ಕಾಂಗ್ರೆಸ್ ನ ಮಾಜಿ ಶಾಸಕ ವಿಜಯ್ ದರ್ಡ್ ಇವರಿಗೆ ಕಲ್ಲಿದ್ದಲು ಹಗರಣದ ಪ್ರಕರಣದಲ್ಲಿ ೪ ವರ್ಷ ಜೈಲು ಶಿಕ್ಷೆ !

ನವ ದೆಹಲಿ – ಕಲ್ಲಿದ್ದಲು ಹಗರಣದಲ್ಲಿ ಕಾಂಗ್ರೆಸ್ಸಿನ ಮಾಜಿ ಶಾಸಕ ವಿಜಯ್ ದರ್ಡ್ ಮತ್ತು ಅವರ ಪುತ್ರ ದೇವೇಂದ್ರ ಇವರನ್ನು ಜುಲೈ ೧೩ ರಂದು ಅಪರಾಧಿ ಎಂದು ನಿರ್ಧರಿಸಲಾಯಿತು. ಈಗ ಅವರಿಗೆ ೪ ವರ್ಷದ ಜೈಲು ಶಿಕ್ಷೆ ವಿಧಿಸಿದೆ. ದೆಹಲಿಯಲ್ಲಿನ ವಿಶೇಷ ನ್ಯಾಯಾಲಯದಿಂದ ಈ ಪ್ರಕರಣದಲ್ಲಿ ಇವರು ತಪ್ಪಿತಸ್ಥರಾಗಿರುವುದು ಸಾಬೀತಾಗಿತ್ತು. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ೨೦೧೨ ರಲ್ಲಿ ಕಲ್ಲಿದ್ದಲು ಹಗರಣ ಬಹಿರಂಗವಾಗಿತ್ತು.

ಇತರ ಅಪರಾಧಿಗಳಲ್ಲಿ ಕಲ್ಲಿದ್ದಲು ಇಲಾಖೆಯ ಆಗಿನ ಸಚಿವ ಹೆಚ್. ಸಿ. ಗುಪ್ತ, ಕೆ ಎಸ್. ಕ್ರೋಫಾ ಮತ್ತು ಕೆ. ಸಿ. ಸಾಮರಿಯ, ‘ಜೆ.ಎಲ್.ಡಿ ಯಾವತಮಾಳ ಎನರ್ಜಿ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಂಚಾಲಕ ಮನೋಜ ಕುಮಾರ್ ಜೈಸ್ವಾಲ ಮುಂತಾದವರ ಸಮಾವೇಶವಿದೆ. ಈ ಪ್ರಕರಣದಲ್ಲಿ ಕಲ್ಲಿದ್ದಲು ಇಲಾಖೆಯ ಮೂರು ಅಧಿಕಾರಿಗಳಿಗೂ ಕೂಡ ೩ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು ಯಾವತಮಾಳದ ಕಂಪನಿಗೆ ೫೦ ಲಕ್ಷ ರೂಪಾಯ ದಂಡ ವಿಧಿಸಲಾಗಿದೆ.

ಏನಿದು ಪ್ರಕರಣ ?

ಜನರಲ್ ಅಕೌಂಟೆಂಟ್ ರ ಪ್ರಕಾರ ಈ ಹಗರಣ ೧೦ ಲಕ್ಷ ಕೋಟಿ ರೂಪಾಯಿಯದಾಗಿತ್ತು. ಈ ಹಗರಣದ ಪ್ರಕರಣದಲ್ಲಿ ಇಲ್ಲಿಯವರೆಗೆ ೧೩ ಜನರಿಗೆ ಶಿಕ್ಷೆ ವಿಧಿಸಲಾಗಿದೆ. ದರ್ಡ್ ಇವರು ಕಾನೂನಾಬಾಹಿರವಾಗಿ ಕಲ್ಲಿದ್ದಲು ಗಣಿಯ ಗುತ್ತಿಗೆ ಪಡೆದು ಭ್ರಷ್ಟಾಚಾರ ನಡೆಸಿರುವ ಆರೋಪವಿದೆ.

ಸಂಪಾದಕೀಯ ನಿಲುವು

ಭ್ರಷ್ಟಾಚಾರದಲ್ಲಿ ಮುಳುಗಿರುವ ಅನೇಕ ಕಾಂಗ್ರೆಸ್ ನಾಯಕರಲ್ಲಿ ಕೊನೆಪಕ್ಷ ಒಬ್ಬರಿಗಾದರೂ ಶಿಕ್ಷೆ ಆಯಿತು !

ಕಲ್ಲಿದ್ದಲು ಹಗರಣದ ಪ್ರಕರಣವು ೧೧ ವರ್ಷಗಳ ಹಿಂದಿನದು. ಆದ್ದರಿಂದ ಈ ಹಗರಣದಿಂದ ಬಿಸಿ ಮುಟ್ಟಿರುವ ಸಾಮಾನ್ಯ ಜನರಿಗೆ ತಡವಾಗಿ ಸಿಕ್ಕಿರುವ ನ್ಯಾಯ ಇದು ಅನ್ಯಾಯವೇ’, ಹೀಗೆ ಅನಿಸಿದರೆ ತಪ್ಪಾಗಲಾರದು !