ಜ್ವರ ಬೇಗ ವಾಸಿಯಾಗಲು ಇದನ್ನು ಮಾಡಿ !

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ವೈದ್ಯ ಮೇಘರಾಜ ಪರಾಡಕರ್

೧. ‘ಹಸಿವಾಗದಿದ್ದರೆ ಏನನ್ನೂ ತಿನ್ನಬಾರದು ಅಂದರೆ ಉಪವಾಸ ಮಾಡಬೇಕು. (ಮಧುಮೇಹ ರೋಗಿಗಳು ಉಪವಾಸದ ಸಮಯದಲ್ಲಿ ಮಧುಮೇಹದ ಔಷಧಗಳನ್ನು ಸೇವಿಸಬಾರದು.)

೨. ಬಾಯಾರಿಕೆಯಾದರೆ ಸನಾತನ ಮುಸ್ತಾ (ಭದ್ರಮುಷ್ಟಿ) ಚೂರ್ಣವನ್ನು ಹಾಕಿ ಕುದಿಸಿದ ಬಿಸಿನೀರು ಅಥವಾ ಉಗುರುಬೆಚ್ಚಗಿನ ನೀರನ್ನು ಸ್ವಲ್ಪ ಸ್ವಲ್ಪ ಕುಡಿಯಬೇಕು. ಇದಕ್ಕಾಗಿ ೧ ಲೀಟರ್ ನೀರಿನಲ್ಲಿ ಅರ್ಧ ಚಮಚದಷ್ಟು ಮುಸ್ತಾ ಚೂರ್ಣವನ್ನು ಬಳಸಬೇಕು.

೩. ಹಸಿವಾದರೆ ನಿಯಮಿತ ಆಹಾರವನ್ನು ಸೇವಿಸಬಾರದು ಬದಲಾಗಿ ಹೆಸರುಬೇಳೆಯ ತೊವ್ವೆ ಅಥವಾ ಕುದಿಸಿ ತೆಗೆದ ಬೇಳೆಕಟ್ಟು ಬಿಸಿ ಇರುವಾಗ ಕುಡಿಯಬೇಕು. (‘ಬೇಳೆಕಟ್ಟು’ ಅಂದರೆ ‘ಹೆಸರುಬೇಳೆಯನ್ನು ಬೇಯಿಸಿ ಅದರಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲವನ್ನು ಹಾಕಿ ಮಾಡಿದ ತಿಳಿ ಪದಾರ್ಥ’) ೧-೨ ದಿನ ಇಂತಹ ಆಹಾರವನ್ನು ಸೇವಿಸಿ ಜ್ವರ ಕಡಿಮೆಯಾಗಿ ವಾಸಿಯೆನಿಸತೊಡಗಿದ ನಂತರ ನಿಧಾನವಾಗಿ ನಿಯಮಿತ ಊಟ ಮಾಡಲು ಪ್ರಾರಂಭಿಸಬೇಕು.

೪. ಜ್ವರವಿರುವಾಗ ತನ್ನಷ್ಟಕ್ಕೆ ವಾಂತಿಯಾದರೆ ತಕ್ಷಣ ವಾಂತಿ ನಿಲ್ಲುವ ಔಷಧಿಯನ್ನು ತೆಗೆದುಕೊಳ್ಳಬಾರದು. ಜ್ವರದಲ್ಲಿ ತಾನಾಗಿಯೇ ೧-೨ ಬಾರಿ ವಾಂತಿಯಾದರೆ ಜ್ವರ ಬೇಗ ಕಡಿಮೆ ಯಾಗುತ್ತದೆ. (ಉದ್ದೇಶಪೂರ್ವಕವಾಗಿ ವಾಂತಿ ಮಾಡಿ ಕೊಳ್ಳಬಾರದು.)

ಭಾರೀ ಮಳೆಯ ನಂತರ ಆಕಸ್ಮಿಕವಾಗಿ ಕೆಲವು ದಿನ ಕಡು ಬಿಸಿಲು ಬಂದರೆ ಮುಂದಿನ ಕಾಳಜಿಯನ್ನು ವಹಿಸಿ:

‘ಮಳೆಗಾಲದಲ್ಲಿ ಕೆಲವೊಮ್ಮೆ ಕೆಲವು ದಿನ ಭಾರೀ ಮಳೆ ಬೀಳುತ್ತದೆ ಮತ್ತು ನಂತರ ಇದ್ದಕ್ಕಿದ್ದಂತೆ ಕೆಲವು ದಿನ ಬಹಳ ಬಿಸಿಲು ಬರುತ್ತದೆ. ಭಾರೀ ಮಳೆಯ ನಂತರ ಇದ್ದಕ್ಕಿದ್ದಂತೆ ಬಹಳ ಬಿಸಿಲು ಬೀಳುವುದರಿಂದ ಶರೀರದಲ್ಲಿ ಆಕಸ್ಮಿಕವಾಗಿ ಪಿತ್ತ ಹೆಚ್ಚಾಗುತ್ತದೆ ಮತ್ತು ಕಣ್ಣು ಬರುವುದು, ಬಾಯಿ ಹುಣ್ಣು, ಮೈ ಮೇಲೆ ಗುಳ್ಳೆಗಳಾಗುವುದು, ಜ್ವರ, ಕುರ ಆಗುವುದು, ಕೈಕಾಲು ಗಳು ಉರಿಯುವುದು, ಮೂತ್ರದ ಜಾಗದಲ್ಲಿ ಉರಿಯುವುದು ಮುಂತಾದ ಪಿತ್ತದ ರೋಗಗಳಾಗುವ ಸಾಧ್ಯತೆಯಿರುತ್ತದೆ. ಇಂತಹ ವಾತಾವರಣದಲ್ಲಿ ಮುಂದಿನ ಕಾಳಜಿಯನ್ನು ವಹಿಸಿರಿ.

