ಮಳೆಗಾಲದಲ್ಲಿ ವಾತಾವರಣ ಹಾಗೂ ಶರೀರದಲ್ಲಾಗುವ ಬದಲಾವಣೆ

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ವೈದ್ಯ ಮೇಘರಾಜ ಪರಾಡಕರ್

‘ಮಳೆಗಾಲ ಪ್ರಾರಂಭವಾದ ನಂತರ ವಾತಾವರಣವು ಒಮ್ಮಿಂದೊಮ್ಮೆ ತಂಪಾಗುತ್ತದೆ. ಮಳೆಯ ನೀರು ಮೇಲಿಂದ, ಮೇಲಿನ ಪ್ರದೇಶಗಳಿಂದ ಹರಿದು ಕೆಳಗಿನ ಪ್ರದೇಶಗಳಲ್ಲಿ ಬಂದು ಸಂಗ್ರಹವಾಗುತ್ತದೆ. ಈ ನೀರಿನಲ್ಲಿ ಮಣ್ಣು, ಹಾಗೆಯೇ ಇತರ ಕಲುಷಿತ ಘಟಕಗಳು ಸೇರಿಕೊಂಡಿರುತ್ತವೆ. ಇದರಿಂದ ನೀರು ಕಲುಷಿತವಾಗುತ್ತದೆ. ವಾತಾವರಣದಲ್ಲಿನ ಈ ಬದಲಾವಣೆಗಳಿಂದ ಶರೀರದಲ್ಲಿ ವಾತ ಮತ್ತು ಪಿತ್ತ ಹೆಚ್ಚಾಗುತ್ತದೆ. ಸತತ ಬೀಳುವ ಮಳೆಯಿಂದ ಹಾಗೆಯೇ ಮೋಡ ಕವಿದ ವಾತಾವರಣದಿಂದ ಶರೀರದಲ್ಲಿನ ಅಗ್ನಿ (ಜೀರ್ಣಶಕ್ತಿ) ಮಂದವಾಗುತ್ತದೆ. ಇದರಿಂದ ಮಳೆಗಾಲದಲ್ಲಿ ಶೀತ, ಕೆಮ್ಮು, ಜ್ವರ, ಹಾಗೆಯೇ ಸಾಂಕ್ರಾಮಿಕ ರೋಗಗಳಲ್ಲಿ ಹೆಚ್ಚಳವಾಗುವುದನ್ನು ಗಮನಿಸಿದ್ದೇವೆ. ವಾತಾವರಣದಲ್ಲಿನ ತಂಪಿನಿಂದ ಕೀಲುನೋವು, ಕೈಕಾಲುಗಳು ಸೆಟೆದುಕೊಳ್ಳುವುದು ಇಂತಹ ತೊಂದರೆಗಳೂ ಹೆಚ್ಚುತ್ತವೆ. ತಂಪಿನಿಂದ ತ್ವಚೆಯ ಮೇಲೆ ಶಿಲೀಂಧ್ರ ರೋಗ (ಫಂಗಲ್ ಇನ್ಸಫೆಕ್ಶನ್) ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾಲದಲ್ಲಿ ಆರೋಗ್ಯ ಕಾಪಾಡಲು ಏನು ಮಾಡಬೇಕೆಂಬುದನ್ನು ಮುಂದಿನ ಲೇಖನಗಳಲ್ಲಿ ನೋಡೋಣ.’

ಮಳೆಗಾಲದಲ್ಲಿ ಶರೀರದಲ್ಲಿನ ಅಗ್ನಿಯ, ಜೀರ್ಣಶಕ್ತಿಯ ರಕ್ಷಣೆಯಾಗಲು ಮಿತವಾಗಿ ಊಟ ಮಾಡಬೇಕು, ಹಾಗೆಯೇ ನಡುನಡುವೆ ಉಪವಾಸ ಮಾಡಬೇಕು !

‘ಸತತವಾಗಿ ಬರುವ ಮಳೆಯಿಂದ ಶರೀರದಲ್ಲಿನ ಅಗ್ನಿ, ಜೀರ್ಣಶಕ್ತಿ ಮಂದವಾಗುತ್ತದೆ. ಅಗ್ನಿ ಮಂದವಾಗಿರುವುದರಿಂದ ಶೀತ, ಕೆಮ್ಮು, ಜ್ವರ ಇಂತಹ ರೋಗಗಳಾಗುತ್ತವೆ. ಮಳೆಗಾಲದಲ್ಲಿ ಅಗ್ನಿ ಚೆನ್ನಾಗಿರಲು ಹೊಟ್ಟೆತುಂಬ ಊಟ ಮಾಡುವುದನ್ನು ತಡೆಗಟ್ಟಬೇಕು. ಸ್ವಲ್ಪ ಹಸಿವು ಇಟ್ಟು ಊಟವನ್ನು ಮಾಡಬೇಕು. ಬೆಳಗ್ಗೆ ಹಸಿವಾಗದಿದ್ದರೆ ಉಪಾಹಾರವನ್ನು ಮಾಡದೇ ನೇರ ವಾಗಿ ಮಧ್ಯಾಹ್ನ ಊಟವನ್ನು ಮಾಡಬೇಕು. ವಾರಕ್ಕೊಮ್ಮೆ ರಾತ್ರಿ ಊಟವನ್ನು ಬಿಟ್ಟು ಏನು ತಿನ್ನದೇ ಉಪವಾಸ ಮಾಡಬೇಕು.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೬.೨೦೨೩)

ಲೇಖನಮಾಲಿಕೆಯಲ್ಲಿನ ಎಲ್ಲ ಲೇಖನಗಳನ್ನು ಒಟ್ಟಿಗೆ ಓದಲು ಕೊಂಡಿ : bit.ly/3LG2JM3