ಚೀನಾಗಾಗಿ ಬೇಹುಗಾರಿಕೆ ಮಾಡುತ್ತಿದ್ದ ಕೆನಡಾದ ಮಾಜಿ ಅಧಿಕಾರಿಯ ಬಂಧನ

ಮಾಜಿ ಪೊಲೀಸ ಅಧಿಕಾರಿ ವಿಲಿಯಂ ಮೈಜಶರ

ಒಟಾವಾ – ಕೆನಡಾದಲ್ಲಿ 60 ವರ್ಷದ ಮಾಜಿ ಪೊಲೀಸ ಅಧಿಕಾರಿ ವಿಲಿಯಂ ಮೈಜಶರನನ್ನು ಬಂಧಿಸಲಾಗಿದೆ. ಕೆನಡಾದ `ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ’ (‘ಆರ್.ಸಿ.ಎಂ.ಪಿ’ಯು), ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ಚೀನಾಕ್ಕೆ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಯನ್ನು ಪೂರೈಸಿರುವುದಕ್ಕಾಗಿ ಅವರನ್ನು ಬಂಧಿಸಲಾಗಿದೆಯೆಂದು ಹೇಳಿದೆ. ದೇಶದ ವಿರುದ್ಧ ಪಿತೂರಿ ನಡೆಸಿದ್ದರಿಂದ ಅವರ ವಿರುದ್ಧ ದೂರು ದಾಖಲಿಸಲಾಗಿದೆ. 2021 ರಿಂದ ಮೌಜಶರ ಇವರ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು.

ಕಳೆದ ಕೆಲವು ವರ್ಷಗಳಿಂದ ಚೀನಾ ಮತ್ತು ಕೆನಡಾ ನಡುವಿನ ಸಂಬಂಧ ಹದಗೆಟ್ಟಿದೆ. ಮಾರ್ಚನಲ್ಲಿ ಕೆನಡಾದ ಅಧ್ಯಕ್ಷ ಜಸ್ಟಿನ್ ಟ್ರುಡೋ ಇವರು ಕೆನಡಾದ ಚುನಾವಣೆಗಳಲ್ಲಿ ಚೀನಾದ ಹೆಚ್ಚುತ್ತಿರುವ ಹಸ್ತಕ್ಷೇಪದ ಕುರಿತು ತನಿಖೆ ನಡೆಸುವಂತೆ ಆದೇಶಿಸಿದ್ದರು. ಈ ವರ್ಷ ಮೇನಲ್ಲಿ ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ವಾಣಿಜ್ಯ ರಾಯಭಾರಿ ಝಾವೊ ವೆಯಿ ಅವರು ಕೆನಡಾ ರಾಜಕಾರಣದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆಂದು ಆರೋಪ ಹೊರಿಸಿ, ಅವರನ್ನು ಕೆನಡಾದಿಂದ ಗಡಿಪಾರು ಮಾಡಲಾಗಿತ್ತು. ಚೀನಾ ಈ ಆರೋಪದಲ್ಲಿ ಹುರುಳಿಲ್ಲವೆಂದು ಹೇಳಿತ್ತು.

ಸಂಪಾದಕರ ನಿಲುವು

* ಜಗತ್ತಿನ ಅನೇಕ ಪ್ರಮುಖ ದೇಶಗಳಲ್ಲಿ ಚೀನಾದ ಇಂತಹ ಕೃತ್ಯ ನಡೆಯುತ್ತಿದ್ದು, ಅದು ಕೇವಲ ಭಾರತಕ್ಕಾಗಿ ಮಾತ್ರವಲ್ಲ, ವಿಶ್ವಕ್ಕೆ ಅಪಾಯಕಾರಿಯಾಗಿದೆ. ಇದು ಸತ್ಯ !