`ಸಿನೆಮಾದಲ್ಲಿ ಚೀನಾವನ್ನು ಖಳನಾಯಕನೆಂದು ತೋರಿಸಲಾಗಿದೆಯಂತೆ !’-ಚೀನಾದ ಮುಖವಾಣಿ `ಗ್ಲೋಬಲ್ ಟೈಮ್ಸ್’
ಬೀಜಿಂಗ (ಚೀನಾ) – ಚೀನಾ ಸರಕಾರದ ಮುಖವಾಣಿಯೆಂದು ಗುರುತಿಸಲಾಗುವ `ಗ್ಲೋಬಲ್ ಟೈಮ್ಸ್’ ಈ ದಿನಪತ್ರಿಕೆಯು ತನ್ನ ಸಂಪಾದಕೀಯದಲ್ಲಿ ಭಾರತದಲ್ಲಿ ಬಿಡುಗಡೆಯಾಗಿರುವ `ಭಾರತೀಯನ್ಸ್’ ಈ ಹಿಂದಿ ಸಿನೆಮಾದ ಕುರಿತು ಭಾರತವನ್ನು ಟೀಕಿಸಿದೆ. ಇದರಲ್ಲಿ, `ಇಂತಹ ಸಿನೆಮಾಗಳಲ್ಲಿ ಚೀನಾವನ್ನು ಖಳನಾಯಕನಂತೆ ತೋರಿಸಲಾಗಿದ್ದು, ಇದರಿಂದ ಚೀನಾ ಮತ್ತು ಭಾರತದ ಸಂಬಂಧದಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡುವ ಸಾಧ್ಯತೆಯಿದೆ’. `ಭಾರತಿಯನ್ಸ್’ ಈ ಸಿನೆಮಾವನ್ನು ದೀನಾ ರಾಜಾ ಇವರು ನಿರ್ದೇಶಿಸಿದ್ದಾರೆ ಮತ್ತು ಅವರೇ ಕಥೆಯನ್ನು ಬರೆದಿದ್ದಾರೆ.
भारत के खिलाफ चीन ने उगला जहर!#india #Chinahttps://t.co/PhRbBbgTFN
— Zee News (@ZeeNews) July 15, 2023
ಏನಿದೆ `ಗ್ಲೋಬಲ್ ಟೈಮ್ಸ್’ ತನ್ನ ಸಂಪಾದಕೀಯದಲ್ಲಿ,
1. `ಭಾರತಿಯನ್ಸ್’ ಈ ಸಿನೆಮಾ ಜುಲೈ 14 ರಂದು ಭಾರತದಲ್ಲಿ ಬಿಡುಗಡೆಯಾಗಿದ್ದು, ಅದನ್ನು ಕೆಲವು ಪ್ರಸಾರ ಮಾಧ್ಯಮಗಳು ಮತ್ತು ರಾಜಕೀಯ ಮುಖಂಡರು ಹೊಗಳುತ್ತಿದ್ದಾರೆ. ಅನೇಕ ಜನರು ಇದನ್ನು ದೇಶಭಕ್ತಿಯ ಸಿನೆಮಾ ಆಗಿದೆಯೆಂದು ಹೇಳಿದ್ದಾರೆ. ಈ ಸಿನೆಮಾದ ವೈಶಿಷ್ಟ್ಯವೇನೆಂದರೆ ನಟನೆ ಅಥವಾ ಕಥೆಯಾಗಿರದೇ ಇದರಲ್ಲಿ ಚೀನಿವಿರೋಧಿ ಭಾವನೆಯನ್ನು ತೋರಿಸಲಾಗಿದೆ.
