ಶಾಲೆಗೆ ತಿಲಕ ಹಚ್ಚಿ ಬಂದಿದ್ದಕ್ಕೆ ಹಿಂದೂ ವಿದ್ಯಾರ್ಥಿಗೆ ಮುಸಲ್ಮಾನ ವಿದ್ಯಾರ್ಥಿಗಳಿಂದ ಜೀವ ಬೆದರಿಕೆ !

  • ಅಲವರ (ರಾಜಸ್ಥಾನ) ಇಲ್ಲಿಯ ಘಟನೆ !

  • ಮುಸಲ್ಮಾನ ವಿದ್ಯಾರ್ಥಿಯ ಸಂಬಂಧಿಕರಿಂದ ಶಾಲೆಗೆ ನುಗ್ಗಿ ಹಿಂದೂ ವಿದ್ಯಾರ್ಥಿಗೆ ಥಳಿತ

  • ಇಸ್ಲಾಂ ಸ್ವೀಕರಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ

ಅಲವರ (ರಾಜಸ್ಥಾನ) – ಇಲ್ಲಿಯ ಚೌಮಾ ಗ್ರಾಮದಲ್ಲಿನ ರಾಜಕೀಯ ಉಚ್ಚ ಮಾಧ್ಯಮಿಕ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿ ಹಣೆಯಲ್ಲಿ ತಿಲಕ ಹಚ್ಚಿ ಬಂದಿರುವುದರಿಂದ ಅವನ ಶಾಲೆಯಲ್ಲಿನ ಮುಸಲ್ಮಾನ ವಿದ್ಯಾರ್ಥಿಗಳು ಅವನಿಗೆ ಹೊಡೆದಿದ್ದಾರೆ ಹಾಗೂ ಮುಸಲ್ಮಾನ ಹುಡುಗರ ಪೋಷಕರು ಕೂಡ ಶಾಲೆಗೆ ನುಗ್ಗಿ ಅವನನ್ನು ಹೊಡೆದಿದ್ದಾರೆ. ಈ ಪ್ರಕರಣದಲ್ಲಿ ೬ ಜನರ ವಿರುದ್ಧ ದೂರು ದಾಖಲಿಸಲಾಗಿದೆ.

ಅ. ಜುಲೈ ೨೫ ರಂದು ಮುಸಲ್ಮಾನ ವಿದ್ಯಾರ್ಥಿಗಳು ಈ ಹಿಂದೂ ವಿದ್ಯಾರ್ಥಿಗೆ ತಿಲಕ ಹಚ್ಚಿಕೊಂಡಿದ್ದಕ್ಕೆ ವಿರೋಧಿಸಿದ್ದರು. ಮರುದಿನ ಇತರ ಕೆಲವು ಹಿಂದೂ ವಿದ್ಯಾರ್ಥಿಗಳು ತಿಲಕ ಹಚ್ಚಿಕೊಂಡು ಶಾಲೆಗೆ ಬಂದರು. ಆಗ ಮುಸಲ್ಮಾನ ವಿದ್ಯಾರ್ಥಿಗಳು ಅವರನ್ನು ವಿರೋಧಿಸಿದರು. ಆ ಸಮಯದಲ್ಲಿ ಮುಖ್ಯೋಪಾಧ್ಯಾಯರು ಎರಡು ಗುಂಪಿನ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದರು. ತಿಲಕ ಹಚ್ಚಿಕೊಂಡು ಬರುವ ಬಗ್ಗೆ ಯಾರೂ ಆಕ್ಷೇಪಿಸಬಾರದು ಎಂಬುದು ಮುಖ್ಯೋಪಾಧ್ಯಾಯರು ಹೇಳಿದರು.

