ಕಾಶ್ಮೀರದಲ್ಲಿ ಹಿಂದೂಗಳನ್ನು ಮಾತ್ರವಲ್ಲ ಮುಸಲ್ಮಾನರನ್ನೂ ಹತ್ಯೆ ಮಾಡಿದ್ದಾರೆ ಎಂದು ‘ಜಾತ್ಯತೀತವಾದಿಗಳು (ಅಧರ್ಮವಾದಿಗಳು) ಉದ್ದೇಶಪೂರ್ವಕವಾಗಿ ಹೇಳುವ ಮೂಲಕ ನರಮೇಧದ ಗಾಂಭೀರ್ಯವನ್ನು ಕಮ್ಮಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ೧೯೯೦ ರಿಂದ ಕಾಶ್ಮೀರದಲ್ಲಿ, ಹಿಂದೂ ನರಮೇಧದ ೨೨ ದೊಡ್ಡ ಘಟನೆಗಳು ನಡೆದಿವೆ. ೨೦೧೯ ರಿಂದ ೨೨ ಹಿಂದೂಗಳನ್ನು ಹುಡುಕಿ ಕೊಲ್ಲಲಾಯಿತು. ಈ ಸಂದರ್ಭದಲ್ಲಿ ೫ ಲಕ್ಷ ಹಿಂದೂಗಳು ಕಾಶ್ಮೀರದಿಂದ ನಿರಾಶ್ರಿತರಾಗಿದ್ದಾರೆ ಎಂಬುದನ್ನು ಗಮನಿಸಬೇಕು. ನರಮೇಧವನ್ನು ನಿರಾಕರಿಸಿದಾಗ ಅದು ಅದರ ಪುನರಾವರ್ತನೆ ಆಗುತ್ತದೆ, ಇದು ದೊಡ್ಡ ಗಂಡಾಂತರವಾಗಿದೆ. ಆದ್ದರಿಂದ ಕಾಶ್ಮೀರಿ ಹಿಂದೂ ಹತ್ಯಾಕಾಂಡ ಮಸೂದೆಯನ್ನು (ಜಿನೋಸೈಡ್) ದೇಶಾದ್ಯಂತ ಪೂರ್ಣವಾಗಿಜಾರಿಗೊಳಿಸಬೇಕು.