2. ಈ ಸಿನೆಮಾದ ಕಥೆ 6 ಯುವಕರಿಗೆ ಸಂಬಂಧಿಸಿದೆ. ಈ ಯುವಕರು ರಹಸ್ಯ ಕೆಲಸಕ್ಕಾಗಿ ಚೀನಾದ ಭೂಪ್ರದೇಶದಲ್ಲಿ ನುಸುಳುತ್ತಾರೆ. ಈ ಸಿನೆಮಾದ ಸಂಭಾಷಣೆಗಳು ಗಾಲ್ವಾನ್ ಕಣಿವೆಯಲ್ಲಿನ ಸಂಘರ್ಷವನ್ನು ಉದ್ದೇಶಪೂರ್ವಕವಾಗಿ ತೋರಿಸಲು ಪ್ರಯತ್ನಿಸುತ್ತದೆ. ಈ ಸಿನೆಮಾದ ನಿರ್ಮಾಣ ಮಾಡಿದ ಸಂಸ್ಥೆಯು ಈ ಚಲನಚಿತ್ರದ ಬಿಡುಗಡೆಗೆ ಮುನ್ನ ಗಾಲ್ವಾನ್ ಕಣಿವೆಯ ಸಂಘರ್ಷದ ವಿಷಯವನ್ನು ಪ್ರಚಾರ ಮಾಡುವ ಮೂಲಕ ಸಿನೆಮಾವನ್ನು ಕುತೂಹಲ ಮೂಡಿಸಿತ್ತು.
3. ಈ ಸಿನೆಮಾ ಸಾಮಾನ್ಯ ಸಿನೆಮಾವಲ್ಲ, ಇದು ಚೀನಾವಿರೋಧಿ ಪ್ರಚಾರದ ಒಂದು ಭಾಗವಾಗಿದೆಯೆನ್ನುವುದು ಸ್ಪಷ್ಟವಾಗುತ್ತದೆ. ಕೆಲವು ಪ್ರಸಾರಮಾಧ್ಯಮಗಳು ಇದನ್ನು ದೇಶಭಕ್ತಿಯ ಸಿನೆಮಾವೆಂದು ಹೇಳಿದ್ದಾರೆ. ಇದರಲ್ಲಿ ಸುಧಾರಣೆ ಮಾಡುವ ಆವಶ್ಯಕತೆಯಿದೆ; ಕಾರಣ ಈ ಸಿನೆಮಾ ದೇಶಭಕ್ತಿಯ ಕುರಿತಾಗಿ ಇಲ್ಲ, ಇದು ಸಂಕುಚಿತ ವಿಚಾರಸರಣಿಯ ರಾಷ್ಟ್ರವಾದಿ ಸಿನೆಮಾವಾಗಿದ್ದು, ಇದು ದ್ವೇಷವನ್ನು ಪ್ರೋತ್ಸಾಹಿಸುತ್ತದೆ. ಈ ಸಿನೆಮಾವನ್ನು ಯಾವುದೇ ಆಧುನಿಕ ಸಭ್ಯ ದೇಶ ಸಹಿಸುವುದಿಲ್ಲ.
4. ಈ ಸಿನೆಮಾವು ಚಿತ್ರರಂಗದ ಮರ್ಯಾದೆಯನ್ನು ಉಲ್ಲಂಘಿಸಿದೆ. ಈ ಸಿನೆಮಾವು ಚೀನಾಗ ‘ಖಳನಾಯಕ’ ಹಾಗೂ ಭಾರತದ ಶತ್ರು ಎಂದು ಚಿತ್ರಿಸಲಾಗಿದೆ. ಈ ಸಿನೆಮಾ ಎಷ್ಟು ಜನರು ನೋಡುವರೋ ಅಷ್ಟು ದ್ವೇಷ ಹೆಚ್ಚಾಗುತ್ತದೆ ಎಂದು ಹೇಳಿದೆ.
ಸಂಪಾದಕರ ನಿಲುವುಚೀನಾವು ಭಾರತಕ್ಕೆ ನಾಯಕನಲ್ಲ ಖಳನಾಯಕನಾಗಿದೆ ಎಂದು ಭಾರತೀಯರಿಗೆ ಅನಿಸುತ್ತಿದ್ದರೆ, ಅದನ್ನೇ ಸಿನೆಮಾದಲ್ಲಿ ತೋರಿಸಲಾಗುವುದು ! ಚೀನಾಗೆ ಇದು ತಪ್ಪೆಂದು ಅನಿಸುತ್ತಿದ್ದರೆ, ಅದು ಭಾರತದ ಸ್ನೇಹಿತನಂತೆ ಕೃತಿ ಮಾಡಿ ತೋರಿಸಬೇಕು ! |