ಭಾರತೀಯ ಯುವಕನೊಂದಿಗೆ ಮದುವೆಯಾಗಲು ಪಾಕಿಸ್ತಾನದಿಂದ ಬಂದ ಸೀಮಾ ಹೈದರಳ ತನಿಖೆ ಮಾಡಿ ಒಳಸಂಚನ್ನು ಬಹಿರಂಗಪಡಿಸುವುದು ಆವಶ್ಯಕ ! – ಶ್ರೀ. ವಿಕ್ರಮ ಸಿಂಹ

ಶ್ರೀ. ವಿಕ್ರಮ ಸಿಂಹ

ಪಾಕಿಸ್ತಾನದ ಸೀಮಾ ಹೈದರ್ ಇವಳು ತನ್ನ ೪ ಮಕ್ಕಳೊಂದಿಗೆ ಪಾಕ್‌ನಿಂದ ದುಬೈ, ದುಬೈಯಿಂದ ನೇಪಾಳ ಮತ್ತು ನೇಪಾಳದಿಂದ ಭಾರತದೊಳಗೆ ನುಸುಳಿದಳು. ಅವಳ ಪತಿಗೆ ಈ ಬಗ್ಗೆ ೪-೫ ತಿಂಗಳ ತನಕ ಮಾಹಿತಿ ಇರಲಿಲ್ಲ. ಕೊನೆಗೆ ಸೀಮಾ ಹೆಸರಿನ ಈ ಒಗಟು ಪಾಕ್‌ನ ಗುಪ್ತಚರ ದಳ ‘ಐ.ಎಸ್.ಐ.’ನ ಗೂಢಚಾರಿಣಿಯೇ ? ಅಥವಾ ನಿಜವಾಗಿಯೂ ‘ಪಬ್‌ಜಿ’ ಆಟವನ್ನು ಆಡುತ್ತಾ ಆಡುತ್ತಾ ಭಾರತದ ಅಮಾಯಕ ಸಚಿನ ಮೀನಾ (ನೊಯೆಡಾ,ಉತ್ತರಪ್ರದೇಶ) ಈ ಯುವಕನ ಮೇಲೆ ಎಷ್ಟು ಪ್ರೇಮ ಉಂಟಾಯಿತೆಂದರೆ, ಅವಳು ಮನೆಮಾರು ಬಿಟ್ಟು ಮತ್ತು ಎಲ್ಲವನ್ನು ಮಾರಿ ಭಾರತಕ್ಕೆ ಬಂದಳು ? ಸದ್ಯ ಮಾಧ್ಯಮಗಳಲ್ಲಿ ಮೆರೆಯುತ್ತಿರುವ ಸೀಮಾ-ಸಚಿನ ಈ ಬಗ್ಗೆ ಉತ್ತರಪ್ರದೇಶದ ಮಾಜಿ ಪೊಲೀಸ್ ಉಪಮಹಾನಿರೀಕ್ಷಕ ಶ್ರೀ. ವಿಕ್ರಮ ಸಿಂಹ ಇವರು ‘ಅಂಜೂ ಪಂಕಜ ಶೊ’ ಎಂಬ ‘ಯೂ ಟ್ಯೂಬ್’ ವಾಹಿನಿಯಲ್ಲಿ ಮಾಡಿದ ವಿಶ್ಲೇಷಣೆಯನ್ನು ಇಲ್ಲಿ ನೀಡುತ್ತಿದ್ದೇವೆ.

ಸಚಿನ ಮೀನಾ ಮತ್ತು ಸೀಮಾ ಹೈದರ

೧. ಸಾಮಾನ್ಯಳಲ್ಲ, ಚಾಣಾಕ್ಷಬುದ್ಧಿಯ ಸೀಮಾ ಹೈದರ ! : ಸೀಮಾ ಇವಳು ಒಬ್ಬ ಪಾಕಿಸ್ತಾನಿ ಮಹಿಳೆಯಗಿದ್ದಾಳೆ. ‘ಸೀಮಾ ಕೇವಲ ಐದನೇ ತರಗತಿಯ ವರೆಗೆ ಕಲಿತಿದ್ದಾಳೆ’, ಎಂದು ಅವಳು ಹೇಳಿಕೊಳ್ಳುತ್ತಾಳೆ; ಆದರೆ ಅವಳು ಮಾಧ್ಯಮ ಗಳೊಂದಿಗೆ ಸಂವಾದ ಮಾಡುವಾಗ, ಅವಳ ಜ್ಞಾನ ಭಂಡಾರ, ಸಂವಾದಚಾತುರ್ಯ ಮತ್ತು ಆತ್ಮವಿಶ್ವಾಸವು ನಮ್ಮ ದೇಶದ ಶೇ. ೪೦ ರಷ್ಟು ವಾರ್ತಾನಿವೇದಕರಿಗಿಂತ ಹೆಚ್ಚು ಉತ್ತಮವಾಗಿದೆ. ಅವಳು ಪಾಕಿಸ್ತಾನದಿಂದ ದುಬೈಗೆ ಹೋಗುತ್ತಾಳೆ. ಅದೂ ೧೩ ಲಕ್ಷ ರೂಪಾಯಿಗಳ ಭೂಮಿಯನ್ನು ಮಾರಿ ! ದುಬೈನಿಂದ ನೇಪಾಳ ಮತ್ತು ಅಲ್ಲಿಂದ ಭಾರತಕ್ಕೆ ಬಂದು ನೇರ ‘ಎನ್.ಸಿ.ಆರ್.’ನ (ರಾಷ್ಟ್ರೀಯ ರಾಜಧಾನಿ ಕ್ಷೇತ್ರದ) ಜೆವರ (ನೊಯಡಾ, ಉತ್ತರಪ್ರದೇಶ) ವಿಮಾನನಿಲ್ದಾಣದ ತೀರಾ ಸಮೀಪಕ್ಕೆ ಬರುತ್ತಾಳೆ.

