ಬೆಂಗಳೂರು – ಜುಲೈ 18 ರಂದು ಭಾಜಪ ವಿರೋಧಿ ಪಕ್ಷಗಳ ಸಭೆ ನಡೆಯಿತು. ಈ ಸಭೆಯಲ್ಲಿ 26 ರಾಜಕೀಯ ಪಕ್ಷಗಳ ಮುಖಂಡರು, ನಾಯಕರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎನ್‌ಸಿಪಿಯ ಶರದ್ ಪವಾರ್, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಉದ್ಧವ್ ಠಾಕ್ರೆ ಮತ್ತು ಇತರರು ಇದ್ದರು. ಈ ಸಮಯದಲ್ಲಿ ಅವರು ತಮ್ಮ ಮೈತ್ರಿಕೂಟವನ್ನು ‘ಇಂಡಿಯಾ’ ಎಂದು ಕರೆದಿದ್ದಾರೆ. (ಇಂಡಿಯನ್ ನ್ಯಾಶನಲ್ ಡೆಮೊಕ್ರೆಟಿಕ್ ಇನ್ಕ್ಲೂಸಿವ್ ಅಲಾಯನ್ಸ) ಎಂದು ಹೆಸರು ಇಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಮೈತ್ರೀಕ್ಕೂಟದ ಮುಂದಿನ ಸಭೆ ಮುಂಬಯಿಯಲ್ಲಿ ನಡೆಯಲಿದೆ. ಮೊದಲ ಸಭೆ ಜೂನ 23 ರಂದು ಬಿಹಾರದ ರಾಜಧಾನಿ ಪಾಟಲಿಪುತ್ರದಲ್ಲಿ ನಡೆದಿತ್ತು. ಭಾಜಪದಿಂದಲೂ ಜುಲೈ 18 ರಂದು ಅವರ ಮಿತ್ರಪಕ್ಷಗಳ ಸಭೆ ದೆಹಲಿಯಲ್ಲಿ ಆಯೋಜಿಸಲಾಗಿತ್ತು.
ವಿರೋಧ ಪಕ್ಷಗಳ INDIA ಮೈತ್ರಿಕೂಟ: ದೇಶದ ಯಾವ ನಾಯಕರು ಏನೇನು ಮಾತಾಡಿದ್ರು ಇಲ್ಲಿದೆ ನೋಡಿ..#Karnataka #indiaalliance #MahaGathbandhan #OppositionMeeting #BengaluruOppositionMeet @INCIndia @INCKarnataka @ArvindKejriwal @RahulGandhi @kharge @MamataOfficial @BJP4India https://t.co/pcYcTYLDOf
— Asianet Suvarna News (@AsianetNewsSN) July 18, 2023
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಭೆಯಲ್ಲಿ ಮಾತನಾಡಿ, ನಮ್ಮ 26 ಪಕ್ಷಗಳ ಒಗ್ಗೂಡುವಿಕೆಯನ್ನು ನೋಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು `ಎನ್.ಡಿ.ಎ’ (ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರೀಕೂಟ) ಸಭೆಯನ್ನು ಕರೆದಿದ್ದಾರೆ. ಇದರಲ್ಲಿ ಅವರು 30 ಪಕ್ಷಗಳನ್ನು ಕರೆದಿದ್ದಾರೆ. ಈ 30 ಪಕ್ಷಗಳು ಯಾವುದು ಎನ್ನುವುದೇ ತಿಳಿದಿಲ್ಲ. ಈ ಪಕ್ಷಗಳು ಚುನಾವಣಾ ಆಯೋಗದಲ್ಲಿ ನೊಂದಾಯಿತವಾಗಿದೆಯೋ ಇಲ್ಲವೋ ಎನ್ನುವುದೂ ಯಾರಿಗೂ ತಿಳಿದಿಲ್ಲ. ಈ ಪಕ್ಷಗಳ ಹೆಸರನ್ನೂ ಎಂದೂ ಕೇಳಿಲ್ಲ. ಮೋದಿಯವರೊಂದಿಗೆ ಎಂದೂ ಮಾತನಾಡಲಿಲ್ಲ ಅವರನ್ನೂ ಸಭೆಗೆ ಆಹ್ವಾನಿಸಲಾಗಿದೆ. ಮೋದಿಯವರು ಈಗ ಪ್ರತಿಯೊಂದು ಪಕ್ಷವನ್ನು ಸಂಪರ್ಕಿಸುತ್ತಿದ್ದಾರೆ. ಆ ಪಕ್ಷಗಳ ಅಧ್ಯಕ್ಷರೊಂದಿಗೆ ಮಾತನಾಡುತ್ತಿದ್ದಾರೆ. ಅವರ ಪಕ್ಷದ ಅಧ್ಯಕ್ಷರು ವಿವಿಧ ರಾಜ್ಯಗಳಿಗೆ ಹೋಗಿ ಅಲ್ಲಿಯ ಸ್ಥಳೀಯ ಪಕ್ಷಗಳ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ. ಕಾರಣ ಅವರು(ನರೇಂದ್ರ ಮೋದಿ) ಈಗ ವಿರೋಧಿ ಪಕ್ಷಗಳಿಗೆ ಹೆದರಿದ್ದಾರೆ. ಎಂದು ಹೇಳಿದರು.