ಕೆನಡಾವು ಅಲ್ಲಿನ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಭದ್ರತೆಯ ಕಡೆಗೆ ನಿಗಾ ವಹಿಸಿ ! – ಭಾರತ

ಜಕಾರ್ತ (ಇಂಡೋನೇಷಿಯಾ) – ಭಾರತದ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ ಇವರು ತಮ್ಮ ಇಂಡೋನೇಷಿಯಾದ ಪ್ರವಾಸದಲ್ಲಿ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಇವರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ಜೈ ಶಂಕರ ಇವರು ಕೆನಡಾದಲ್ಲಿನ ಭಾರತೀಯ ರಾಯಭಾರಿಗಳ ಸಂರಕ್ಷಣೆಯ ಕುರಿತಾದ ಅಂಶದ ಕಡೆಗೆ ಜೋಲಿ ಇವರ ಗಮನ ಸೆಳೆದರು. ಹಾಗೂ ಹಿಂಸಾತ್ಮಕ ಚಟುವಟಿಕೆ ನಡೆಸುವವರಿಗೆ ಪ್ರಚೋದನೆ ನೀಡುವ ಶಕ್ತಿಗಳನ್ನು ಎದುರಿಸುವ ಅಂಶಗಳ ಬಗ್ಗೆ ಒತ್ತಿ ಹೇಳಿದರು. ಜೈಶಂಕರ ಇವರು ಈ ಭೇಟಿಯ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದರು. ಕಳೆದ ಕೆಲವು ಸಮಯದಿಂದ ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕರಿಂದ ಭಾರತ ವಿರೋಧಿ ಚಟುವಟಿಕೆಗಳು ಹೆಚ್ಚಾಗಿವೆ. ಇದರ ಹಿನ್ನೆಲೆಯಲ್ಲಿ ಜೈಶಂಕರ ಇವರು ಮೇಲಿನ ಹೇಳಿಕೆ ನೀಡಿದರು.

ಜಕಾರ್ತದ ಪ್ರವಾಸದಲ್ಲಿರುವ ಜೈಶಂಕರ ಇವರು ಚೀನಿ ಕಮಿನಿಸ್ಟ್ ಪಾರ್ಟಿಯ ಕೇಂದ್ರ ವಿದೇಶ ಆಯೋಗ ಕಾರ್ಯಾಲಯದ ನಿರ್ದೇಶಕ ವಾಂಗ ಯಿ ಇವರನ್ನು ಕೂಡ ಭೇಟಿ ಮಾಡಿದರು. ಆ ಸಮಯದಲ್ಲಿ ಇಬ್ಬರೂ ನಾಯಕರಲ್ಲಿ ಭಾರತ-ಚೀನಾ ಗಡಿಯ ಕ್ಷೇತ್ರದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸ್ಥಾಪಿಸುವ ಬಾಕಿ ಉಳಿದಿರುವ ಅಂಶಗಳ ಬಗ್ಗೆ ಚರ್ಚೆ ನಡೆಸಿದರು.