೧ ಅ. ಸೀಮಾಳ ಬಗ್ಗೆ ಅನುಮಾನ ಬರುವಂತಹ ವಿಷಯಗಳು : ಅವಳ ತನಿಖೆಯಲ್ಲಿ ಅವಳು ತನ್ನ ಸಹೋದರನ ಬಗೆಗಿನ ಮಾಹಿತಿಯನ್ನು ಮುಚ್ಚಿಟ್ಟಳು. ನಂತರ ಅವನು ಸೈನ್ಯದಲ್ಲಿದ್ದಾನೆ ಎಂದು ತಿಳಿಯಿತು. ಅವನು ಎಲ್ಲಿದ್ದಾನೆ ? ಮತ್ತು ಯಾವ ಹುದ್ದೆಯಲ್ಲಿದ್ದಾನೆ ? ಎಂಬುದನ್ನು ಅವಳು ಹೇಳಿಲ್ಲ. ಅವಳು ೨ ಸಂಚಾರವಾಣಿ ಉಪಕರಣಗಳನ್ನು (ಮೊಬೈಲ್) ಮತ್ತು ೪ ಸಿಮ್ ಕಾರ್ಡ್‌ಗಳನ್ನು ತುಂಡು ಮಾಡಿದಳು. ಅವಳ ಬಳಿ ೩ ಆಧಾರ ಕಾರ್ಡ್‌ಗಳಿವೆ. ಇಷ್ಟೆಲ್ಲ ಇದ್ದರೂ ಅವಳು, “ನಾನು ಸಾಮಾನ್ಯ ಮುಗ್ಧ ಗೃಹಿಣಿ ಇದ್ದೇನೆ”, ಎನ್ನುತ್ತಾಳೆ. ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ, ಅವಳಿಗೆ ತಂತ್ರಜ್ಞಾನದ ವಿಷಯದಲ್ಲಿರುವ ಜ್ಞಾನವಿದೆ ?’ ಎಂಬುದನ್ನು ಒಮ್ಮೆ ನೋಡಿ. ಅವಳು ನೇಪಾಳದಿಂದ ಬಂದಳು, ಆಗ ಇತರರೊಂದಿಗೆ ಮತ್ತು ಸಚಿನನೊಂದಿಗೆ ಚರ್ಚೆ ಮಾಡಿದಳು. ನಂತರ ನೇಪಾಳದಲ್ಲಿ ಒಬ್ಬ ಹುಡುಗಿಯಿಂದ ಸಂಚಾರವಾಣಿಯ ‘ಹಾಟ್‌ಸ್ಪಾಟ್’ನಲ್ಲಿ ಇಂಟರ್‌ನೆಟ್ ಪಡೆದಳು ಮತ್ತು ಅವಳು ‘ವಾಯಿಸ್ಕಾ ಲ್’ ಮಾಡಿದ್ದಳು. ಓರ್ವ ನೇಪಾಳ ಹುಡುಗಿಯೊಂದಿಗೆ ಸ್ನೇಹ ಮಾಡಿ ಅಂತರ್‌ಜಾಲಕ್ಕಾಗಿ ‘ಹಾಟ್‌ಸ್ಪಾಟ್’ ತೆಗೆದುಕೊಂಡಳು. ಅದನ್ನು ಯಾರು ಮತ್ತು ಏಕೆ ನೀಡಿದರು. ? ಅವಳ ಶಿಕ್ಷಣ ಕೇವಲ ೫ ನೇ ತರಗತಿಯವರೆಗೆ ಆಗಿದೆ. ಇಂತಹ ವ್ಯಕ್ತಿಗೆ ‘ಹಾಟ್‌ಸ್ಪಾಟ್’ ಎಂದರೇನು ? ಎಂಬುದು ಗೊತ್ತಿರಲು ಸಾಧ್ಯವಿದೆಯೇ ? ನನಗೆ ದೆಹಲಿಯಲ್ಲಿ ಚಾಂದನಿಚೌಕದಲ್ಲಿ ಮೆಟ್ರೋ ರೈಲಿನಲ್ಲಿ ಹೋಗುವುದಿದ್ದರೆ ನಾನು ಒಂದು ರಾಜ್ಯದ ‘ಡಿಜಿಪಿ’ (ಪೊಲೀಸ್ ಉಪಮಹಾನಿರೀಕ್ಷಕ) ಆಗಿದ್ದರೂ, ನನಗೆ ೪ ಕಡೆಗಳಲ್ಲಿ ಕೇಳಬೇಕಾಗುತ್ತದೆ. ಮೆಟ್ರೋಗೆ ಟಿಕೆಟ್ ಎಲ್ಲಿ ಸಿಗುತ್ತದೆ ? ಎಲ್ಲಿ ಇಳಿಯಬೇಕು ? ಯಾವ ಮೆಟ್ರೋನಲ್ಲಿ ಕುಳಿತುಕೊಳ್ಳಬೇಕು? ಇತ್ಯಾದಿ. ಹೀಗಿರುವಾಗ ಈ ಮಹಿಳೆ ಸಿಂಧದಿಂದ (ಪಾಕಿಸ್ತಾನ್‌ದಿಂದ) ದುಬೈಗೆ ಹೋದಳು, ಅಲ್ಲಿಂದ ನೇಪಾಳಗೆ ಹೋಗಿ ಉತ್ತರಪ್ರದೇಶಕ್ಕೆ ಬಂದಳು. ಅವಳಿಗೆ ಸಿಂಧಿ, ಹಿಂದಿ, ಉರ್ದು ಮತ್ತು ಆಂಗ್ಲ ಈ ೪ ಭಾಷೆಗಳು ಚೆನ್ನಾಗಿ ಬರುತ್ತವೆ ಮತ್ತು ಅವಳು ‘ನಾನು ೫ ನೇ ತರಗತಿ ಓದಿದ್ದೇನೆ’, ಎಂದು ಹೇಳುತ್ತಾಳೆ ! ಸಚಿನ ಮತ್ತು ಸೀಮಾ ಇವರಲ್ಲಿ ‘ಎಸ್’ ಈ ಶಬ್ದದ ಹೊರತಾಗಿ ಬೇರೆ ಏನು ಹೋಲಿಕೆ ಇದೆ ? ಎಂದು ತಿಳಿಯುವುದಿಲ್ಲ; ಆದರೆ ನಾವು ಅವಳನ್ನು ಇಷ್ಟು ಬೇಗ ಹೇಗೆ ನಂಬುತ್ತಿದ್ದೇವೆ ? ಅವಳ ಬಳಿ ೬ ‘ಪಾಸ್ ಪೋರ್ಟ್‌ಗಳಿವೆ. ೧ ಅವಳದ್ದು, ೪ ಮಕ್ಕಳದ್ದು ಮತ್ತು ಒಂದು ಹಳೆಯದು ಅದರ ಅವಧಿ ಮುಗಿದಿದೆ. ಅವಳ ಪತಿಯ ಹೇಳಿಕೆಗನುಸಾರ ಅವಳು ಈ ಪಾಸ್‌ಪೋರ್ಟ್ ಗಳನ್ನು ಸ್ವತಃ ಮಾಡಿಸಿಕೊಂಡಿದ್ದಳು. ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಸುಲಭದ ವಿಷಯವಲ್ಲ. ಆ ಪ್ರಕ್ರಿಯೆ ಕಠಿಣವಿರುತ್ತದೆ. ಅದನ್ನು ಮಾಡಬೇಕಿದ್ದರೆ, ನಿಯಮಿತ ಪ್ರಕ್ರಿಯೆಯಿಂದ ಭಾರತೀಯ ಹೈಕಮೀಶನರ್‌ರಿಂದ ವೀಸಾ ಪಡೆಯ ಬಹುದಾಗಿತ್ತು; ಆದರೆ ಅದನ್ನು ಅವಳು ತೆಗೆದುಕೊಳ್ಳಲಿಲ್ಲ. ಅವಳು ಕಳ್ಳರ ಹಾಗೆ ಇಷ್ಟು ಹಣ ಖರ್ಚು ಮಾಡಿ ಬಂದಳು. ಇದರಿಂದ ಎಲ್ಲವೂ ಬಹಿರಂಗವಾಗಿದೆ. ೨ ಸಂಚಾರವಾಣಿ ಉಪಕರಣ ಗಳನ್ನು ಮುರಿದು ಹಾಕುವುದು, ಸಹಜ ವಿಷಯವಲ್ಲ. ನಾವು ಸಹ ಸಂಚಾರವಾಣಿ ಉಪಕರಣವು ಹಳೆಯದಾದರೆ ಅದನ್ನು ಮಕ್ಕಳಿಗೆ ಅಥವಾ ಇತರ ಸಂಬಂಧಿಕರಿಗೆ ಉಡುಗೊರೆಯೆಂದು ನೀಡುತ್ತೇವೆ; ಆದರೆ ಎಂದಿಗೂ ಮುರಿದು ಹಾಕುವುದಿಲ್ಲ. ಅದನ್ನು ಮುರಿದು ಹಾಕಿದುದರ ಅರ್ಥವೇನೆಂದರೆ, ಒಬ್ಬ ಕೊಲೆಗಾರ ತನ್ನ ಆಯುಧಗಳನ್ನು ನಾಶ ಮಾಡುವ ಅಪರಾಧ ಮಾಡುತ್ತಾನೆ ಅಥವಾ ಬಾವಿಗೆ ಎಸೆಯುತ್ತಾನೆ, ಸಂಚಾರವಾಣಿ ಉಪಕರಣಗಳನ್ನು ಮುರಿಯುವುದು ಅಥವಾ ಸಿಮ್ ನಾಶ ಮಾಡುವುದು ಸಹ ಅದೇ ರೀತಿಯ ಕೃತ್ಯವಾಗಿದೆ. ಇದರಿಂದ, ನೀವು ಯಾರೊಂದಿಗಾದರೂ ಅಕ್ರಮವಾಗಿ ಮಾತನಾಡಿರುವಿರಿ ಎಂದು ಗಮನಕ್ಕೆ ಬರುತ್ತದೆ. ಇದರಿಂದ ನಿನಗೇನು ಮುಚ್ಚಿಡಬೇಕಾಗಿದೆ ? ಮತ್ತು ಯಾರಿಂದ ಮುಚ್ಚಿಡ ಬೇಕಾಗಿದೆ ? ಅವಳಿಗೆ ಏನೋ ಮುಚ್ಚಿಡುವುದಿದೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕಿಂತಲೂ ಅವಳ ಚಾತುರ್ಯದ ಬಗ್ಗೆ ಬೇರೆ ಯಾವ ಒಳ್ಳೆಯ ಪ್ರಮಾಣಪತ್ರವಿರಲು ಸಾಧ್ಯ ? ಒಂದು ವೇಳೆ ನಿನ್ನ ಕಥೆ ಯೋಗ್ಯವಾಗಿದ್ದರೆ ಮತ್ತು ನಿನಗೆ ಸಹಾಯ ಮಾಡುವವರು ಇದ್ದಲ್ಲಿ (ನೇಪಾಳದಲ್ಲಿ) ಕಥೆಯು ಸಂಪೂರ್ಣ ವಾಗಿ ಭಿನ್ನವಾಗಿದೆ.

೧ ಆ. ‘ಐ.ಎಸ್.ಐ.’ನ ದಲ್ಲಾಳಿಗಳು ಮತ್ತು ಸೀಮಾ ಇವರ ‘ಮೋಡಸ್ ಆಪರೆಂಡಿ’ (ಕಾರ್ಯಶೈಲಿ) ಯಲ್ಲಿ ಆಮೂಲಾಗ್ರ ಹೋಲಿಕೆ : ಏನೆಲ್ಲ ಘಟನೆಗಳು ಬಹಿರಂಗವಾಗಿವೆಯೋ, ಅದರಲ್ಲಿ ನನಗೆ ಒಂದೇ ಒಂದು ವಿಷಯವು ಸಹ ವಿಶ್ವಸನೀಯ ಅನಿಸಲಿಲ್ಲ. ಅವಳು ಹೇಳಿದ ಕಥೆ ನಾಟಕದಿಂದ ತುಂಬಿದೆ. ನಮ್ಮ ಹಿರಿಯ ಮತ್ತು ವಯಸ್ಸಾದ ಮಹಿಳೆಯರು ಅವಳ ದೃಷ್ಟಿಯನ್ನು ತೆಗೆದು ಅವಳಿಗೆ ಉಡುಗೊರೆ ನೀಡುತ್ತಿದ್ದಾರೆ. ಸೀಮಾ ತುಳಸಿಗೆ ಅರ್ಘ್ಯವನ್ನೂ ನೀಡುತ್ತಿದ್ದಾಳೆ, ಹಾಗೆಯೇ ದೇವತೆಗಳಿಗೆ ನಮಸ್ಕಾರ ಮಾಡುತ್ತಾಳೆ, ಇದರಿಂದ ಅವಳ ನಾಟಕೀಯ ಪ್ರತಿಭೆ ಕಂಡುಬರುತ್ತದೆ. ಇಂದು ಇದ್ದಕ್ಕಿದ್ದಂತೆಯೇ ಅವಳಿಗೆ ಸನಾತನ ಧರ್ಮ ಮತ್ತು ಸಚಿನ ಇವರ ಬಗ್ಗೆ ಪ್ರೇಮ ಉಕ್ಕಿ ಬರುವುದು ಇದನ್ನು ನಂಬುವಂತಿಲ್ಲ. ಹಿಂದೆ ಪತಿ ಮತ್ತು ಧರ್ಮ ಇವುಗಳ ವಿಷಯದಲ್ಲಿ ಅವಳ ವರ್ತನೆ ಯಾವ ರೀತಿಯಿತ್ತು ? ಈ ಮೊದಲು ಅವಳ ಒಂದು ವಿವಾಹವಿಚ್ಛೇದನೆಯಾಗಿತ್ತು. ನಾನು ಹುದ್ದೆಯಲ್ಲಿರುವಾಗ ‘ಐ.ಎಸ್.ಐ.’ನ ಅನೇಕ ದಲ್ಲಾಳಿಗಳನ್ನು ತನಿಖೆ ಮಾಡಿದ್ದೇನೆ. ಅವರ ಮತ್ತು ಸೀಮಾ ಇವರಲ್ಲಿನ ಕಾರ್ಯಶೈಲಿಯಲ್ಲಿ (‘ಮೊಡಸ ಆಪರೆಂಡಿ’ಯಲ್ಲಿ) ಕೃತಕ, ನಾಟಕ, ನಕಲಿ ಹೆಸರು ಮತ್ತು ವೇಷ ಇಂತಹ ಅನೇಕ ವಿಷಯಗಳಲ್ಲಿ ಹೋಲಿಕೆಗಳು ಕಂಡು ಬರುತ್ತದೆ. ಭಾರತೀಯ ಗುಪ್ತಚರ ಸಂಸ್ಥೆಗಳು ಸೀಮಾಳ ಬ್ಯಾಂಕ್ ವಿವರಗಳನ್ನು ಪರಿಶೀಲಿಸುವವು. ಅವಳು ೧೩ ಲಕ್ಷ ರೂಪಾಯಿಗಳಿಗೆ ಭೂಮಿಯನ್ನು ಮಾರಿದಳು, ಹಾಗಾದರೆ ಎಷ್ಟು ಹಣ ದೊರಕಿತು ? ಎಷ್ಟು ತೆಗೆದುಕೊಂಡು ಬಂದಳು? ಎಂಬುದನ್ನು ಪರಿಶೀಲಿಸುವರು.

