‘ಚಂದ್ರಯಾನ 3’ ರ ಯಶಸ್ವಿ ಉಡಾವಣೆ !

ಶ್ರೀಹರಿಕೋಟ (ಆಂಧ್ರಪ್ರದೇಶ) – ಇಲ್ಲಿಯ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ಜುಲೈ ೧೪ ರಂದು ಮಧ್ಯಾಹ್ನ ೨ ಗಂಟೆ ೩೫ ನಿಮಿಷಕ್ಕೆ ‘ಚಂದ್ರಯಾನ-3’ ರ ಯಶಸ್ವಿ ಉಡಾವಣೆ ಆಯಿತು. ಇದರಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (‘ಇಸ್ರೋ’ದ) ವಿಜ್ಞಾನಿಗಳು ಚಂದ್ರನ ಮೇಲೆ ಭಾರತದ ಯಾನ ಕಳಿಸುವ ಅಭಿಯಾನದಲ್ಲಿನ ಮೊದಲ ಹಂತ ಸಾಕಾರಗೊಳಿಸಿದೆ. ಯಾನ ಈಗ ಆಗಸ್ಟ್ ೨೩ ರಂದು ಸಂಜೆ ೫ ಗಂಟೆಯ ಸಮಯದಲ್ಲಿ ಚಂದ್ರನ ಮೇಲೆ ಇಳಿಯುವುದು ಎಂದು ಇಸ್ರೋದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಈ ಹಿಂದೆ ೨೦೧೯ ರಲ್ಲಿ ‘ಚಂದ್ರಯಾನ-2’ ಚಂದ್ರನ ಮೇಲೆ ಇಳಿಸಲು ವಿಫಲವಾಗಿತ್ತು. ಅದರ ನಂತರ ಮತ್ತೊಮ್ಮೆ ‘ಇಸ್ರೋ’ದಿಂದ ‘ಚಂದ್ರಯಾನ-3’ ರ ಉಡಾವಣೆ ಮಾಡಿದೆ.

‘ಚಂದ್ರಯಾನ-3’ ಯಶಸ್ವಿಯಾದರೆ ಭಾರತ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ ! – ‘ಇಸ್ರೋ’ ಮುಖ್ಯಸ್ಥ

‘ಚಂದ್ರಯಾನ-3’ ರ ಯಶಸ್ವಿ ಉಡಾವಣೆಯ ನಂತರ ‘ಇಸ್ರೋ’ದ ಮುಖ್ಯಸ್ಥ ಎಸ್. ಸೋಮನಾಥ ಇವರು, ‘ಚಂದ್ರಯಾನ-3’ ರ ಚಂದ್ರನ ದಿಕ್ಕಿನತ್ತ ಪ್ರವಾಸ ಆರಂಭವಾಗಿದೆ. ಈ ಅಭಿಯಾನದ ಮೂಲಕ ಭಾರತಕ್ಕೆ ತನ್ನ ಬಾಹ್ಯಾಕಾಶ ಶಕ್ತಿ ಜಗತ್ತಿಗೆ ತೋರಿಸುವುದಿದೆ. ಅಭಿಯಾನ ಯಶಸ್ವಿಯಾದರೆ ಈ ಮೈಲುಗಲ್ಲು ಸಾಧಿಸುವುದರಲ್ಲಿ ಅಮೆರಿಕಾ, ರಷ್ಯಾ ಮತ್ತು ಚೀನಾದ ನಂತರ ಭಾರತ ಇದು ಜಗತ್ತಿನ ನಾಲ್ಕನೆಯ ದೇಶವಾಗಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಂದ ಅಭಿನಂದನೆ !

ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ‘ಚಂದ್ರಯಾನ-3’ ರ ಯಶಸ್ವಿ ಪ್ರಕ್ಷೇಪಣೆಯ ನಂತರ ಟ್ವೀಟ್ ಮಾಡಿ ‘ಇಸ್ರೋ’ದ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಅವರು, ‘ಚಂದ್ರಯಾನ-3’ ರಿಂದ ಭಾರತ ಬಾಹ್ಯಾಕಾಶ ಕಾರ್ಯಕ್ಷೇತ್ರದಲ್ಲಿ ಒಂದು ಹೊಸ ಅಧ್ಯಾಯ ಬರೆದಿದೆ. ಪ್ರತಿಯೊಬ್ಬ ಭಾರತೀಯನ ಕನಸು ಪೂರ್ಣಗೊಳಿಸುವ ಕಾರ್ಯವಾಗಿದೆ. ಈ ಕಾರ್ಯ ಎಂದರೆ ನಮ್ಮ ವಿಜ್ಞಾನಿಗಳ ನಿಷ್ಠೆಯ ಸಾಕ್ಷಿಯಾಗಿದೆ ಎಂದು ಹೇಳಿದರು.

‘ಚಂದ್ರಯಾನ-3’ ಎಂದರೆ ಏನು ?