೧. ಹುಳಿ, ಉಪ್ಪು, ಖಾರ, ಎಣ್ಣೆಯುಕ್ತ, ಹಾಗೆಯೇ ಮಸಾಲೆ ಯುಕ್ತ ಪದಾರ್ಥಗಳನ್ನು ತಿನ್ನುವುದನ್ನು ತಡೆಗಟ್ಟಬೇಕು.
೨. ಮೊಸರು ತಿನ್ನಬಾರದು. (ಮೊಸರು ಕಡಿದು ತಯಾರಿಸಿದ ಮಜ್ಜಿಗೆ ಕುಡಿಯಬಹುದು.)
೩. ಹೊಟ್ಟೆ ತುಂಬುವಷ್ಟಲ್ಲ ಸ್ವಲ್ಪ ಹಸಿವಿಟ್ಟು ಊಟ ಮಾಡಬೇಕು.
೪. ಬಿಸಿಲಿಗೆ ಹೋಗಬಾರದು. ಹೋಗುವುದಾದರೆ ಬಿಸಿಲು ತಡೆಗಟ್ಟಲು ಛತ್ರಿಯನ್ನು ಉಪಯೋಗಿಸಬೇಕು.
೫. ಮಧ್ಯಾಹ್ನ ಅಥವಾ ಹಗಲಿನಲ್ಲಿ ಮಲಗಬಾರದು, ಮಲಗುವುದಿದ್ದರೆ ಕುಳಿತಲ್ಲಿಯೇ ಮಲಗಬೇಕು.
೬. ಸತತವಾಗಿ ಜೋರಾಗಿ ತಿರುಗುವ ಫ್ಯಾನಿನ ಗಾಳಿಯನ್ನು ತಡೆಯಬೇಕು. (ಫ್ಯಾನಿನ ವೇಗವನ್ನು ಕಡಿಮೆ ಮಾಡಿ ಹಚ್ಚಬಹುದು.)

ಜುಮ್ಮೆನಿಸುವ ಹಲ್ಲುಗಳಿಗೆ ಮನೆಮದ್ದು (ಹಲ್ಲುಗಳ ಸಂವೇದನೆಗೆ ಮನೆಮದ್ದು)

‘ತಂಪು ಅಥವಾ ಸಿಹಿ ಪದಾರ್ಥಗಳನ್ನು ತಿಂದ ನಂತರ ಹಲ್ಲುಗಳು ಜುಮ್ಮೆನ್ನುವ ತೊಂದರೆ ಪದೇಪದೇ ಆಗುತ್ತಿದ್ದರೆ, ಪ್ರತಿದಿನ ಬೆಳಗ್ಗೆ ಚಹಾದ ಚಮಚದಷ್ಟು ಎಳ್ಳೆಣ್ಣೆಯನ್ನು ಬಾಯಿಯಲ್ಲಿ ಹಿಡಿದಿಡಬೇಕು ಮತ್ತು ಸುಮಾರು ೫ ರಿಂದ ೧೦ ನಿಮಿಷಗಳ ನಂತರ ಉಗುಳಬೇಕು. ಇದರಿಂದ ಹಲ್ಲುಗಳು ಜುಮ್ಮೆನ್ನುವುದು ಕಡಿಮೆಯಾಗಲು ಸಹಾಯವಾಗುತ್ತದೆ.’

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೭.೨೦೨೩)

ಶ್ರೀ. ವಾಲ್ಮೀಕ ಭುಕನ

‘ನನಗೆ ಕೆಲವು ದಿನ ಹಲ್ಲುಗಳ ಸಂವೇದನೆಯಿಂದ ತೊಂದರೆ ಆಗುತ್ತಿತ್ತು. ಮೇಲಿನಂತೆ ಸುಮಾರು ೧ ತಿಂಗಳು ಉಪಚಾರ ಮಾಡಿದ ನಂತರ ನನ್ನ ಹಲ್ಲುಗಳ ಸಂವೇದನೆಯು ಸಂಪೂರ್ಣವಾಗಿ ನಿವಾರಣೆಯಾಯಿತು.

– ಶ್ರೀ. ವಾಲ್ಮಿಕ ಭುಕನ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೭.೨೦೨೩)