ಸೀಮಾ ಮುಗ್ಧ ಸರಳ ಇಲ್ಲ, ಅವಳಿಗೆ ತರಬೇತಿ ನೀಡಿ ಕಳಿಸಿದ್ದಾರೆ, ಎಂದು ಅನಿಸುತ್ತದೆ. ಅವಳು “ನಾನು ಇಲ್ಲಿಯೇ ಸಾಯುತ್ತೇನೆ; ಆದರೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ”, ಎಂದು ಹೇಳುತ್ತಾಳೆ. ಅವಳ ಈ ‘ಅಜೆಂಡಾ’ (ಕಾರ್ಯಸೂಚಿ) ಶಾಶ್ವತ ವಾಗಿದೆ. ಉತ್ತರಪ್ರದೇಶದ ಪೊಲೀಸರು ತನಿಖೆ ನಡೆಸದೇ ಇದ್ದಿದ್ದರೆ ಈ ವಿಷಯ ಬಹಿರಂಗವಾಗುತ್ತಿರಲಿಲ್ಲ. ವಾಕ್ಚಾತುರ್ಯ, ಸಂವಾದ ಮತ್ತು ಪರಿಚಯವನ್ನು ಮುಚ್ಚಿಡುವುದು ಇವುಗಳಲ್ಲಿ ಅವಳಿಗೆ ತರಬೇತಿ ನೀಡಲಾಗಿದೆ. ಏನು ಹೇಳಬೇಕು ? ಮತ್ತು ಏನು ಹೇಳಬಾರದು ? ಎಂಬುದೆಲ್ಲವೂ ಅವಳಿಗೆ ಗೊತ್ತಿದೆ. ಆದುದರಿಂದ ಉತ್ತರಪ್ರದೇಶ ಪೊಲೀಸರು ಮತ್ತು ‘ರಾ’ (RAW) ಗುಪ್ತಚರ ಸಂಸ್ಥೆಗಳು ಅವಳು ಮುರಿದು ಹಾಕಿದ ಸಂಚಾರವಾಣಿ ಗಳಲ್ಲಿನ ಹೆಸರುಗಳನ್ನು ಮತ್ತು ಕ್ರಮಾಂಕಗಳನ್ನು ಹುಡುಕಿ ತೆಗೆಯಬೇಕು. ಸೀಮಾಳಿಗೆ ಸಂಪೂರ್ಣವಾಗಿ ತನ್ನ ಮೇಲೆ ವಿಶ್ವಾಸವಿಡುವ ಮತ್ತು ಅವಳ ನೈತಿಕ-ಅನೈತಿಕ ವಿಷಯಗಳನ್ನು ಒಪ್ಪಿಕೊಳ್ಳುವ ಒಬ್ಬ ಉತ್ತಮ ಬೆಂಬಲಿಗನ ಆವಶ್ಯಕತೆ ಇತ್ತು, ಮತ್ತು ಸಚಿನ ಅಂತಹ ವ್ಯಕ್ತಿಯಾಗಿದ್ದಾನೆ, ‘ಸುಪಿರಿಯಾಟಿಕ್ ಕಾಂಪ್ಲೆಕ್ಸ್ (ಪ್ರತಿಷ್ಠಾಮನೋಭಾವ) ಇಲ್ಲದ ಆದರೆ ‘ಎಂಪಿರೊಟಿಕ್ ಕಾಂಪ್ಲೆಕ್ಸ್ (ಅನುಭವದ ಸ್ವಭಾವ) ಇರಬೇಕು. ಇದೆಲ್ಲವನ್ನು ನೋಡಿ ಅವಳು ಉದ್ದೇಶಪೂರ್ವಕವಾಗಿ ಮತ್ತು ಪಿತೂರಿಯಿಂದ ಈ ವ್ಯಕ್ತಿಯನ್ನು ಆಯ್ದುಕೊಂಡಳು, ಅಂದರೆ ಅವಳಿಗೆ ತನ್ನ ಆಜ್ಞೆಯಂತೆ ವರ್ತಿಸುವ ಹಾಗೂ ಕೇವಲ ಒಂದು ಚದುರಂಗದ ಕಾಯಿಯಾಗಿ ಇರಬಲ್ಲ ವ್ಯಕ್ತಿಯ ಅವಶ್ಯಕತೆಯಿತ್ತು. ಸಚಿನನ ಹಿರಿಯರಿಗೆ ಸೀಮಾ ಮನೆಗೆ ಬಂದಿರುವ ಬಗ್ಗೆ ಅಭಿಮಾನವಿದೆ. ಅವರು, “ಇಲ್ಲಿಯವರೆಗೆ ಹಿಂದೂಸ್ಥಾನದಲ್ಲಿ ಯಾರು ಮಾಡದ್ದನ್ನು, ಸಚಿನನು ಮಾಡಿದ್ದಾನೆ. ಎಲ್ಲರಿಗೂ ಅಭಿಮಾನ ವೆನಿಸುತ್ತದೆ, ಎನ್ನುತ್ತಾರೆ. ಇದರಲ್ಲಿ ಅಭಿಮಾನ ಪಡುವಂತಹದ್ದು ಏನಿದೆ ?

೩. ಒಳಸಂಚಿನಲ್ಲಿ ಸೀಮಾಳ ಪಾಕಿಸ್ತಾನಿ ಪತಿಯ ಪಾಲ್ಗೊಳ್ಳುವಿಕೆ ? : ಸದ್ಯದ ‘ವಾಟ್ಸ್‌ಆಪ್ನ ಜಗತ್ತಿನಲ್ಲಿ ಪತಿ-ಪತ್ನಿಯರು ೨೪ ಗಂಟೆಗಳಲ್ಲಿ ಒಂದು ಬಾರಿಯೂ ಮಾತನಾಡಿಲ್ಲ, ಇದೆಲ್ಲವೂ ಸಂಶಯಾಸ್ಪದವಾಗಿದೆ. ಇಷ್ಟೆಲ್ಲ ನಡೆಯುತ್ತಿರುವಾಗ ಅವಳ ಪತಿಗೆ ಏನೂ ಗೊತ್ತಿಲ್ಲದಿರುವುದು, ಇದು ಆಶ್ಚರ್ಯಕರವಾಗಿದೆ. ಅವಳು ಒಮ್ಮೆ ‘ನನ್ನ ಪತಿ ಗುಲಾಮ ಹೈದರ ಇವರು ಸೌದಿ ಅರೇಬಿಯಾದಲ್ಲಿ ಇದ್ದಾರೆ, ಎಂದು ಹೇಳುತ್ತಾಳೆ ಮತ್ತು ಇನ್ನೊಮ್ಮೆ ‘ಅವರು ದುಬೈನಲ್ಲಿ ಇದ್ದಾರೆ, ಎಂದು ಹೇಳುತ್ತಾಳೆ.

೪. ವಿವಿಧ ಸಂಘಟನೆಗಳಿಂದ ಮಾಡಲಾಗುತ್ತಿರುವ ಸ್ವಾಗತ ಅಯೋಗ್ಯ ! : ನಮ್ಮಲ್ಲಿನ ವಿವಿಧ ಸಂಘಟನೆಗಳು ಸೀಮಾಳನ್ನು ‘ಒಬ್ಬ ಮಹಿಳೆ ಎಂದು ಸ್ವಾಗತಿಸುತ್ತಿವೆ. ಹಿಂದೂಗಳ ಮೇಲೆ ಯಾವ ರೀತಿಯ ಸಂಸ್ಕಾರ ವಾಗಿದೆಯೆಂದರೆ ಅವರಿಗೆ ಪ್ರತಿಯೊಬ್ಬ ಮಹಿಳೆ ತಮ್ಮ ‘ಮಗಳು ಎಂದೆನಿಸುತ್ತಾಳೆ. ಇದು ಒಳ್ಳೆಯ ವಿಷಯವಾಗಿದೆ; ಆದರೆ ಮಗಳು ಒಂದು ವೇಳೆ ಸುಳ್ಳು ಹೆಸರಿನಿಂದ ರಾಷ್ಟ್ರವಿರೋಧಿ ಕೆಲಸವನ್ನು ಮಾಡುತ್ತಿದ್ದರೆ ಅವಳು ಯಾರ ಮಗಳೂ ಆಗಲು ಸಾಧ್ಯವಿಲ್ಲ. ಆದುದರಿಂದ ಈ ಸಂಘಟನೆಗಳು ತಾಳ್ಮೆಯಿಟ್ಟುಕೊಳ್ಳಬೇಕು. ಅಂಧವಿಶ್ವಾಸವಿಡುವುದು ಯೋಗ್ಯವಲ್ಲ.