‘ಚಂದ್ರಯಾನ-3’ ಎಂದರೆ ‘ಚಂದ್ರಯಾನ-2’ ರ ಮುಂದಿನ ಹಂತವಾಗಿದೆ. ಈ ಯಾನ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಅಲ್ಲಿಯ ಮಣ್ಣು ಮತ್ತು ವಾತಾವರಣದ ಅಭ್ಯಾಸ ಮಾಡಲಿದೆ. ೨೦೧೯ ರಲ್ಲಿ ‘ಚಂದ್ರಯಾನ- 2’ ಚಂದ್ರನ ಮೇಲೆ ಸುಲಭವಾಗಿ ಇಳಿಸುವಲ್ಲಿ ವಿಫಲವಾಗಿತ್ತು. ಅದರ ಅವಶೇಷಗಳು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಗೆ ೩ ತಿಂಗಳ ನಂತರ ದೊರೆತಿದ್ದವು. ಈಗ ‘ಚಂದ್ರಯಾನ-3’ ಚಂದ್ರನ ಮೇಲೆ ಇಳಿಸುವ ಪ್ರಯತ್ನವಾಗಿದೆ. ಈ ಯಾನದಿಂದ ‘ಲಾಡರ್’ ಮತ್ತು ‘ರೋವರ್’ ಚಂದ್ರನ ದಕ್ಷಿಣ ಧ್ರುವದಲ್ಲಿ ಹೊರಬರುವುದು. ಇದರಲ್ಲಿನ ‘ರೋವರ್’ ಇದು ಒಂದು ಆರು ಚಕ್ರದ ರೋಬೊ ಆಗಿದೆ. ಅದು ಲ್ಯಾಂಡರಿನ ಒಳಗೆ ಇದ್ದು ಯಾನ ಚಂದ್ರನ ಮೇಲೆ ಇಳಿದ ನಂತರ ಇದು ಹೊರ ಬರಲಿದೆ. ಅದು ಚಂದ್ರನ ಕಕ್ಷೆಯಲ್ಲಿ ಇದ್ದು ಪೃಥ್ವಿಯ ಮೇಲೆ ಬರುವ ಕಿರಣಗಳ ಅಭ್ಯಾಸ ಮಾಡಲಿದೆ. ಚಂದ್ರನ ಪುಷ್ಟ ಭಾಗ ಹೇಗೆ ಇದೆ ?, ಅದನ್ನು ಸಂಶೋಧನೆ ನಡೆಸಲಿದೆ, ಅದರ ಮೂಲಕ ಮಣ್ಣು ಮತ್ತು ಧೂಳಿನ ಅಭ್ಯಾಸ ಮಾಡಲಾಗುವುದು.

ಕೇವಲ ೧೪ ದಿನದ ಚಂದ್ರನ ಮೇಲಿನ ಅಭ್ಯಾಸ ಇರಲಿದೆ !

ಚಂದ್ರನ ಮೇಲೆ ೧೪ ದಿನ ರಾತ್ರಿ ಇರುತ್ತದೆ ಮತ್ತು ೧೪ ದಿನ ಬೆಳಕು ಇರುತ್ತದೆ. ಯಾವಾಗ ಅಲ್ಲಿ ರಾತ್ರಿ ಇರುತ್ತದೆ, ಆಗ ಅಲ್ಲಿಯ ತಾಪಮಾನ ಮೈನಸ್ ೧೦೦ ಅಂಶ ಸೆಲ್ಸಿಎಸ್ ಕ್ಕಿಂತಲೂ ಕೆಳಗೆ ಹೋಗುತ್ತದೆ. ‘ಚಂದ್ರಯಾನ-3’ ರ ಲ್ಯಾಂಡರ್ ಮತ್ತು ರೋವರ್ ನ ‘ಸೋಲಾರ್ ಪ್ಯಾನೆಲ್’ನಿಂದ ಶಕ್ತಿ ನಿರ್ಮಾಣ ಮಾಡಲಿದೆ. ಆದ್ದರಿಂದ ಅದು ೧೪ ದಿನ ವಿದ್ಯುತ್ ಉತ್ಪನ್ನ ಮಾಡಲಿದೆ; ಆದರ ನಂತರ ೧೪ ರಾತ್ರಿಯ ಸಮಯದಲ್ಲಿ ವಿದ್ಯುತ್ ನಿರ್ಮಿತಿಯ ಪ್ರಕ್ರಿಯೆ ನಿಲ್ಲುವುದು. ವಿದ್ಯುತ್ ನಿರ್ಮಿತಿ ಆಗದೆ ಇದ್ದರೆ ಎಲೆಕ್ಟ್ರಾನಿಕ್ ಉಪಕರಣಗಳು ಕೊರೆಯುವ ಚಳಿಯಿಂದ ಹಾಳಾಗುತ್ತದೆ. ಆದ್ದರಿಂದ ಲ್ಯಾಂಡರ್ ಮತ್ತು ರೋವರ್ ಕೇವಲ ೧೪ ದಿನ ಚಂದ್ರನ ಮೇಲೆ ಅಭ್ಯಾಸ ಮಾಡಲು ಸಾಧ್ಯವಾಗುವುದು.