೧. ಭಾರತದ ಮುಸಲ್ಮಾನರು ಈ ಬಗ್ಗೆ ಮೌನ ಏಕೆ ?
ಪಾಕಿಸ್ತಾನದಲ್ಲಿ ಕಳೆದ ತಿಂಗಳಲ್ಲಿ ಮತಾಂಧ ಮುಸಲ್ಮಾನರು ಹಿಂದೂಗಳ ೨ ದೇವಸ್ಥಾನಗಳ ಮೇಲೆ ದಾಳಿ ನಡೆಸಿದ್ದಾರೆ. ಒಂದು ದೇವಸ್ಥಾನವನ್ನು ಕೆಡವಿದ್ದು, ಇನ್ನೊಂದರ ಮೇಲೆ ಗುಂಡು ಹಾರಿಸಿ ರಾಕೆಟ್ ದಾಳಿ ನಡೆಸಿದ್ದಾರೆ. ದೇವಸ್ಥಾನದ ಸಮೀಪದ ಹಿಂದೂಗಳ ಮನೆ ಮೇಲೆಯೂ ಗುಂಡು ಹಾರಿಸಲಾಗಿದೆ.
೨. ಹಿಂದೂಗಳು ಎಚ್ಚರವಾಗುತ್ತಿದ್ದಾರೆ !
ಮಹಾರಾಷ್ಟ್ರದ ಕೊಲ್ಹಾಪುರದ ಮಹಾವಿದ್ಯಾಲಯವೊಂದರ ಶಿಕ್ಷಕನು ವಿದ್ಯಾರ್ಥಿಗೆ ಅವನು ಕೊರಳಲ್ಲಿ ಧರಿಸಿದ ‘ಜಯ ಶ್ರೀರಾಮ ಎಂದು ಬರೆದ ಕೇಸರಿ ಪಟ್ಟಿ ತೆಗೆಯಲು ಹೇಳಿದಾಗ ಅವನು ‘ತರಗತಿಯಲ್ಲಿ ವಿದ್ಯಾರ್ಥಿನಿಯರು ಧರಿಸಿದ ಹಿಜಾಬ್ ತೆಗೆಯಲು ಹೇಳಿ, ಆಗಲೇ ಪಟ್ಟಿ ತೆಗೆಯುತ್ತೇನೆ, ಎಂದನು.
೩. ಭಾರತದ ಹಿಂದೂ ಆಟಗಾರರು ಸುಮ್ಮನೇಕೆ ?
‘ಪಾಕಿಸ್ತಾನದಲ್ಲಿನ ದೇವಸ್ಥಾನಗಳನ್ನು ಧ್ವಂಸಗೊಳಿಸು ತ್ತಿರುವಾಗ ಅಂತಾರಾಷ್ಟ್ರೀಯ ಸಮುದಾಯ ಏಕೆ ಮೌನವಾಗಿದೆ ? ವಿಶ್ವದಾದ್ಯಂತ ಹಿಂದೂಗಳು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ಅತ್ಯಾಚಾರಗಳ ವಿರುದ್ಧ ಧ್ವನಿ ಎತ್ತಬೇಕು, ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ದಾನಿಶ್ ಕನೆರಿಯಾ ಟ್ವೀಟ್ ಮಾಡಿದ್ದಾರೆ.
೪. ಮತಾಂಧರ ‘ಪೂಜಾರಿ ಜಿಹಾದನ್ನು ತಿಳಿಯಿರಿ !
ಉತ್ತರಪ್ರದೇಶದ ಮೇರಠದಲ್ಲಿನ ಶನಿ ದೇವಸ್ಥಾನದಲ್ಲಿ ಅರ್ಚಕನಾಗಿರುವ ‘ಗುರ್ಜರನಾಥ ಮಹಾರಾಜ ಇವನು ‘ಗುಲ್ಲೂ ಖಾನ ಎಂಬ ಹೆಸರಿನ ಮುಸಲ್ಮಾನ ಇರುವುದಾಗಿ ಬೆಳಕಿಗೆ ಬಂದ ನಂತರ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಅವನು ಜನವರಿ ೨೦೨೩ ರಿಂದ ದೇವಸ್ಥಾನದಲ್ಲಿ ಅರ್ಚಕನಾಗಿದ್ದನೆ.
೫. ಹಿಂದೂ ಪ್ರಯಾಣಿಕರಿಗೆ ಹಲಾಲ ಚಹಾ ನೀಡುವ ‘ಧರ್ಮನಿರಪೇಕ್ಷ ರೈಲ್ವೆ ಆಡಳಿತ !
ರೈಲ್ವೆಯಲ್ಲಿ ಓರ್ವ ಹಿಂದೂ ಪ್ರಯಾಣಿಕನಿಗೆ ಹಲಾಲ ಪ್ರಮಾಣದ ಚಹಾ ಪಾಕೀಟ ಕೊಟ್ಟಿರುವ ಆಕ್ರೋಶಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಯಲ್ಲಿ ಕೇಳಿದಾಗ ‘ಚಹಾ ಸಸ್ಯಹಾರಿ ಆಗಿದೆ, ಎಂದು ಉತ್ತರಿಸಿದ್ದಾರೆ.
೬. ಢೋಂಗಿ ಕಾಂಗ್ರೆಸ್ !
‘ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಗಳ ಘಟನೆಗಳಲ್ಲಿ ಹೆಚ್ಚಳವಾಗಿದೆ. ಮಣಿಪುರದಲ್ಲಿನ ಇಬ್ಬರು ಮಹಿಳೆಯರ ಮೇಲಿನ ಅತ್ಯಾಚಾರದ ಕುರಿತು ಮಾತನಾಡು ವುದಕ್ಕಿಂತ ನಾವು ಆತ್ಮಪರೀಕ್ಷಣೆ ಮಾಡುವ ಅಗತ್ಯವಿದೆ, ಎಂದು ತಮ್ಮದೇ ಸರಕಾರದ ಕಿವಿಹಿಂಡಿದ ಕಾಂಗ್ರೆಸ್ಸಿನ ಮಂತ್ರಿ ರಾಜೇಂದ್ರ ಗುಢಾ ಇವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.
೭. ಭಾರತೀಯರ ನೈತಿಕ ಅಧಃಪತನವನ್ನು ತಡೆಯಲು ಧರ್ಮಶಿಕ್ಷಣವನ್ನು ನೀಡಿ
ಕೇಂದ್ರ ಸರಕಾರದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಂತೆ ಶೇ. ೫೬ ರಷ್ಟು ಯುವತಿಯರು, ಅವರು ಮನೆಯಿಂದ ದೂರವಿದ್ದಾಗ ದೈಹಿಕ ಸಂಬಂಧವನ್ನಿಡುತ್ತಾರೆ ಮತ್ತು ಶೇ. ೩೨ ರಷ್ಟು ಪುರುಷರು ಮನೆ ಹೊರಗೆ ಇರುವಾಗ ನೈಹಿಕ ಸಂಬಂಧವಿಡಲು ಆದ್ಯತೆ ನೀಡುತ್ತಾರೆ.