ಕರಾಚಿಯಲ್ಲಿ ಕಟ್ಟರವಾದಿಗಳಿಂದ ಅಹಮದಿ ಜನಾಂಗದ ಮಸೀದಿ ಧ್ವಂಸ !

ಕರಾಚೆ (ಪಾಕಿಸ್ತಾನ) – ಇಲ್ಲಿ ದುಷ್ಕರ್ಮಿಗಳು ಜುಲೈ ೨೫ ರಂದು ಅಹಮದಿ ಮುಸಲ್ಮಾನರ ಮಸೀದಿಯ ಮೇಲೆ ದಾಳಿ ನಡೆಸಿ ಅದರ ಮಿನಾರ ಧ್ವಂಸ ಮಾಡಿದ್ದಾರೆ. ಪಾಕಿಸ್ತಾನದಲ್ಲಿನ ಮುಸಲ್ಮಾನರು ಅಹಮದಿ ಮುಸಲ್ಮಾನರನ್ನು ಮುಸಲ್ಮಾನರೆಂದು ಒಪ್ಪುವುದಿಲ್ಲ. ಇದರಿಂದಲೇ ಅವರ ಮೇಲೆ ದಾಳಿಗಳು ನಡೆಯುತ್ತವೆ.

(ಸೌಜನ್ಯ : Hindustan Times)

೧. ಈ ಘಟನೆಯ ಬಗ್ಗೆ ಅಹಮದಿ ಜನಾಂಗದ ವಕ್ತಾರ ಅಮೀರ್ ಮಹಮೋದ್ ಇವರು, ಈ ರೀತಿಯ ಘಟನೆ ಮೊದಲ ಬಾರಿ ಘಟಿಸಿದೆ ಎಂದೇನಲ್ಲ, ಎರಡು ತಿಂಗಳ ಹಿಂದೆ ಕರಾಚಿಯಲ್ಲಿನ ನಮ್ಮ ಎರಡು ಮಸೀದಿಗಳನ್ನು ದ್ವಂಸಗೊಳಿಸಿದ್ದರು. ಪಂಜಾಬ ಪ್ರಾಂತ್ಯದಲ್ಲಿ ಕಟ್ಟರವಾದಿಗಳು ಪೊಲೀಸರಿಗೆ, ‘ಅಲ್ಲಿಯ ಮಸೀದಿ ನೆಲಸಮ ಮಾಡದಿದ್ದರೇ ನಾವು ಅದರ ಮೇಲೆ ದಾಳಿ ನಡೆಸಿ ಅದನ್ನು ನೆಲೆಸಮ ಮಾಡುತ್ತೇವೆ. ಎಂದು ಎಚ್ಚರಿಕೆ ನೀಡಿದ್ದರು. ಆದ್ದರಿಂದ ಪೊಲೀಸರು ನಮ್ಮ ಮಸೀದಿಯನ್ನು ಕೆಡವಿದ್ದರು. ಪಾಕಿಸ್ತಾನ ಸರಕಾರ ಅಹಮದಿ ಜನಾಂಗದ ಪ್ರಾರ್ಥನಾ ಸ್ಥಳಗಳಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ. ನಾವು ಪೋಲಿಸರ ಬಳಿ ದಾಳಿಯ ಘಟನೆಯ ಬಗ್ಗೆ ದೂರು ನೀಡುತ್ತೇವೆ ಮತ್ತು ಪೊಲೀಸರು ದೂರು ದಾಖಲಿಸಿಕೊಳ್ಳುತ್ತಾರೆ; ಆದರೆ ಕ್ರಮ ಮಾತ್ರ ಕೈಗೊಳ್ಳುವುದಿಲ್ಲ.

