ ಜನರು ಸಾವನ್ನಪ್ಪಿದ್ದು ೨೦೦ ಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡರು. ಪ್ರಾರ್ಥಮಿಕ ತನಿಖೆಯಲ್ಲಿ ಈ ಬಾಂಬ್ ಸ್ಪೋಟದ ಹಿಂದೆ ‘ಇಸ್ಲಾಮಿಕ್ ಸ್ಟೇಟ್’ ಭಯೋತ್ಪಾದಕ ಸಂಘಟನೆಯ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಖಾರ ನಗರದಲ್ಲಿ ಅಧಿಕಾರದಲ್ಲಿರುವ ಮಿತ್ರ ಪಕ್ಷ ಇರುವ ಜಮೀಯತ್ ಉಲೇಮ ಇಸ್ಲಾಂ-ಫಜಲ್ ನ ಸಭೆ ನಡೆಯುತ್ತಿರುವಾಗ ಬಾಂಬ್ ಸ್ಪೋಟ ನಡೆದಿದೆ.
पाकिस्तान में हुए आत्मघाती बम विस्फोट में अब तक 46 मौतें, जानिए किस संगठन ने ली हमले की जिम्मेदारी?#Pakistan #BombBlast #KhaiberPakhtunkhwahttps://t.co/pnwZNSZXyd
— India TV (@indiatvnews) July 31, 2023
ಈ ಪ್ರಕರಣದಲ್ಲಿ ಪಾಕಿಸ್ತಾನದ ಪೊಲೀಸರು ಮೂರು ಶಂಕಿತರನ್ನು ವಶಕ್ಕೆ ಪಡೆದಿದ್ದು ಅವರ ವಿಚಾರಣೆ ನಡೆಸುತ್ತಿದ್ದಾರೆ. ಖೈಬರ ಪಖ್ಟುನಖ್ವ ಪ್ರಾಂತದ ಪೊಲೀಸ ಮುಖ್ಯಸ್ಥ ಅಕ್ತರ ಇವರು, ಸ್ಪೋಟದಲ್ಲಿ ೧೦ ಕಿಲೋ ಸ್ಪೋಟಕದ ಉಪಯೋಗ ಮಾಡಲಾಗಿತ್ತು. ಆತ್ಅಹೂತಿ ಮಾಡಿದವನು ಜಂಗುಳಿಯಲ್ಲಿ ವೇದಿಕೆಯ ಮುಂದೆ ನಿಂತಿದ್ದನು. ಈ ದಾಳಿಯಲ್ಲಿ ಜಮೀಯತ್ ಅಲೆಮಾ ಇಸ್ಲಾಂ ಫಜಲ್ ನ ಅನೇಕ ನಾಯಕರು ಸಾವನ್ನಪಪ್ಇದ್ದಾರೆ. ಬಾಜೌರ ಪರಿಸರ ಪಾಕಿಸ್ತಾನ್ ಅಪಘಾನಿಸ್ತಾನ್ ಗಡಿಯಲ್ಲಿದೆ ಮತ್ತು ಅಲ್ಲಿ ತಾಲಿಬಾನ್ ನ ಪ್ರಭಾವ ಇರುವುದೆಂದು ಹೇಳಲಾಗುತ್ತಿದೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಬುಟ್ಟೋ ಝರದಾರಿ ಇವರ ಪ್ರಕಾರ ಈ ದಾಳಿ ಎಂದೇ ದೇಶವನ್ನು ಕುಗ್ಗಿಸುವ ಷಡ್ಯಂತ್ರವಾಗಿದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಪಾಕಿಸ್ತಾನವು ಭಯೋತ್ಪಾದನೆ ಪೋಷಿಸಿತು. ಆದ್ದರಿಂದ ಅವರು ಏನು ಬಿತ್ತಿದ್ದರೋ ಅದೇ ಈಗ ಬೆಳೆಯುತ್ತದೆ, ಹೇಗೆ ಯಾರಿಗಾದರೂ ಅನಿಸಿದರೆ ತಪ್ಪೇನಿಲ್ಲ ! |