ಪಾಕಿಸ್ತಾನದಲ್ಲಿ ಎಲ್ಲಿಯವರೆಗೆ ಮತಾಂಧರ ಮೇಲೆ ಕ್ರಮ ಕೈಗೊಳ್ಳಲ್ಲ, ಅಲ್ಲಿಯ ವರೆಗೆ ಹಿಂದು ದೇವಸ್ಥಾನಗಳ ಮೇಲೆ ದಾಳಿ ನಿಲ್ಲದು ! – ಮಾನವಹಕ್ಕು ಆಯೋಗದ ಕಳವಳ

ಪಾಕಿಸ್ತಾನದಲ್ಲಿನ ಮಾನವ ಹಕ್ಕುಗಳ ಸಂಘಟನೆಯ ಹಿಂದೂ ನಾಯಕರಿಂದ ಕಳವಳ !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದಲ್ಲಿನ ಸಿಂಧ ಪ್ರಾಂತದಲ್ಲಿನ ಹಿಂದೂಗಳ ದೇವಸ್ಥಾನದ ಮೇಲೆ ನಡೆಯುತ್ತಿರುವ ದಾಳಿಯಿಂದ ಅಲ್ಲಿಯ ‘ಪಾಕಿಸ್ತಾನ ದೇರಾವರ ಇತ್ತೆಹಾದ್’ ಈ ಮಾನವ ಹಕ್ಕುಗಳ ಸಂಘಟನೆಯ ಮುಖ್ಯಸ್ಥ ಶಿವ ಕಾಛಿ ಇವರು ಸಿಂಧ ಸರಕಾರದ ಬಳಿ ಕಳವಳ ವ್ಯಕ್ತಪಡಿಸುತ್ತ ದೇವಸ್ಥಾನಗಳ ಮೇಲಿನ ದಾಳಿ ನಡೆಸಿದವರಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ‘ಎಲ್ಲಿಯವರೆಗೆ ಮತಾಂಧರ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ, ಅಲ್ಲಿಯವರೆಗೆ ಹಿಂದುಗಳ ದೇವಸ್ಥಾನದ ಮೇಲೆ ಈ ರೀತಿಯ ದಾಳಿ ಮುಂದುವರೆಯುವುದು’, ಎಂದು ಅವರು ಹೇಳಿದರು.

ಶಿವ ಕಾಛಿ ಮಾತು ಮುಂದುವರೆಸಿ, ಸಿಂಧ ಪ್ರಾಂತದಲ್ಲಿನ ಹಿಂದೂ ದೇವಸ್ಥಾನಗಳ ಮೇಲಿನ ದಾಳಿಗಳು ಸಿಂಧ ಪ್ರಾಂತದಲ್ಲಿ ಪಾಕಿಸ್ತಾನಿ ಹಿಂದೂಗಳ ಅಗ್ನಿ ಪರೀಕ್ಷೆಯ ಆರಂಭವಾಗಿದೆ ಎಂದು ಅನಿಸುತ್ತಿದೆ. ನದಿ ಕಣಿವೆಯಲ್ಲಿ ಬಚ್ಚಿ ಕುಳಿತಿರುವ ದರೋಡೆಕೊರರು ಪ್ರತಿ ದಿನ ವಿಡಿಯೋ ಪ್ರಸಾರ ಮಾಡುತ್ತಾರೆ. ಅದರಲ್ಲಿ ಅವರು ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಈಕೆ ಹಿಂದೂ ಯುವಕನ ಜೊತೆ ವಿವಾಹವಾಗಲು ಭಾರತಕ್ಕೆ ಓಡಿ ಹೋಗಿರುವುದರಿಂದ ಅದರ ಸೇಡು ತೀರಿಸಿಕೊಳ್ಳಲು ಹಿಂದುಗಳ ಹತ್ಯೆ, ಅಪಹರಣ, ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ಹಾಗೂ ದೇವಸ್ಥಾನವನ್ನು ಧ್ವಂಸಗೊಳಿಸಿ ತೀರಿಸಿಕೊಳ್ಳುತ್ತಿದ್ದಾರೆ. ಸೀಮಾ ಏನೆಲ್ಲಾ ಮಾಡಿದ್ದಾಳೆ ಅದು ತಪ್ಪಾಗಿದೆ; ಆದರೆ ಇಲ್ಲಿಯ ಹಿಂದುಗಳ ಜೊತೆಗೆ ಅದರದು ಏನು ಸಂಬಂಧ ? ಆಕೆ ಒಬ್ಬ ಮುಸಲ್ಮಾನ ಮಹಿಳೆಯಾಗಿದ್ದು ಆಕೆ ಏನೆಲ್ಲ ಮಾಡಿದ್ದಾಳೆ ಅದು ಆಕೆಯ ವೈಯಕ್ತಿಕ ನಿರ್ಣಯವಾಗಿತ್ತು. ಸಿಂಧ ಪ್ರಾಂತದಲ್ಲಿನ ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂದೂಗಳ ಮತಾಂತರ ಮುಂತಾದ ಘಟನೆಯ ಬಗ್ಗೆ ಸಿಂಧ ಸರಕಾರದ ಬಳಿ ಕೆಲವು ತಿಂಗಳಿಂದ ನಾವು ನಿರಂತರ ದೂರು ನೀಡುತ್ತಿದ್ದೇವೆ ಎಂದು ಹೇಳಿದರು.