೫. ಗುಪ್ತಚರ ಸಂಸ್ಥೆಗಳು ಕೂಲಂಕಷವಾಗಿ ತನಿಖೆ ನಡೆಸಬೇಕು ! : ‘ರಾ (RAW) ಮತ್ತು ‘ಐಬಿ (IB) ಇವುಗಳು ಸೀಮಾ ಹೈದರಳನ್ನು ಕೂಲಂಕಷ ತನಿಖೆ ಮಾಡಬೇಕು, ಅವಳ ‘ನಾರ್ಕೊ (ಆರೋಪಿಗೆ ವಿಶಿಷ್ಟ ಔಷಧಿಯನ್ನು ನೀಡಿ ಅರ್ಧ ಎಚ್ಚರ ತಪ್ಪಿಸಿ ಅವರಿಂದ ಮಾಹಿತಿ ಪಡೆಯುವುದು) ಮತ್ತು ‘ಲಾಯ್ ಡಿಟೆಕ್ಟರ್ ಪರೀಕ್ಷಣೆ (ಇದಕ್ಕೆ ‘ಪಾಲಿಗ್ರಾಫ್ ಪರೀಕ್ಷಣೆ ಎಂದೂ ಹೇಳುತ್ತಾರೆ. ಇದರಲ್ಲಿ ವ್ಯಕ್ತಿ ಸತ್ಯ ಮಾತನಾಡುತ್ತಿರುವನೋ ಅಥವಾ ಸುಳ್ಳು ಮಾತನಾಡುತ್ತಿರುವನೋ ? ಎಂದು ತಿಳಿಯುತ್ತದೆ.) ಮಾಡಬೇಕು ಮತ್ತು ಕೂಲಂಕಷ ತನಿಖೆಯನ್ನು ನಡೆಸಬೇಕು. ಹಾಗೆಯೇ ಈ ಬಗ್ಗೆ ಮನಃಶಾಸ್ತ್ರಜ್ಞರಿಂದ ಸಂಪೂರ್ಣವಾಗಿ ಕೂಲಂಕಷ ವಿಶ್ಲೇಷಣೆಯಾಗುವುದು ಆವಶ್ಯಕವಾಗಿದೆ. ಎಲ್ಲ ಮಾಧ್ಯಮಗಳು ಅವಳನ್ನು ದೊಡ್ಡದಾಗಿ ಮೆರೆಸುತ್ತಿವೆ. ಸಚಿನನ ಪರಿವಾರ ಮತ್ತು ಜನರು ಅಂಧಭಕ್ತರಾಗಿದ್ದಾರೆ. ಇದು ಸಾಮೂಹಿಕ ಪ್ರಜ್ಞಾಹೀನತೆಯಾಗಿದ್ದು ಪ್ರಸಾರಮಾಧ್ಯಮಗಳಲ್ಲಿ ಅದರ ಚರ್ಚೆ ಹೆಚ್ಚು ಹಬ್ಬುವ ಮೊದಲೇ ಅದನ್ನು ನಿಯಂತ್ರಣದಲ್ಲಿಡುವುದು ಆವಶ್ಯಕವಾಗಿದೆ. ಪಾಕಿಸ್ತಾನದಲ್ಲಿ ಈ ವಿಷಯಗಳ ವಾರ್ತೆ ಮತ್ತು ಸಂದರ್ಶನಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಕೇಳಿ ಆಶ್ಚರ್ಯವಾಯಿತು. ಇದರ ಅರ್ಥ ಇದರಲ್ಲಿ ಆ ದೇಶದ ಸಹಭಾಗವೂ ಇದೆ. ಆದುದರಿಂದ ‘ಸೀಮಾ ಯಾರು ? ಮತ್ತು ‘ಅವಳ ಸೀಮೆ ಎಲ್ಲಿಯವರೆಗೆ ಇದೆ ? ಎಂಬ ತನಿಖೆಯನ್ನು ತನಿಖಾ ದಳಗಳು ಮಾಡಬೇಕು. ಇತರರ ‘ಹಾಟ್‌ಸ್ಪಾಟ್ ತೆಗೆದು ಕೊಂಡು ಇಂಟರ್‌ನೆಟ್ ಬಳಸುವುದರಿಂದ ಆ ಕರೆಯು (ಕಾಲ್) ‘ಟ್ರ್ಯಾಕ್ (ಸಂಭಾಷಣೆಯ ಧ್ವನಿಮುದ್ರಣ) ಆಗುವುದಿಲ್ಲ, ಎಂದು ಸೀಮಾಳಿಗೆ ಗೊತ್ತಿದೆ. ಇದರಿಂದ ಅವಳು ಸಂಪೂರ್ಣ ಸಂಶಯಾಸ್ಪದ ವ್ಯಕ್ತಿಯಾಗಿದ್ದಾಳೆ, ಎಂದು ಹೇಳಬಹುದು.

ಸೀಮಾಳಿಗೆ ಐ.ಎಸ್.ಐ. ಮಾರ್ಗದರ್ಶನ ಮಾಡಿದೆ. ‘ನಾನು ಜೀವ ಕೊಡುತ್ತೇನೆ; ಆದರೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ, ಹಾಗೆಯೇ ‘ನನ್ನನ್ನು ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಇವರು ಕಾಪಾಡಬೇಕು, ಎಂಬಂತಹ ಎಲ್ಲ ಭಾವನಾತ್ಮಕ ವಿಚಾರಗಳನ್ನು ಅವಳು ಮಂಡಿಸುತ್ತಿದ್ದಾಳೆ. ಇದೆಲ್ಲವೂ ಪೂರ್ವನಿಯೋಜಿತವಾಗಿದೆ. ನನ್ನ ಪೊಲೀಸ್ ಖಾತೆಯಲ್ಲಿನ ಇಷ್ಟು ವರ್ಷಗಳ ಸೇವೆಯ ಅನುಭವದಿಂದ ನನಗೆ ಸೀಮಾಳ ಎಲ್ಲ ವಿಷಯಗಳ ಯಾವುದೇ ದೃಷ್ಟಿಕೋನದಿಂದ ಮಾನ್ಯವಿಲ್ಲ. ಪ್ರೇಮಸಂಬಂಧದಿಂದ ಆಕರ್ಷಣೆ ಉಂಟಾಗಿದೆ ಎಂದು ನನಗೆ ಅನಿಸುವುದಿಲ್ಲ. ಈ ಪ್ರಕರಣದಲ್ಲಿ ಬೇರೆ ಏನಾದರೂ ಇದ್ದರೆ ಅದು ಕಾಲದ ಪ್ರವಾಹದಲ್ಲಿ ಬಹಿರಂಗವಾಗಲೇ ಬೇಕು. ಈ ಪ್ರಕರಣದಲ್ಲಿ ಆಳವಾದ ತನಿಖೆ ನಡೆಯುವುದು ಆವಶ್ಯಕವಾಗಿದೆ.