ಆ . ಜುಲೈ ೨೭ ರಂದು ಬೆಳಿಗ್ಗೆ ಇದರಿಂದ ಪುನಃ ಶಾಲೆಯಲ್ಲಿ ವಿವಾದ ನಡೆಯಿತು. ಆ ಸಮಯದಲ್ಲಿ ೭ – ೮ ಮುಸಲ್ಮಾನ ವಿದ್ಯಾರ್ಥಿಗಳಿಂದ ೧೧ ನೆಯ ತರಗತಿಯಲ್ಲಿ ಓದುತ್ತಿರುವ ಹಿಂದೂ ವಿದ್ಯಾರ್ಥಿಗಳಿಗೆ ಬೆದರಿಕೆ ನೀಡಿದರು ಮತ್ತು ಅವರ ಹಣೆಯ ಮೇಲಿನ ತಿಲಕವನ್ನು ಅಳಿಸುವ ಪ್ರಯತ್ನ ಮಾಡಿದರು. ಅದರ ನಂತರ ಈ ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯರ ಬಳಿ ದೂರು ನೀಡಲು ಹೋಗುವಾಗ ಅವರಿಗೆ ಮುಸಲ್ಮಾನ ವಿದ್ಯಾರ್ಥಿಗಳು ಹೊಡೆದರು. ಇದರ ಮಾಹಿತಿ ಮುಸಲ್ಮಾನ ವಿದ್ಯಾರ್ಥಿಯ ಸಂಬಂಧಿಕ ಯೂಸುಫ್ ಇವನಿಗೆ ದೊರೆತ ನಂತರ ಅವನು ಕೂಡ ಅಲ್ಲಿಗೆ ಬಂದನು ಮತ್ತು ಅವನು ಕೂಡ ಹಿಂದೂ ವಿದ್ಯಾರ್ಥಿಗಳಿಗೆ ಥಳಿಸಿದನು ಮತ್ತು ಅಲ್ಲಿಂದ ಓಡಿ ಹೋದನು.

ಇ . ಹಿಂದೂ ವಿದ್ಯಾರ್ಥಿಗಳು ಹೇಳಿದಂತೆ, ಮುಸಲ್ಮಾನ ವಿದ್ಯಾರ್ಥಿ ಮತ್ತು ಅವರ ಸಂಬಂಧಿಕರು ಇಸ್ಲಾಂ ಸ್ವೀಕರಿಸುವುದಕ್ಕೆ ಬೆದರಿಕೆ ನೀಡುತ್ತಿದ್ದರು. ನೀವು ಮುಸಲ್ಮಾನ ಆಗದಿದ್ದರೆ ನಿಮ್ಮನ್ನು ಮುಗಿಸುವೆವು’ ಎಂದು ಬೆದರಿಕೆ ನೀಡಿದರು. ಇದರ ನಂತರ ಪೊಲೀಸರಲ್ಲಿ ದೂರು ನೀಡಿದ ನಂತರ 6 ಜನರ ವಿರುದ್ಧ ದೂರನ್ನು ದಾಖಲಿಸಲಾಯಿತು ಹಾಗೂ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.

ಸಂಪಾದಕೀಯ ನಿಲುವು

ಶಾಲೆಯಲ್ಲಿ ಕಲಿಯುವ ಮುಸಲ್ಮಾನ ವಿದ್ಯಾರ್ಥಿಗಳು ಹಿಂದೂ ವಿದ್ಯಾರ್ಥಿ ತಿಲಕ ಹಚ್ಚುವುದನ್ನು ವಿರೋಧಿಸುತ್ತಾರೆ, ಇದರಿಂದ ಅವರು ಸರ್ಮಧರ್ಮಸಮಭಾವಕ್ಕೆ ಯಾವುದೇ ರೀತಿಯ ಗೌರವ ತೋರುತ್ತಿಲ್ಲ ಇದೇ ಸ್ಪಷ್ಟವಾಗುತ್ತದೆ. ಹಿಂದೂಗಳು ಇಂತಹ ಆತ್ಮಘಾತಕ ಸರ್ವಧರ್ಮಸಮಭಾವದ ಪಾಲನೆ ಏಕೆ ಮಾಡುತ್ತಿದ್ದಾರೆ ?