ವಿಶ್ವ ಹಸಿವು ಸೂಚ್ಯಂಕದಲ್ಲಿ ೯೯ನೇ ಸ್ಥಾನದಲ್ಲಿ ಪಾಕಿಸ್ಥಾನ !

ವಿಶ್ವದಾದ್ಯಂತ ಹಸಿವಿನಿಂದ ೮೨ ಕೋಟಿ ೮೦ ಲಕ್ಷ ಜನರು ಬಳಲುತ್ತಿದ್ದಾರೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ವಿಶ್ವ ಹಸಿವು ಸೂಚ್ಯಂಕದಲ್ಲಿ ಪಾಕಿಸ್ತಾನವು ೧೨೧ ದೇಶಗಳ ಸೂಚಿಯಲ್ಲಿ ೯೯ ನೇ ಸ್ಥಾನಕ್ಕೆ ಬಂದಿದೆ. ಈ ಸೂಚ್ಯಾಂಕದ ವರದಿಯಲ್ಲಿ, ಸಶಸ್ತ್ರ ಸಂಘರ್ಷ, ಹವಾಮಾನ ಬದಲಾವಣೆ ಮತ್ತು ಕರೋನಾ ಸಾಂಕ್ರಾಮಿಕತೆಯಿಂದ ವಿಶ್ವದಾದ್ಯಂತ ೮೨ ಕೋಟಿ ೮೦ ಲಕ್ಷ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ೨೦೩೦ರವರೆಗೆ ಅಪೌಷ್ಟಿಕತೆಯ ಮಟ್ಟವು ಕಡಿಮೆಯಾಗುವ ಸಾಧ್ಯತೆಯಿದೆ.