ಮುಸಲ್ಮಾನ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂದೂಗಳ ಸ್ಥಿತಿ !

ಫಲಕ ಪ್ರಸಿದ್ಧಿಗಾಗಿ

೧. ಮುಸಲ್ಮಾನ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂದೂಗಳ ಸ್ಥಿತಿ !

ಔರಂಗಾಬಾದ (ಬಿಹಾರ) ಇಲ್ಲಿ ಮುಸಲ್ಮಾನ ಬಹುಸಂಖ್ಯಾತ ಅಮಝರ ಶರೀಫ್ ಪ್ರದೇಶದಲ್ಲಿನ ಹಿಂದೂಗಳ ೩ ದೇವಸ್ಥಾನಗಳಲ್ಲಿ ಮಾಂಸದ ತುಂಡು ಗಳನ್ನು ಎಸೆದ ಘಟನೆ ನಡೆದಿದೆ. ಅಲ್ಲದೇ ಇಲ್ಲಿಯ ಓರ್ವ ಹಿಂದೂವಿನ ಅಂಗಡಿಯ ಮೇಲೆ ಪ್ರಚೋದನಾಕಾರಿ ಬರಹವನ್ನು ಬರೆದಿರುವ ಭಿತ್ತಿಪತ್ರವನ್ನು ಅಂಟಿಸಿರುವುದು ಕಂಡು ಬಂದಿದೆ.

೨. ಇಂತಹ ಪರಿಸ್ಥಿತಿ ಎದುರಿಸಲು ಭಾರತದ ಹಿಂದೂಗಳು ಸಿದ್ಧರಿದ್ದಾರಾ ?

ಮತಾಂಧ ಮುಸಲ್ಮಾನರು ಫ್ರಾನ್ಸ್ ಬಳಿಕ ಈಗ ಸ್ವಿಝರಲ್ಯಾಂಡ್ ಮತ್ತು ಬೆಲ್ಜಿಯಮ್ ಈ ಯುರೋಪಿಯನ ದೇಶಗಳಲ್ಲಿಯೂ ಹಿಂಸಾಚಾರ ಮಾಡಲು
ಪ್ರಾರಂಭಿಸಿದ್ದಾರೆ. ಸ್ವಿಝರಲ್ಯಾಂಡದಲ್ಲಿನ ಲಾಜೇನ ನಗರದಲ್ಲಿ ೧೦೦ ಕ್ಕೂ ಹೆಚ್ಚು ಮತಾಂಧರು ಅನೇಕ ಅಂಗಡಿಗಳನ್ನು ಗುರಿಯಾಗಿಸಿ ಧ್ವಂಸಗೊಳಿಸಿದ್ದಾರೆ.

೩. ಬಂಗಾಲದಲ್ಲಿ ರಾಷ್ಟ್ರಪತಿ ಆಳ್ವಿಕೆ ಯಾವಾಗ ಜಾರಿಗೊಳಿಸುವಿರಿ ?

ಬಂಗಾಲದ ಉತ್ತರ ೨೪ ಪರಗಾಣಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇಮ್ರಾನ ಹಾಸನ ಎಂಬ ತೃಣಮೂಲ ಕಾಂಗ್ರೆಸ್ಸಿನ ೧೭ ವರ್ಷದ ಕಾರ್ಯಕರ್ತನು ಸಾವನ್ನಪ್ಪಿದನು. ಈ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ ಪಕ್ಷವು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಮತ್ತು ಇಂಡಿಯನ್ ಸೆಕ್ಯುಲರ ಫ್ರಂಟ್ ಈ ಪಕ್ಷಗಳ ಮೇಲೆ ಆರೋಪ ಹೊರಿಸಿದೆ.

೪. ಹಿಂದೂಗಳಿಗೆ ಧರ್ಮಶಿಕ್ಷಣ ಅತ್ಯಂತ ಆವಶ್ಯಕ ಎಂಬುದನ್ನು ತಿಳಿಯಿರಿ !

ಕೇದಾರನಾಥ ದೇವಸ್ಥಾನದ ಪರಿಸರದಲ್ಲಿ ಓರ್ವ ಯುವತಿಯು ಅವಳ ಪ್ರಿಯಕರನಿಗೆ ವಿವಾಹದ ಪ್ರಸ್ತಾಪವನ್ನಿಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ದೇವಸ್ಥಾನದ ಆಡಳಿತವು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಲ್ಲಿ ಆಗ್ರಹಿಸಿದೆ.

೫. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !

ಭಾರತದಲ್ಲಿ ಶರಿಯತ್ ಆಡಳಿತ ಜಾರಿಗೆ ತರಲಾಗುವುದು. ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಬ್ಬರೂ ಮುಸಲ್ಮಾನರಾದರೆ, ಸಾಕಷ್ಟು ಸುಧಾರಣೆಯಾಗುವುದು, ಎಂದು ತಬಲಿಗಿ ಜಮಾತನ ಮೌಲಾನಾ ತೌಕೀರ ಅಹಮದ ಹೇಳಿದ್ದಾರೆ.

೬. ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರವನ್ನು ವಿಸರ್ಜನೆ ಮಾಡಿ !

ಬಂಗಾಲದಲ್ಲಿ ಜುಲೈ ೮ ರಂದು ಪಂಚಾಯತ ಚುನಾವಣೆಗಳನ್ನು ತೆಗೆದು ಕೊಳ್ಳಲಾಯಿತು. ಈ ಚುನಾವಣೆಗಳು ಘೋಷಿಸಿದಾಗಿನಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ೧೫ ಮತ್ತು ಮತದಾನದ ದಿನದಂದೂ ೧೩ ಜನರು ಸಾವನ್ನಪ್ಪಿದ್ದಾರೆ.

೭. ಭಾರತದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳ ಸ್ಥಿತಿಯನ್ನು ತಿಳಿಯಿರಿ !

ಶಾಹಜಾಂಹಪುರ (ಉತ್ತರಪ್ರದೇಶ)ದ ಆಂಜನೇಯ ದೇವಸ್ಥಾನದ ಹತ್ತಿರ ಒಂದು ಗೋಣಿಚೀಲದಲ್ಲಿ ಗೋಮಾಂಸ ಸಿಕ್ಕಿದೆ. ಈ ಬಗ್ಗೆ ಹಿಂದುತ್ವಪರ ಸಂಘಟನೆಗಳಿಗೆ ಮಾಹಿತಿ ಸಿಕ್ಕಾಗ ಅವರು ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದರು.