೧. ಮಲಮಾಸಕ್ಕೆ ಸಿಕ್ಕಿದ ಪುರುಷೋತ್ತಮ ನಾಮದವಿಧಾನ
ಪುರುಷೋತ್ತಮ ಎಂಬುದು ವಾಸುದೇವ, ಮಹಾ ವಿಷ್ಣುವಿನ ಹೆಸರಾಗಿದೆ. ಈ ಅಧಿಕ ಮಾಸಕ್ಕೆ ಮೊದಲು ‘ಮಲಮಾಸ’ ಎಂದು ಹೆಸರಿತ್ತು. ತದನಂತರ ಮಲಮಾಸಕ್ಕೆ ಪುರುಷೋತ್ತಮನು ಮುಂದಿನಂತೆ ವರದಾನ ನೀಡಿದನು. ‘ಈ ಮಾಸದಲ್ಲಿ ಆಗುವಂತಹ ಪ್ರತಿಯೊಂದು ಸತ್ಕರ್ಮವು ಅಧಿಕವಾಗಿ ವೃದ್ಧಿಯಾಗುತ್ತದೆ ಮತ್ತು ಆ ಸೇವೆಯೆಲ್ಲವೂ ಪುರುಷೋತ್ತಮನಿಗೆ ಸೇರುತ್ತದೆ. ಈ ಮಾಸದಲ್ಲಿ ಉತ್ತಮ ಸದ್ಗುರು ಸೇವೆಯನ್ನು ಮಾಡಿದವರ ಜೀವನವು ಸಾರ್ಥಕವಾಗುತ್ತದೆ. ಹೀಗೆ ಶ್ರೀಕೃಷ್ಣನು ಮಲಮಾಸಕ್ಕೆ ನೀಡಿದ ವರದಾನದ ಬಗ್ಗೆ ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ,
೨. ಪುರುಷೋತ್ತಮ ಮಾಸದಲ್ಲಿ ಏನು ಮಾಡಬೇಕು ?
೨ ಅ. ಪುರುಷೋತ್ತಮ ಮಾಸದಲ್ಲಿ ಹೆಚ್ಹೆಚ್ಚು ಸತ್ಕರ್ಮ, ದಾನ, ತ್ಯಾಗ ಮತ್ತು ಸೇವೆ ಮಾಡಬೇಕು : ಪುರುಷೋತ್ತಮ ಮಾಸದಲ್ಲಿ ಮಾಡುವ ಒಳ್ಳೆಯ ಕಾರ್ಯಗಳು, ಸತ್ಕರ್ಮಗಳು, ನಾಮಸ್ಮರಣೆ, ಮಂತ್ರ ಪಠಣಗಳು ಬಹುವಾಗಿ ವೃದ್ಧಿಯಾಗುತ್ತವೆ. ಮನಸ್ಸಿನ ಚಕ್ರವರ್ತಿಯಾದ ಚಂದ್ರನ ಪ್ರಭಾವವು ಅಧಿಕ ಮಾಸದಲ್ಲಿರುವುದೇ ಇದಕ್ಕೆ ಕಾರಣವಾಗಿದೆ ಹಾಗಾಗಿ ಈ ಪುರುಷೋತ್ತಮ ಮಾಸದಲ್ಲಿ ಹೆಚ್ಹೆಚ್ಚು ಸತ್ಕಾರ್ಯ, ದಾನ, ತ್ಯಾಗ, ಸೇವೆ ಮಾಡಬೇಕು.
