ಲೆಬನಾನ್ ನಲ್ಲಿ ಆರ್ಥಿಕ ಬಿಕ್ಕಟ್ಟು : ಶೇ. 90 ರಷ್ಟು ಜನರಿಗೆ ಆಹಾರಕ್ಕಾಗಿ ಪರದಾಟ !

ಬೈರೂಟ (ಲೆಬನಾನ್) – ಶ್ರೀಲಂಕಾ ಮತ್ತು ಪಾಕಿಸ್ತಾನಗಳ ಬಳಿಕ ಮಧ್ಯಪ್ರಾಚ್ಯ ದೇಶ ಲೆಬನಾನ್ ಕೂಡ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಅಲ್ಲಿ ಶೇ. 90 ರಷ್ಟು ಕುಟುಂಬಗಳಿಗೆ ಆಹಾರ ಖರೀದಿಸಲೂ ಹಣವಿಲ್ಲ. ಅಲ್ಲಿಯ ಅರ್ಥವ್ಯವಸ್ಥೆ ಕುಸಿದಿದೆ. ಸೆಂಟ್ರಲ್ ಬ್ಯಾಂಕ ಗವರ್ನರ್ ರಿಯಾದ ಸಲಾಮೇಹ 30 ವರ್ಷಗಳ ವರೆಗೆ ಹುದ್ದೆಯಲ್ಲಿದ್ದು ಈಗ ತ್ಯಾಗಪತ್ರವನ್ನು ನೀಡಿದ್ದಾರೆ.

ಎಲ್ಲೆಡೆ ಲೂಟಿ ನಡೆಯುತ್ತಿರುವ ಸ್ಥಿತಿ ಕಾಣುತ್ತಿದೆ. ಸಾಮಾನ್ಯ ಜನತೆಯು ಬ್ಯಾಂಕಿನಲ್ಲಿ ಹಣವನ್ನು ಹಿಂಪಡೆಯಲು ಹೋಗುತ್ತಾರೆ; ಆದರೆ ಅವರು ಬರಿಗೈಯಿಂದ ಹಿಂತಿರುಗಬೇಕಾಗಿದೆ. ಬ್ಯಾಂಕಿನ ಬಳಿಕ ಜನರಿಗೆ ಅವರ ಹಣ ನೀಡಲೂ ಹಣವಿಲ್ಲ. ಇದರಿಂದ ಆಕ್ರೋಶಗೊಂಡ ಕೆಲವು ಜನರು ಬ್ಯಾಂಕಗಳನ್ನು ದರೋಡೆ ಮಾಡಲು ಪ್ರಾರಂಭಿಸಿದ್ದಾರೆ. ಇಂತಹ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು, ಅದರಲ್ಲಿ ಉಮರ ಆವಾಹ ಹೆಸರಿನ ವ್ಯಕ್ತಿಯು ಬ್ಯಾಂಕಿನ ಓರ್ವ ನೌಕರನ ಮೇಲೆ ಒತ್ತಡ ಹೇರುತ್ತಿರುವುದು ಕಂಡು ಬರುತ್ತಿದೆ. ಅವನ ಕೈಯಲ್ಲಿ ಆಸಿಡ್ ತುಂಬಿದ ಬಾಟಲಿಯಿದ್ದು, ಸಿಬ್ಬಂದಿಯು ಹಣ ನೀಡದಿದ್ದರೆ ಆತನ ಮೇಲೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿರುವುದು ಕಂಡು ಬರುತ್ತಿದೆ.