ಬ್ರಿಟನ್ ನ ಭದ್ರತೆಗಾಗಿ ಚೀನಾ ಅಪಾಯಕಾರಿ !

ಬ್ರಿಟಿಷ್ ಸಂಸದೀಯ ಸಮಿತಿಯ ವರದಿ !

ಲಂಡನ್ (ಬ್ರಿಟನ್) – ಬ್ರಿಟನ್‌ನ ರಾಷ್ಟ್ರೀಯ ಭದ್ರತೆಗೆ ಚೀನಾ ಎಲ್ಲಕ್ಕಿಂತ ದೊಡ್ಡ ಅಪಾಯವಿದೆ, ಎಂದು ಬ್ರಿಟನ್‌ನ ಸಂಸದೀಯ ಸಮಿತಿಯು ದೇಶದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ತಯಾರಿಸಿದ ಒಂದು ವರದಿಯಲ್ಲಿ ಹೇಳಿದೆ. ಚೀನಾವು ಬ್ರಿಟನ್‌ನ ಆರ್ಥಿಕತೆಯಲ್ಲಿಯೂ ಒಡಕು ಹುಟ್ಟಿಸಿದೆ ಎಂದು ವರದಿಯಲ್ಲಿ ಹೇಳಿದೆ. ಈ ವರದಿಗನುಸಾರ ಚೀನಾ ಇಲ್ಲಿಯವರೆಗೆ ಬ್ರಿಟನ್‌ಅನ್ನು ಆಕ್ರಮಣಕಾರಿಯಾಗಿ ಗುರಿಯಾಗಿಸುವಲ್ಲಿ ಯಶಸ್ವಿಯಾಗಿದೆ; ಏಕೆಂದರೆ ಚೀನಾದಿಂದ ರಕ್ಷಿಸಿಕೊಳ್ಳಲು ಬ್ರಿಟನ್ ಬಳಿ ಯಾವುದೇ ಯೋಜನೆ ಇಲ್ಲ.

೧. ವರದಿಯಲ್ಲಿ, ಬ್ರಿಟನ್‌ನ ಆರ್ಥಿಕತೆಯಲ್ಲಿ ಚೀನಾದ ಪಾಲ್ಗೊಳ್ಳುವಿಕೆ, ಅದರ ಪ್ರಭಾವ ಮತ್ತು ಅದರ ಹಸ್ತಕ್ಷೇಪವನ್ನು ಪತ್ತೆ ಹಚ್ಚುವುದು ಕಠಿಣವಿದೆ. ಸರಕಾರವು ಈ ಮೊದಲು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಬ್ರಿಟನ್‌ನ ಗುಪ್ತಚರ ಸಂಸ್ಥೆಯು ಚೀನಾದ ಗುಪ್ತ ಚಟುವಟಿಕೆಗಳ ಕಡೆಗೆ ನಿಗಾವಹಿಸಿದ್ದರೂ, ಚೀನಾದ ಚಟುವಟಿಕೆಗಳನ್ನು ಗುರುತಿಸಲು ಅದು ವಿಫಲವಾಗುತ್ತಿದೆ. ಇಲ್ಲಿಯವರೆಗೆ ಚೀನಾ ಬ್ರಿಟನ್‌ನಲ್ಲಿ ಮಾಡಿದ ಹೂಡಿಕೆಯ ತನಿಖೆಯಾಗಿಲ್ಲ. ಇಷ್ಟೇ ಅಲ್ಲದೇ ಬ್ರಿಟನ್ ಸರಕಾರವು ಚೀನಾದೊಂದಿಗೆ ಮಾಡಿದ ವಿವಿಧ ಒಪ್ಪಂದಗಳನ್ನೂ ಪರಿಶೀಲಿಸಿಲ್ಲ. ಕೆಲವು ಸಂಸ್ಥೆಗಳು ಚೀನಾದ ಚಟುವಟಿಕೆಗಳ ಕಡೆ ದುರ್ಲಕ್ಷಿಸುತ್ತಿವೆ. ಚೀನಾದಿಂದ ಹಣ ಪಡೆದು ಅವು ಸಂತೋಷದಿಂದಿವೆ. ನಾವು (ಬ್ರಿಟನ್), ಚೀನಾ ನಮ್ಮ ಯೋಜನೆಗಳ ಮಾಹಿತಿಯನ್ನು ಕಳ್ಳತನ ಮಾಡಬಹುದು ಮತ್ತು ತನ್ನ ಗುಣಮಟ್ಟವನ್ನು ಸಿದ್ಧ ಮಾಡಬಹುದು ಮತ್ತು ತನ್ನ ಉತ್ಪಾದನೆಗಳನ್ನು ಆರಂಭಿಸಬಹುದಾದಂತಹ ಮಾರ್ಗದಲ್ಲಿದ್ದೇವೆ. ಮತ್ತು ಆ ಮೂಲಕ ಅದು ಬ್ರಿಟನ್ ಮೇಲೆ ರಾಜಕೀಯ ಮತ್ತು ಆರ್ಥಿಕ ಒತ್ತಡವನ್ನು ಹೇರಬಹುದು.

೨. ಬ್ರಿಟನ್‌ನ ಪ್ರಧಾನಮಂತ್ರಿ ಋಷಿ ಸುನಕ ಇವರು ಈ ಮೊದಲು, ಚೀನಾದ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಮುಖ ಹೆಜ್ಜೆಗಳನ್ನು ಕೈಗೊಳ್ಳುತ್ತಿದೆ, ಎಂದು ಹೇಳಿದ್ದರು.

ಸಂಪಾದಕರ ನಿಲುವು

ಬ್ರಿಟನ್‌ನ ಭದ್ರತೆಗಾಗಿ ಅಪಾಯಕಾರಿಯಾಗಿರುವ ಚೀನಾ, ಪಕ್ಕದಲ್ಲಿರುವ ಭಾರತಕ್ಕೆ ಎಷ್ಟು ಅಪಾಯಕಾರಿಯಾಗಿರಬಹುದು ಎಂದು ಕಲ್ಪನೆಯನ್ನು ಮಾಡಲೂ ಸಾಧ್ಯವಿಲ್ಲ ! ಚೀನಾವನ್ನು ತಡೆಯಲು ಸರಕಾರ ಮಾತ್ರವಲ್ಲದೇ ಭಾರತೀಯರೂ ಪಾಲ್ಗೊಳ್ಳಬೇಕು !