ಲೆಬನಾನ್‌ನ ಭಯೋತ್ಪಾದಕ ಸಂಘಟನೆಯ ಮುಖಂಡ ಹಸನ್ ನಸರಲ್ಲಾಹ್‌ನ ಪ್ರಚೋದನೆ !
ನವ ದೆಹಲಿ – ಕುರಾನ್ಅನ್ನು ಅವಮಾನಿಸಲು ಅನುಮತಿ ನೀಡುವವರ ವಿರುದ್ಧ ಮುಸ್ಲಿಂ ದೇಶಗಳು ಕ್ರಮ ಕೈಗೊಳ್ಳದಿದ್ದರೆ ಮುಸ್ಲಿಮರು ಅವಮಾಸಿಸುವವರ ಮೇಲೆ ದಾಳಿ ನಡೆಸಿ ಶಿಕ್ಷಿಸಬೇಕು, ಎಂದು ಲೆಬನಾನ್‌ನ ಭಯೋತ್ಪಾದಕ ಸಂಘಟನೆ “ಹಿಜಬುಲ್ಲಾ”ನ ಮುಖಂಡ ಹಸನ್ ನಸರಲ್ಲಾಹ ಪ್ರಚೋದಿಸಿದ್ದಾರೆ. ಸ್ವೀಡನ್ ಮತ್ತು ಡೆನ್ಮಾರ್ಕ್ ನಲ್ಲಿ ಕುರಾನ್ ಸುಡುವ ಘಟನೆಗಳು ನಡೆದಿವೆ. ಇದನ್ನು ಹಲವು ಇಸ್ಲಾಮಿಕ್ ರಾಷ್ಟ್ರಗಳು ಖಂಡಿಸಿವೆ.
जिस देश में कुरान जलाए जाएँगे, उन पर हमला कर मुस्लिम खुद दें सजा: मुहर्रम के मातम पर हिजबुल्ला सरगना नसरल्लाह का आतंकी पैगाम#QuranBurning #Muharramhttps://t.co/HH2h66XyMp
— ऑपइंडिया (@OpIndia_in) July 30, 2023
ದೂರದರ್ಶನ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹಸನ್ ನಸರಲ್ಲಾಹ ಮಾತನಾಡಿ, ಸ್ವೀಡನ್ ಮತ್ತು ಡೆನ್ಮಾರ್ಕ್ ದೇಶಗಳು ಕುರಾನ್‌ಗೆ ಅವಮಾನ ಮಾಡುವುದನ್ನು ನಮ್ಮ ದೇಶ ಸಹಿಸುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ. ಕುರಾನ್‌ನ ಅವಮಾನದ ವಿಷಯದಲ್ಲಿ ನಾವು ‘ಇಸ್ಲಾಮಿಕ್ ಸಹಯೋಗ ಸಂಘಟನೆ’ (ಒಐಸಿಯ) ನೀತಿಗಾಗಿ ನಾವು ಕಾಯುತ್ತಿದ್ದೇವೆ. ಒಂದು ವೇಳೆ ಈ ಸಂಘಟನೆಯು ನೀತಿಯನ್ನು ಘೋಷಿಸದಿದ್ದರೆ, ನಮ್ಮ ಧರ್ಮವನ್ನು ರಕ್ಷಿಸಲು ಈ ಸಂಘಟನೆ ಯೋಗ್ಯವಲ್ಲ ಎಂದು ನಾವು ತಿಳಿಯುತ್ತೇವೆ. ಇಸ್ಲಾಮಿಕ್ ದೇಶಗಳು ಮತ್ತು ಅವರ ವಿದೇಶಾಂಗ ಸಚಿವರು ಸ್ವೀಡನ್ ಮತ್ತು ಡೆನ್ಮಾರ್ಕ್‌ನಲ್ಲಿ ಇಸ್ಲಾಂ ಧರ್ಮದ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಒಂದು ವೇಳೆ ಇಸ್ಲಾಂ ಮೇಲೆ ಇನ್ನಷ್ಟು ದಾಳಿಗಳು ನಡೆದರೆ ಈ ದೇಶಗಳಿಗೆ ಆರ್ಥಿಕ ಬಹಿಷ್ಕಾರವನ್ನು ಹಾಕಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ನೀಡಬೇಕು. ಒಂದು ವೇಳೆ ಇಸ್ಲಾಮಿಕ್ ದೇಶಗಳು ಇದನ್ನು ಮಾಡದಿದ್ದರೆ, ವಿಶ್ವದ ವೀರ ಯುವ ಮುಸ್ಲಿಮರು ಇಸ್ಲಾಂ ಧರ್ಮವನ್ನು ಅವಮಾನಿಸುವವರನ್ನು ಶಿಕ್ಷಿಸಲು ಸಿದ್ಧರಾಗಿರಬೇಕು ಎಂದು ಹೇಳಿದರು.