೬. ನೇಪಾಳ ಗಡಿಯಿಂದ ಗುರುತಿನ ಚೀಟಿ (ಪಾಸ್‌ಪೋರ್ಟ್) ಇಲ್ಲದೇ ಭಾರತದೊಳಗೆ ಪ್ರವೇಶ ನೀಡುವುದು ಅಯೋಗ್ಯವಾಗಿದೆ ! : ಈ ರೀತಿ ಅನೇಕ ಪಾಕ್ ಎಜೆಂಟ್‌ಗಳು ನೇಪಾಳ ಮೂಲಕ ಭಾರತಕ್ಕೆ ಬರುತ್ತಾರೆ, ಇದು ಸತ್ಯವಾಗಿದೆ. ಭಾರತ-ನೇಪಾಳ ಗಡಿಯಲ್ಲಿ ಹೆಚ್ಚು ಪರಿಶೀಲನೆಯಾಗುವುದಿಲ್ಲ. ಈಗ ಸಮಯ ಬಂದೊದಗಿದೆ ಎಂದರೆ, ಗುರುತಿನ ಚೀಟಿಯಿಲ್ಲದೇ ನೇಪಾಳ ಗಡಿಯಿಂದ ಯಾರಿಗೂ ಭಾರತ ದೊಳಗೆ ಪ್ರವೇಶಿಸಲು ಬಿಡಬಾರದು. ಯಾವ ವ್ಯವಸ್ಥೆ ವಿಮಾನ ನಿಲ್ದಾಣದಲ್ಲಿ ಇರುತ್ತದೆಯೋ ಅದೇ ವ್ಯವಸ್ಥೆ ಭಾರತ-ನೇಪಾಳ ಗಡಿಯಲ್ಲಿಯೂ ಇರಬೇಕು. ಸೀಮಾ ಹೈದರಳು ಆಯ್ದುಕೊಂಡ ಮಾರ್ಗದಿಂದ ಅವಳು ಮನಸ್ಸು ಸಂಪೂರ್ಣವಾಗಿ ಶುದ್ಧವಿಲ್ಲ ಎಂದು ಸ್ಪಷ್ಟವಾಗಿ ಕಾಣಿಸುತ್ತದೆ. ನೇಪಾಳದಲ್ಲಿ ಐ.ಎಸ್.ಐ. ದೊಡ್ಡ ಅಸ್ತಿತ್ವವನ್ನು ಹೊಂದಿದೆ. ಅಲ್ಲಿಂದಲೇ ಭಾರತಕ್ಕೆ ನಕಲಿ ನೋಟುಗಳ ಕಳ್ಳಸಾಗಾಣಿಕೆಯಾಗುತ್ತದೆ. ಪಾಕಿಸ್ತಾನದ ‘ಹಬೀಬ ಬ್ಯಾಂಕ್ ಮತ್ತು ‘ರಾಷ್ಟ್ರೀಯ ಬ್ಯಾಂಕ್ ಆಫ್ ನೇಪಾಳ ಇವುಗಳು ಸೇರಿ ‘ಹಿಮಾಲಯಾ ಬ್ಯಾಂಕ್ ಸ್ಥಾಪಿಸಿವೆ. ಭಾರತ-ನೇಪಾಳ ಗಡಿಯಲ್ಲಿ ಅದರ ೨೪ ಶಾಖೆಗಳಿವೆ. ವಾದಗ್ರಸ್ತ ಜನರಿಗೆ ಭಾರತದೊಳಗೆಪ್ರವೇಶ ನೀಡುವುದು, ಗಡಿಯ ಭಾಗಗಳಲ್ಲಿ ಮದರಸಾಗಳನ್ನು ಕಟ್ಟುವುದು, ಭಾರತದಲ್ಲಿ ನಕಲಿ ನೋಟುಗಳ ಕಳ್ಳಸಾಗಾಣಿಕೆ ಮಾಡುವುದು, ಇವೇ ಕೆಲಸಗಳನ್ನು ಅವರು ಮಾಡುತ್ತಾರೆ. (ಆಧಾರ : ‘ಅಂಜೂ ಪಂಕಜ ಶೋ ಯು ಟ್ಯೂಬ್ ವಾಹಿನಿ, ೧೩.೭.೨೦೨೩)