ಪಾಕಿಸ್ತಾನದ ರಕ್ಷಣಾ ಸಚಿವರಿಂದ ಅಪಘಾನಿಸ್ತಾನ ಸರಕಾರಕ್ಕೆ ಎಚ್ಚರಿಕೆ !
ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಭಯೋತ್ಪಾದಕ ಕಾರ್ಯಾಚರಣೆ ನಡೆಸುವ ಭಯೋತ್ಪಾದಕರಿಗೆ ನೆರೆಯ ದೇಶ ಅಪಘಾನಿಸ್ತಾನದಲ್ಲಿ ಆಶ್ರಯ ನೀಡಲಾಗುತ್ತಿದೆ. ಪಾಕಿಸ್ತಾನ ಅದನ್ನು ಈಗ ಸಹಿಸುವುದಿಲ್ಲ, ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಕ್ವಾಜಾ ಆಸಿಫ್ ಇವರು ಎಚ್ಚರಿಕೆ ನೀಡಿದರು. ಈ ಹಿಂದೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಮ್ ಮುನಿರ್ ಇವರು ಕೂಡ ಹೀಗೆ ಆರೋಪಿಸಿದ್ದರು. ತಹರಿಕ್-ಎ-ತಾಲಿಬಾನ್ ಪಾಕಿಸ್ತಾನ(ಟಿಟಿಪಿ) ಈ ಭಯೋತ್ಪಾದಕ ಸಂಘಟನೆ ಪಾಕಿಸ್ತಾನದ ಸೇನೆಯ ಮೇಲೆ ದಾಳಿ ನಡೆಸುತ್ತಿದೆ ಎಂದು ಕೂಡ ಅವರು ಹೇಳಿದರು.
೧. ಕ್ವಾಜಾ ಆಸಿಫ್ ಇವರು, ಅಪಘಾನಿಸ್ತಾನ್ ನೆರೆಯ ದೇಶದ ಕರ್ತವ್ಯ ನಿರ್ವಹಿಸುತ್ತಿಲ್ಲ. ಅದು ದೋಹ ಒಪ್ಪಂದದ ಪಾಲನೆ ಕೂಡ ಮಾಡುತ್ತಿಲ್ಲ. ೫೦ ರಿಂದ ೬೦ ಲಕ್ಷ ಅಪಘಾಣ ನಿರಾಶ್ರಿತರು ಕಳೆದ ೫೦ ವರ್ಷಗಳಿಂದ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ; ಆದರೆ ಇದರ ವಿರುದ್ಧ ಪಾಕಿಸ್ತಾನಿಗಳ ರಕ್ತ ಹರಿಸುವ ಭಯೋತ್ಪಾದಕರಿಗೆ ಅಪಘಾನಿಸ್ತಾನದ ನೆಲದಲ್ಲಿ ಆಶ್ರಯ ದೊರೆಯುತ್ತಿದೆ. ಇದು ಇನ್ನೂ ಮುಂದೆ ಸಹಿಸಲಾಗದು. ಪಾಕಿಸ್ತಾನ ತನ್ನ ಭೂಮಿ ಮತ್ತು ನಾಗರೀಕರ ರಕ್ಷಣೆಗಾಗಿ ಎಲ್ಲಾ ಉಪಕರಣಗಳನ್ನು ಉಪಯೋಗಿಸುವುದು.
೨. ಪಾಕಿಸ್ತಾನವು ಅಪಘಾನಿಸ್ತಾನದ ತಾಲಿಬಾನಿ ಸರಕಾರಕ್ಕೆ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ತಹರಿಕ್-ಎ-ತಾಲಿಬಾನ್ ಪಾಕಿಸ್ತಾನ(ಟಿಟಿಪಿ)ದ ಭಯೋತ್ಪಾದಕರಿಗೆ ತನ್ನ ದೇಶದಲ್ಲಿ ಆಶ್ರಯ ನೀಡಿರುವ ಆರೋಪ ಮಾಡಿದೆ. ಈ ಭಯೋತ್ಪಾದಕ ಸಂಘಟನೆ ಸಂಪೂರ್ಣ ಪಾಕಿಸ್ತಾನದಲ್ಲಿ ಶರಿಯತ್ ಕಾನೂನು ಜಾರಿ ಮಾಡುವುದಕ್ಕಾಗಿ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಅದು ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ನಡೆಸುತ್ತಿದೆ. ೨೦೨೧ ರಲ್ಲಿ ಅಪಘಾನಿಸ್ತಾನದಲ್ಲಿ ತಾಲಿಬಾಲದ ಸರಕಾರ ಬಂದ ನಂತರದಿಂದ ಅದರ ಕಾರ್ಯಾಚರಣೆ ಹೆಚ್ಚಾಗಿದೆ.
