ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿನ ದೇವಾಲಯಗಳ ಭದ್ರತೆಗಾಗಿ 400 ಹಿಂದೂ ಪೊಲೀಸರ ನೇಮಕ !

ಕರಾಚಿ (ಪಾಕಿಸ್ತಾನ) – ಕಳೆದ 3 ದಿನಗಳಲ್ಲಿ ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ಹಿಂದೂಗಳ 2 ದೇವಾಲಯಗಳ ಮೇಲೆ ದಾಳಿ ನಡೆದ ಬಳಿಕ ಇಲ್ಲಿನ ಸರಕಾರವು ಸಿಂಧ ಪ್ರಾಂತ್ಯದಲ್ಲಿನ ದೇವಾಲಯಗಳ ಭದ್ರತೆಗಾಗಿ 400 ಕ್ಕೂ ಹೆಚ್ಚು ಹಿಂದೂ ಪೊಲೀಸರನ್ನು ನಿಯೋಜಿಸಿದೆ. ಅದರಲ್ಲೂ ವೀಶೇಷ ಅಂದರೆ ಸಿಂಧನಲ್ಲಿನ ಮಾರಿಮಾತಾ ದೇವಾಲಯವನ್ನು ಕೆಡವುತ್ತಿದ್ದಾಗ, ದೇವಾಲಯವನ್ನು ಕೆಡವುತ್ತಿದ್ದವರಿಗೆ ಪೊಲೀಸರು ರಕ್ಷಣೆ ನೀಡಿದ್ದರು ಎಂದು ಪಾಕಿಸ್ತಾನದ ಪ್ರಸಿದ್ಧ ದಿನಪತ್ರಿಕೆ ‘ಡಾನ್’ನಲ್ಲಿ ವರದಿಯಾಗಿದೆ. (ಇದರಿಂದ ‘ಸಿಂಧ‌ನಲ್ಲಿರುವ ಪೊಲೀಸರು ನಿಜವಾಗಿಯೂ ದೇವಾಲಯಗಳನ್ನು ರಕ್ಷಿಸುತ್ತಾರೆಯೇ ?’ ಎಂಬ ಪ್ರಶ್ನೆ ಉದ್ಭವಿಸಿದೆ – ಸಂಪಾದಕರು)