ಉತ್ಸವಗಳಲ್ಲಿ ಭಕ್ತಿಯ ಬದಲು ಶಕ್ತಿಯ ಪ್ರದರ್ಶನ ತೋರುವ ದೇವಸ್ಥಾನಗಳನ್ನು ಮುಚ್ಚಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ

ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯವು ಜುಲೈ ೨೧ ರಂದು ಒಂದು ಅರ್ಜಿಯ ಬಗ್ಗೆ ಆಲಿಕೆ ನಡೆಸುವಾಗ, ‘ದೇವಸ್ಥಾನದ ಉತ್ಸವಗಳು ಭಕ್ತಿಯ ಬದಲು ಶಕ್ತಿ ಪ್ರದರ್ಶನದಕ್ಕೆ ಸೀಮಿತವಾಗಿದ್ದರೆ ಮತ್ತು ಅದರಿಂದ ಹಿಂಸೆಗೆ ಕುಮ್ಮಕು ದೊರೆಯುತ್ತಿದ್ದರೆ ಅಂತಹ ದೇವಸ್ಥಾನಗಳನ್ನು ಮುಚ್ಚಬೇಕು’, ಎಂದು ಟಿಪ್ಪಣಿ ಮಾಡಿದೆ. ಅರುಲಮಿಘ ಶ್ರೀ ರುಥರಾ ಮಹಾ ಕಾಲಿಯಾಮ್ಮನ್ ಆಲಯಂ ಈ ದೇವಸ್ಥಾನದಲ್ಲಿನ ಉತ್ಸವಕ್ಕೆ ರಕ್ಷಣೆ ನೀಡಬೇಕು, ಎಂದು ದೇವಸ್ಥಾನದ ವ್ಯವಸ್ಥಾಪಕ ಥಂಗಾರಾಜ ಇವರು ಮನವಿ ದಾಖಲಿಸಿದ್ದರು. ‘ಉತ್ಸವದ ಸಂದರ್ಭದಲ್ಲಿ ಎರಡು ಗುಂಪಿನ ನಡುವೆ ವಿವಾದವಿದೆ. ಅದನ್ನು ಪರಿಹರಿಸುವುದಕ್ಕೆ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಶಾಂತಿ ಸಮಿತಿಯ ಸಭೆ ಆಯೋಜಿಸಲಾಗಿತ್ತು; ಆದರೆ ಇದರಿಂದ ಏನು ಪ್ರಯೋಜನವಾಗಲಿಲ್ಲ’, ಎಂದು ಥಂಗರಾಜ ಹೇಳಿದ್ದರು. ಇದರ ಕುರಿತು ನ್ಯಾಯಾಲಯ ಮೇಲಿನ ಟಿಪ್ಪಣಿ ಮಾಡಿದೆ.

ದೇವಸ್ಥಾನದಲ್ಲಿ ಮೂರ್ತಿ ಯಾರು ಇಡುವರು ? ಇದರ ಬಗ್ಗೆ ವಿವಾದ ಇದೆ. ತಹಶೀಲ್ದಾರರು ಉತ್ಸವ ನಡೆಸಲು ಅನುಮತಿ ನೀಡಿದ್ದರು; ಆದರೆ ದೇವಸ್ಥಾನದಲ್ಲಿ ಮೂರ್ತಿ ಇಡಲು ಎರಡು ಗುಂಪುಗಳಿಗೆ ನಿಷೇಧಿಸಿತ್ತು.

ಹಿಂದುಗಳ ದೇವಸ್ಥಾನ ಮತ್ತು ನ್ಯಾಯಾಲಯದ ಈ ಹಿಂದಿನ ಟಿಪ್ಪಣಿಗಳು !

೧. ಸಾರ್ವಜನಿಕ ಭೂಮಿಯಲ್ಲಿ ಕಟ್ಟಿರುವ ದೇವಸ್ಥಾನ ತೆರವುಗೊಳಿಸುವ ಕಾರ್ಯಾಚರಣೆಗೆ ೨೦೨೨ ರಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು ತಡೆ ನೀಡಲು ನಿರಾಕರಿಸಿತ್ತು. ಆಗ ನ್ಯಾಯಾಲಯವು, ಈಶ್ವರನು ಸರ್ವವ್ಯಾಪಿಯಾಗಿದ್ದಾನೆ ಮತ್ತು ಅವನ ದೈವಿ ಉಪಸ್ಥಿತಿಗಾಗಿ ಯಾವುದೇ ವಿಶೇಷ ಸ್ಥಾನದ ಆವಶ್ಯಕತೆ ಇಲ್ಲ, ಎಂದು ಹೇಳಿತು.

೩. ೨೦೨೧ ರಲ್ಲಿ ದೆಹಲಿಯ ಸಾಕೇತ ನ್ಯಾಯಾಲಯವು ಕುತುಬ್ ಮಿನಾರ್ ಇಲ್ಲಿ ಹಿಂದೆ ನೆಲೆಸಮ ಮಾಡಿರುವ ೨೭ ಹಿಂದೂ ಮತ್ತು ಜೈನ ದೇವಸ್ಥಾನಗಳ ಬಗ್ಗೆ ಸಲ್ಲಿಸಲಾದ ಅರ್ಜಿ ತಿರಸ್ಕರಿಸಿತು. ನ್ಯಾಯಾಲಯವು, ಭೂತಕಾಲದಲ್ಲಿನ ತಪ್ಪುಗಳು ವರ್ತಮಾನ ಮತ್ತು ಭವಿಷ್ಯದ ಶಾಂತಿ ಕದಡಲು ಕಾರಣವಾಗಲು ಸಾಧ್ಯವಿಲ್ಲ ಎಂದು ಹೇಳಿದೆ.

 

ಸಂಪಾದಕೀಯ ನಿಲುವು

ಹಿಂದೂಗಳ ದೇವಸ್ಥಾನಗಳನ್ನು ಮುಚ್ಚುವ ನಿರ್ಣಯ ಹಿಂದೂಗಳ ಧರ್ಮಗುರುಗಳ ಬಳಿ ಇದೆ, ಎಂದು ಹಿಂದೂಗಳಿಗೆ ಶ್ರದ್ಧೆ ಇದೆ !