|
ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ಜ್ಞಾನವಾಪಿ ಪ್ರಕರಣದಲ್ಲಿನ ಜಿಲ್ಲಾ ನ್ಯಾಯಾಲಯದಿಂದ ಪುರಾತತ್ವ ಇಲಾಖೆಗೆ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಿದೆ. ನ್ಯಾಯಾಲಯವು ಆಗಸ್ಟ್ ೪ ವರೆಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ ಅದರ ವರದಿ ಸಲ್ಲಿಸುವಂತೆ ಆದೇಶ ನೀಡಿದೆ. ಹಿಂದೂ ಪಕ್ಷದಿಂದ ಈ ಸಂದರ್ಭದಲ್ಲಿ ಬೇಡಿಕೆ ಸಲ್ಲಿಸಲಾಗಿತ್ತು. ಜ್ಞಾನವಾಪಿಯ ವಜು ಖಾನಾ (ನಮಾಜನ ಮೊದಲು ಕೈ ಕಾಲು ತೊಳೆಯುವ ಸ್ಥಳ) ಬಿಟ್ಟು ಸಂಪೂರ್ಣ ಪರಿಸರದ ಸಮೀಕ್ಷೆ ನಡೆಸಲಾಗುವುದು. ನ್ಯಾಯಾಲಯದ ಆದೇಶದಿಂದ ನಡೆದ ಸಮೀಕ್ಷೆಯ ನಂತರ ವಜು ಖಾನ ಮುಚ್ಚಲಾಗಿತ್ತು. ಈ ಸಮೀಕ್ಷೆಯಿಂದ ಜ್ಞಾನವಾಪಿ ಎಷ್ಟು ವರ್ಷ ಪುರಾತನವಾಗಿದೆ ? ಮತ್ತು ಜ್ಞಾನವಾಪಿಯಲ್ಲಿ ದೊರೆತಿರುವ ದೊಡ್ಡ ಶಿವಲಿಂಗ ಎಷ್ಟು ಪುರಾತನವಾಗಿದೆ ? ಎಂಬುದು ಸ್ಪಷ್ಟವಾಗುವುದು. ವೈಜ್ಞಾನಿಕ ಸಮೀಕ್ಷೆಯಲ್ಲಿ ಆಧುನಿಕ ವ್ಯವಸ್ಥೆಯ ಉಪಯೋಗ ಮಾಡಲಾಗುವುದು. ಮುಸಲ್ಮಾನ ಪಕ್ಷದಿಂದ ಈ ಬೇಡಿಕೆಗೆ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಜ್ಞಾನವಾಪಿ ಪರಿಸರದಲ್ಲಿ ನ್ಯಾಯಾಲಯದ ಆದೇಶದಿಂದ ನ್ಯಾಯಾಲಯವು ನೇಮಕಗೊಳಿಸಿರುವ ನ್ಯಾಯವಾದಿ ಆಯುಕ್ತರಿಂದ ಸಮೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಅಲ್ಲಿಯ ವಜು ಖಾನದ ಹತ್ತಿರ ಶಿವಲಿಂಗ ದೊರೆತಿತ್ತು ಹಾಗೂ ಪಶ್ಚಿಮದ ಗೋಡೆಯ ಮೇಲೆ ಹಿಂದೂಗಳ ಧಾರ್ಮಿಕ ಚಿನ್ಹೆಗಳು ಕಂಡು ಬಂದಿದ್ದವು.