೨. ಕರಾಚಿಯಲ್ಲಿನ ಮಸೀದಿಯ ಧ್ವಂಸದ ಬಗ್ಗೆ ಪೊಲೀಸ ಅಧಿಕಾರಿ ತಾರಿಕ ನವಾಜ್ ಇವರು, ನಮ್ಮ ಬಳಿ ದೂರು ಬಂದಿದ್ದು ದೂರು ನೀಡುವ ಮೊದಲೇ ನಾವು ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದರು.

೩. ೧೯೭೪ ರಲ್ಲಿ ಪಾಕಿಸ್ತಾನದ ಸಂಸತ್ತಿನಲ್ಲಿ ಅಹಮದಿ ಜನಾಂಗವನ್ನು ‘ಮುಸಲ್ಮಾನೆತರ’ರೆಂದು ಘೋಷಿಸಿದೆ, ಹಾಗೂ ಅವರು ತಮ್ಮನ್ನು ಮುಸಲ್ಮಾನ ಎಂದು ಹೇಳಿಕೊಳ್ಳುವುದರ ಮೇಲೆ ನಿಷೇಧ ಹೇರಿದರು. ಅವರಿಗೆ ತೀರ್ಥಕ್ಷೇತ್ರ ಸೌದಿ ಅರೇಬಿಯಾಕೆ ಹೋಗಲು ಕೂಡ ನಿಷೇಧ ಹೇರಲಾಗಿದೆ. ಪಾಕಿಸ್ತಾನದಲ್ಲಿ ಅಹಮದಿ ಜನಾಂಗದ ಜನಸಂಖ್ಯೆ ೧೦ ಲಕ್ಷಕ್ಕಿಂತಲೂ ಹೆಚ್ಚಿದೆ.

ಅಹಮದಿಯಾ ಮುಸಲ್ಮಾನ ಅಂದರೆ ಯಾರು ?

ಇಸ್ಲಾಂನಲ್ಲಿ ಸುಮಾರು ೭೩ ಜಾತಿಗಳಿವೆ. ಅದರಲ್ಲಿ ಅಹಮದಿಯಾ ಕೂಡ ಒಂದು ಜಾತಿ. ಅದರ ಸ್ಥಾಪನೆ ೧೮೮೯ ರಲ್ಲಿ ಮಿರ್ಜಾ ಗುಲಾಂ ಅಹಮದ್ ಇವರು ಮಾಡಿದ್ದರು. ಇಸ್ಲಾಂನಲ್ಲಿ ಮಹಮ್ಮದ್ ಪೈಗಂಬರ ಇವರೊಬ್ಬರೇ ಪ್ರವಾದಿಯಾಗಿದ್ದಾರೆ; ಆದರೆ ಅಹಮದ್ ಇವರು ತಮ್ಮನ್ನು ಪ್ರವಾದಿ ಎಂದು ಹೇಳಿದರು. ಅವರು ತಮ್ಮನ್ನು ‘ಮಸಿಹಾ’ (ಜಗತ್ತಿನ ಕಲ್ಯಾಣಕ್ಕಾಗಿ ಅವತರಿಸಿದ ವ್ಯಕ್ತಿ) ಎನ್ನುತ್ತಿದ್ದರು. ಆದಕಾರಣ ಮುಸಲ್ಮಾನ ಸಮಾಜ ಅಹಮದೀಯ ಜನಾಂಗದ ಮುಸಲ್ಮಾನರನ್ನು ‘ಮುಸಲ್ಮಾನ’ ಎಂದು ನಂಬುವುದಿಲ್ಲ. ಅವರನ್ನು ‘ಕಾಫಿರ್’ (ಇಸ್ಲಾಂ ನಂಬದೇ ಇರುವ) ಎಂದು ತಿಳಿಯುತ್ತಾರೆ.

ಸಂಪಾದಕರ ನಿಲುವು

* ಪಾಕಿಸ್ತಾನದಲ್ಲಿ ಅಹಮದಿ ಜನಾಂಗವನ್ನು ಮುಸಲ್ಮಾನೇತರ ಎಂದು ತಿಳಿಯುತ್ತಾರೆ !