ಜಾನ್ಸನ್ ಅಂಡ್ ಜಾನ್ಸನ್ ಪೌಡರನಿಂದ ಕರ್ಕರೋಗ ಆಗಿರುವ ಘಟನೆ !

ಅಮೇರಿಕೆಯಲ್ಲಿ ಸಂತ್ರಸ್ತ ವ್ಯಕ್ತಿಗೆ 154 ಕೋಟಿ ರೂಪಾಯಿಗಳ ಪರಿಹಾರ ನೀಡುವಂತೆ ಕೋರ್ಟನಿಂದ ಆದೇಶ

ವಾಶಿಂಗ್ಟನ್ – ಜಾನ್ಸನ್ ಅಂಡ್ ಜಾನ್ಸನ್ ಪೌಡರನಿಂದಾಗಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ರೋಗಿಗೆ 154 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ಪಾವತಿಸಲು ಓಕ್ ಲ್ಯಾಂಡ್ ನ್ಯಾಯಾಲಯವು ಇತ್ತೀಚೆಗೆ ಕಂಪನಿಗೆ ಆದೇಶಿಸಿದೆ. ಜಾನ್ಸನ್ ಅಂಡ್ ಜಾನ್ಸನ್ ಪೌಡರನಿಂದಾಗಿ ಕ್ಯಾಲಿಫೋರ್ನಿಯಾದ ವ್ಯಕ್ತಿಗೆ ಕ್ಯಾನ್ಸರ್ ರೋಗ ಆಗಿರುವ ವಿಷಯದಲ್ಲಿ ಕಂಪನಿಯನ್ನು ಓಕ್ ಲ್ಯಾಂಡನ `ಡಿಫಾಲ್ಟ ಸ್ಟೇಟ್ ಕೋರ್ಟ’ ತಪ್ಪಿತಸ್ಥರೆಂದು ನಿರ್ಧರಿಸಿದೆ. ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಆಂತೊನಿ ಹರ್ನಾಂಡೆಝ್ ವಲಾಡೆಝ್ (ವಯಸ್ಸು 24 ವರ್ಷಗಳು) ಇವರಿಗೆ ಜಾನ್ಸನ್ ಅಂಡ್ ಜಾನ್ಸ್ ಪೌಡರನಿಂದಾಗಿ ಅಪರೂಪದ `ಮೆಸೊಥೆಲಿಯಾಮಾ’ ಎನ್ನುವ ಕ್ಯಾನ್ಸರ್ ಆಗಿರುವುದು ಕಂಡು ಬಂದಿದೆ. `ಮೆಸೊಥೆಲಿಯಾಮಾ’ ಇದು ಶರೀರದ ಅವಯವಗಳ ಮೇಲ್ಮೈಯಲ್ಲಿ ಬೆಳೆಯುತ್ತದೆ. ಸಾಮಾನ್ಯವಾಗಿ ಎಸಬೆಸ್ಟಸ್ ಖನಿಜ ಸಂಪರ್ಕಕ್ಕೆ ಬಂದಾಗ ಕ್ಯಾನ್ಸರ್ ಆಗುತ್ತದೆ. ವಲಾಂಡೆಝ್ ಚಿಕ್ಕಂದಿನಿಂದಲೇ ಜಾನ್ಸನ್ ಅಂಡ್ ಜಾನ್ಸ್ ಕಂಪನಿಯ ಟಾಲ್ಕಂ ಪೌಡರ ಉಪಯೋಗಿಸಿರುವುದರಿಂದ ಅವರಿಗೆ ಕ್ಯಾನ್ಸರ್ ಆಗಿದೆಯೆಂದು ಆಂಥೊನಿ ಹರ್ನಾಂಡೆಝ್ ಇವರು ಹೇಳಿದ್ದರು. ಜಾನ್ಸನ್ ಅಂಡ್ ಜಾನ್ಸನ್ ಉತ್ಪಾದನೆಯ ವಿಷಯದಲ್ಲಿ ಈ ಹಿಂದೆಯೂ ಅನೇಕ ಪ್ರಕರಣಗಳು ಬಹಿರಂಗವಾಗಿವೆ. ಅದರಲ್ಲಿ ಕಂಪನಿಯು ಪರಿಹಾರವನ್ನು ಪಾವತಿಸಿದೆ.

ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಅಧಿಕಾರಿಗಳು, ಕಂಪನಿಯ ಬೇಬಿ ಪೌಡರನ್ನು ವಿಶೇಷವಾಗಿರುವ ಬಿಳಿ ಬಾಟಲಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದರಿಂದ ಅದರಲ್ಲಿ ಯಾವತ್ತೂ `ಎಸಬೆಸ್ಟಸ್’ ಇರುವುದಿಲ್ಲ. ಇದು ಸುರಕ್ಷಿತವಾಗಿದೆ ಮತ್ತು ಕಾನ್ಸರ್ ರೋಗಕ್ಕೆ ಕಾರಣವಾಗುವುದಿಲ್ಲ ಎಂದು ಹೇಳಿದೆ.

ಸಂಪಾದಕರ ನಿಲುವು

ಆರೋಗ್ಯಕ್ಕಾಗಿ ಹಾನಿಕಾರಕವಾಗಿರುವ ಇಂತಹ ವಿದೇಶಿ ಉತ್ಪನ್ನಗಳನ್ನು ಭಾರತ ಸರಕಾರವು ತಕ್ಷಣವೇ ನಿಷೇಧಿಸುವ ಆವಶ್ಯಕತೆಯಿದೆ !