ಉತ್ತರ ಪ್ರದೇಶದ ವಾರಾಣಾಸಿಯಲ್ಲಿನ ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ವಾರಣಾಸಿ ಕೋರ್ಟ್ ಅನುಮತಿ ನೀಡಿದೆ. pic.twitter.com/T08W6yfomy
— DD Chandana News (@DDChandanaNews) July 22, 2023
೧. ಹಿಂದೂ ಪಕ್ಷವು, ಈ ಜ್ಞಾನವಾಪಿಯಲ್ಲಿ ಮೂರು ಗುಮ್ಮಟಗಳಿದ್ದು ಅದರ ಕೆಳಗಿನ ಜಾಗದಲ್ಲಿ ಗೋಡೆ ಕಟ್ಟಿ ಅದನ್ನು ಮುಚ್ಚಲಾಗಿದೆ. ಅಲ್ಲಿ ಏನಾದರೂ ವೈಜ್ಞಾನಿಕ ಸಮೀಕ್ಷೆ ನಡೆಸಿದರೆ, ಅಲ್ಲಿ ದೇವತೆಗಳ ಮೂರ್ತಿಯ ಜೊತೆಗೆ ಕಾಶಿ ವಿಶ್ವೇಶ್ವರನ ಮೂಲ ಶಿವಲಿಂಗ ದೊರೆಯುವ ಸಾಧ್ಯತೆ ಇದೆ. ಇಲ್ಲಿಯ ಮೂಲ ಗುಮ್ಮಟದ ಮೇಲೆ ಮುಸಲ್ಮಾನ ಪದ್ಧತಿಯಿಂದ ಹೊಸ ಗುಮ್ಮಟ ಕಟ್ಟಿ ಮೂಲ ಗುಮ್ಮಟ ಮರೆಮಾಚಲಾಗಿದೆ. ಈ ಗುಮ್ಮಟದ ಕೆಳಗಡೆ ಗರ್ಭಗುಡಿ ಇರುವುದಾಗಿ ಹೇಳಲಾಗುತ್ತಿದೆ.
೨. ಈ ಮೊಕದ್ದಮೆಯಲ್ಲಿನ ಹಿಂದೂ ಪಕ್ಷದ ನ್ಯಾಯವಾದಿ ವಿಷ್ಣು ಶಂಕರ ಚೈನ ಇವರು, ನಾವು ‘ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೧೨ ರ ವರೆಗಿನ ಸಮಯದಲ್ಲಿ ಸಮೀಕ್ಷೆ ನಡೆಸಬೇಕೆಂದು’ ಆಗ್ರಹಿಸಿದ್ದೇವೆ. ಈ ಹಿಂದೆ ನ್ಯಾಯಾಲಯ ಆಯುಕ್ತರು ಕೂಡ ಇದೇ ಸಮಯದಲ್ಲಿ ಸಮೀಕ್ಷೆ ನಡೆಸಿದ್ದರು; ಕಾರಣ ಆ ಸಮಯದಲ್ಲಿ ಅಲ್ಲಿ ಯಾರು ನಮಾಜ್ ಗೆ ಬರುವುದಿಲ್ಲ ಮತ್ತು ಅದರಿಂದ ಅಡಚಣೆ ನಿರ್ಮಾಣವಾಗುವುದಿಲ್ಲ. ಈ ಪ್ರಕರಣದಲ್ಲಿ ಏನಾದರೂ ಮುಸಲ್ಮಾನ ಪಕ್ಷ ನ್ಯಾಯಾಲಯಕ್ಕೆ ಹೋದರೆ, ನಾವು ಅಲ್ಲಿ ಕೂಡ ಅವರನ್ನು ವಿರೋಧಿಸುತ್ತೇವೆ ಎಂದು ಹೇಳಿದರು.
ಶಿವಲಿಂಗದ ಸಮೀಕ್ಷೆಯ ಕುರಿತು ನಿರ್ಣಯ ಬಾಕಿ
ನ್ಯಾಯವಾದಿ ವಿಷ್ಣು ಶಂಕರ ಚೈನ ಇವರು, ವಜು ಖಾನದಲ್ಲಿ ದೊರೆತಿರುವ ಶಿವಲಿಂಗದ ಬಗ್ಗೆ ನ್ಯಾಯಾಲಯದಲ್ಲಿ ಸ್ವತಂತ್ರ ಮೊಕದ್ದಮೆ ನಡೆಯುತ್ತಿದೆ. ಆದ್ದರಿಂದ ಈಗ ಅದರ ಸಮೀಕ್ಷೆ ಇದರಲ್ಲಿ ನಡೆಯುವುದಿಲ್ಲ. ಇದರ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಬಾಕಿ ಇರುವುದರಿಂದ ಅದರ ಮೇಲೆ ಬರುವ ಜುಲೈ ೨೯ ರಂದು ವಿಚಾರಣೆ ನಡೆಯುವುದು ಎಂದು ಹೇಳಿದರು.