पाकिस्तान के रक्षा मंत्री ख्वाजा आसिफ ने दावा किया कि उनके देश में खून-खराबा करने वाले आतंकवादियों को अफगानिस्तान में शरण मिल रही है. उन्होंने कहा कि पाकिस्तान अब इसे सहन नहीं करेगा.#Pakistan #Afghanistan #PakistanTerrorAttack #Taliban https://t.co/Nfx8TD8ktz
— ABP News (@ABPNews) July 15, 2023
ಪಾಕಿಸ್ತಾನವು ನಮ್ಮಲ್ಲಿ ಟಿಟಿಪಿಯ ಭಯೋತ್ಪಾದಕರು ಇರುವ ಸಾಕ್ಷಿ ನೀಡಬೇಕು ! – ತಾಲಿಬಾನದಿಂದ ಪಾಕಿಸ್ತಾನಕ್ಕೆ ಸವಾಲು !
ಪಾಕಿಸ್ತಾನದ ಆರೋಪದ ಬಗ್ಗೆ ಅಪಘಾನಿಸ್ತಾನದ ತಾಲಿಬಾನಿ ಸರಕಾರ ಪ್ರತ್ಯುತ್ತರ ನೀಡಿದೆ. ತಾಲಿಬಾನ ಸರಕಾರದ ವಕ್ತಾರ ಜಬಿವುಲ್ಲಾಹ್ ಮುಜಾಹಿದ್ ಈತನು, ಅಪಘಾನಿಸ್ತಾನದಲ್ಲಿ ಟಿಟಿಪಿಯ ಅಸ್ತಿತ್ವವಿಲ್ಲ. ಪಾಕಿಸ್ತಾನದ ಬಳಿ ಏನಾದರೂ ಟಿಟಿಪಿ ಅಪಘಾನಿಸ್ತಾನದಲ್ಲಿ ಇರುವ ಸಾಕ್ಷಿಗಳು ಇದ್ದರೆ ಅದು ಅವರು ನಮಗೆ ನೀಡಬೇಕು. ಅದರ ನಂತರ ನಾವು ಅದರ ಬಗ್ಗೆ ಯೋಚನೆ ಮಾಡಿ ಕ್ರಮ ಕೈಗೊಳ್ಳುವೆವು ಎಂದು ಹೇಳಿದ್ದಾನೆ.
ಮುಜಾಹಿದ್ ಮಾತು ಮುಂದುವರೆಸುತ್ತಾ, ಪಾಕಿಸ್ತಾನ್ ದೋಹಾ ಒಪ್ಪಂದದ ಭಾಗವಲ್ಲ. ಆದ್ದರಿಂದ ಅದಕ್ಕೆ ಈ ಒಪ್ಪಂದದ ಬಗ್ಗೆ ಮಾತನಾಡುವ ಯಾವುದೇ ಅಧಿಕಾರ ಕೂಡ ಇಲ್ಲ. ಈ ಒಪ್ಪಂದ ಅಪಘಾನಿಸ್ತಾನ ಮತ್ತು ಅಮೆರಿಕ ಇವರಲ್ಲಿ ನಡೆದಿದ್ದು. ಅಫ್ಘಾನಿಸ್ತಾನ್ ಪಾಕಿಸ್ತಾನವನ್ನು ಒಂದು ಇಸ್ಲಾಮಿ ನೆರೆಯ ದೇಶ ಎಂದು ನಂಬುತ್ತಿರುವುದರಿಂದ ಈ ಒಪ್ಪಂದದ ಮೇರೆಗೆ ಪಾಕಿಸ್ತಾನದ ಜೊತೆಗೆ ಸಂಬಂಧ ಇಟ್ಟುಕೊಂಡಿದೆ. ಅಪಘಾನಿಸ್ತಾನದ ಭೂಮಿಯನ್ನು ಪಾಕಿಸ್ತಾನದ ವಿರೋಧಿಸಲು ಉಪಯೋಗಿಸುತ್ತಿಲ್ಲ ಎಂದು ಹೇಳಿದರು.
ಸಂಪಾದಕರ ನಿಲುವು* ಕಳೆದ ೩೩ ವರ್ಷಗಳಿಂದ ಪಾಕಿಸ್ತಾನವು ಭಾರತದಲ್ಲಿ ಭಯೋತ್ಪಾದಕರ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ, ಅದೇ ಈಗ ಅಪಘಾನಿಸ್ತಾನದಿಂದ ಪಾಕಿಸ್ತಾನದ ವಿರೋಧದಲ್ಲಿ ತಾಲಿಬಾನಿ ಭಯೋತ್ಪಾದಕರು ಕಾರ್ಯಾಚರಣೆ ನಡೆಸುತ್ತಿದ್ದರೆ, ಅದು ಪಾಕಿಸ್ತಾನದ ಕರ್ಮದ ಫಲ ಎಂದೇ ಹೇಳಬೇಕು ! |