೨ ಅ ೧. ಸತ್ಕರ್ಮಗಳನ್ನು ವೃದ್ಧಿಸುವ ಮಾಸ : ಇದು ಗುಣಾಕಾರದ ಮಾಸವಾಗಿರುವುದರಿಂದ, ನಾವು ಏನು ಮಾಡಿದರೂ ಸದ್‌ವಿವೇಕಬುದ್ಧಿ, ವಿಚಾರ ಶಕ್ತಿ ಜಾಗೃತವಿಟ್ಟು ಮಾಡುವುದು ಮಹತ್ವದ್ದಾಗಿದೆ, ಈ ಕಾಲಾವಧಿಯಲ್ಲಿ ಪ್ರತಿಯೊಬ್ಬರೂ ತಾತ್ಕಾಲಿಕ ದುರಾಸೆಯನ್ನು ಬದಿಗಿಟ್ಟು ಸತ್ಕರ್ಮಗಳ ಅಮೂಲ್ಯ ಲಾಭವನ್ನು ಪಡೆದುಕೊಳ್ಳಬೇಕು. ಮುಂದೆ ಎಂದಾದರೊಂದು ಸತ್ಕಾರ್ಯದ ಫಲ ಸಿಗಲಿದೆ ಮತ್ತು ಆಗ ನಮ್ಮ ಬದುಕು ಬಂಗಾರವಾಗುತ್ತದೆ ಎಂಬುದು ನಿಶ್ಚಿತ. ನಿಜವಾದ ಬಂಗಾರಕ್ಕಿಂತ, ಬಾಳು ಬಂಗಾರವಾದರೆ ಎಷ್ಟು ಚೆಂದ ! ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಿ ನಾವು ನಿಜವಾದ ಸಂತೋಷವನ್ನು ಪಡೆಯಲು ಸಾಧ್ಯವಿದೆಯೆ ? ಅದಕ್ಕಿಂತ ಹೆಚ್ಚಾಗಿ, ನಾವು ಇಡೀ ಜೀವನವನ್ನು ಸುಂದರವಾಗಿಸಿದರೆ, ನಮ್ಮ ಜನ್ಮವು ಖಂಡಿತವಾಗಿಯೂ ಸಾರ್ಥಕವಾಗುತ್ತದೆ ಮತ್ತು ಇದು ಮಾತ್ರ ಸಾವಿನ ನಂತರವೂ ನಮ್ಮೊಂದಿಗಿರಲಿದೆ.
೨ ಅ ೨. ಲಾಭವನ್ನು ವೃದ್ಧಿಸುವುದೋ ಅಥವಾ ದುರಾಶೆಯನ್ನು ವೃದ್ಧಿಸುವುದು ? ಎಂದು ನಾವೇ ನಿರ್ಧರಿಸಬೇಕು ! : ಈ ಪುರುಷೋತ್ತಮ ಮಾಸದಲ್ಲಿ ಇಂತಹ ಸತ್ಕರ್ಮ ಬಿಟ್ಟು ತಾತ್ಕಾಲಿಕ ಸ್ವಾರ್ಥವನ್ನು ಪೂರೈಸುವ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಹೋದರೆ ಯಾವುದೇ ರೀತಿಯಿಂದ ಅಭಿವೃದ್ಧಿಯಾಗುವುದಿಲ್ಲ. ಇಂತಹ ಸರಳ ವಿಚಾರ ಮಾಡಬೇಕು. ನಾವು ಏನನ್ನು ವೃದ್ಧಿಸಬೇಕಾಗಿದೆ, ಸತ್ಕರ್ಮಗಳನ್ನೋ ಅಥವಾ ಲೋಭವನ್ನು ? ನಾವು ಲೋಭವನ್ನು ವೃದ್ಧಿಸದೆ ಲಾಭವನ್ನು ವೃದ್ಧಿಸುವುದಾದರೆ, ನಾವು ನಾಮವನ್ನು ನಿರ್ಧರಿಸಬೇಕು.
– ಬ್ರಹ್ಮಲೀನ ಸದ್ಗುರು ಬಾಪಟ ಗುರುಜಿ
[ಆಭಾರ : ‘ಗುರುತತ್ವ (ಒಂದು ಮಾರ್ಗದರ್ಶಕ), ಜುನ ೨೦೧೮]