ನಾಗಪುರ – ದೇಶದಲ್ಲಿ ನಕ್ಸಲರು ಹಿಂದೆ ಬಿದ್ದಿದೆ, ಎಂದು ನಕ್ಸಲರು ಇದೇ ಮೊದಲಬಾರಿ ಸ್ವೀಕೃತಿ ನೀಡಿದ್ದಾರೆ. ನಕ್ಸಲರಿಂದ ‘ಜುಲೈ ೨೮ ರಿಂದ ಆಗಸ್ಟ್ ೩’ ಈ ಸಮಯದಲ್ಲಿ ‘ಹುತಾತ್ಮ ಸ್ಮೃತಿ’ ಸಪ್ತಾಹ ಆಚರಿಸಿರಿ’, ಎಂದು ಸೂಚನೆ ನೀಡಿದೆ. ಈ ಪ್ರಯುಕ್ತ ನಕ್ಸಲರ ಕೇಂದ್ರ ಸಮಿತಿಯಿಂದ ೨೪ ಪುಟಗಳ ದಾಖಲೆ ಪ್ರಸಾರ ಮಾಡಿದೆ. ಈ ದಾಖಲೆಯಲ್ಲಿ ನಕ್ಸಲರು ‘ಕಳೆದ ಒಂದು ವರ್ಷದಲ್ಲಿ ದೇಶದ ಬೇರೆ ಬೇರೆ ಭಾಗದಲ್ಲಿ ಪೊಲೀಸರ ಜೊತೆ ನಡೆದಿರುವ ಚಕಮಕಿಯಲ್ಲಿ ನಕ್ಸಲರ ೬೭ ನಕ್ಸಲ್ ಕಮಾಂಡರ್ಸ್ ಹತರಾಗಿದ್ದಾರೆ ಅಥವಾ ಕಾಯಿಲೆ ಸಹಿತ ಇತರ ಕಾರಣಗಳಿಂದ ಅವರ ಸಾವಾಗಿದೆ. ಆದ್ದರಿಂದ ನಕ್ಸಲ ಚಳುವಳಿಗೆ ಆಘಾತ ಆಗಿರುವುದು ಒಪ್ಪಿದೆ. ಇದರ ಜೊತೆಗೆ ಇನ್ನು ಮುಂದೆ ಪೊಲೀಸರ ಅತ್ಯಾಧುನಿಕ ಡಿಜಿಟಲ್ ಸರ್ವಿಲೆನ್ಸ್ ಮತ್ತು ಇಂಟೆಜಿಲೆನ್ಸ್ ಇದನ್ನು ಯಾವ ರೀತಿಯಲ್ಲಿ ಎದುರಿಸುವುದು ? ಇದರ ಬಗ್ಗೆ ಕೂಡ ದಿಕ್ಕು ನೀಡಲಾಗಿದೆ.
नक्षली चळवळीची पिछेहाट झाली असल्याची कबुलीच माओवाद्यांनी दिली आहे#Naxal #Maoist #Naxal #Naxalism https://t.co/gRkWCfLskG
— ABP माझा (@abpmajhatv) July 12, 2023
ನಕ್ಸಲರ ದಾಖಲೆಯಲ್ಲಿ ಏನು ಹೇಳಿದೆ ?
೧. ಅತ್ಯಾಧುನಿಕ ಮತ್ತು ನವೀಕರಿಸಿರುವ ‘ಟೆಕ್ನಿಕಲ್ ಇಂಟೆಲಿಜೆನ್ಸ್’ದಿಂದ ಪೊಲೀಸರು ನಕ್ಸಲ್ ಕಮಾಂಡರವರೆಗೆ ತಲುಪಿ ಅವರನ್ನು ಬಂಧಿಸುತ್ತಿದ್ದಾರೆ ಅಥವಾ ಅವರನ್ನು ಮುಗಿಸುತ್ತಿದ್ದಾರೆ.
೨. ‘ಪೊಲೀಸರ ಅತ್ಯಾಧುನಿಕ ಟೆಕ್ನಿಕಲ್ ಇಂಟೆಲಿಜೆನ್ಸ್ ಎದುರಿಸಲು ನಕ್ಸಲ್ ಕಮಾಂಡರ್ ಹಳೆಯ ಹ್ಯೂಮನ್ ಇಂಟೆಲಿಜೆನ್ಸ್ ಉಪಯೋಗಿಸಬೇಕು’, ಎಂದು ನಕ್ಸಲರಿಗೆ ಸೂಚನೆ ನೀಡಿದ್ದಾರೆ.
೩. ನಕ್ಸಲ ಪೀಡಿತ ಪ್ರದೇಶದಲ್ಲಿ ಪೊಲೀಸರ ಸಂಖ್ಯೆ ಹೆಚ್ಚಿಸಲಾಗಿದೆ ಮತ್ತು ನಕ್ಸಲರ ಸಂಖ್ಯೆ ಕಡಿಮೆ ಆಗಿರುವುದು ಗಮನಕ್ಕೆ ತೆಗೆದುಕೊಂಡು ಮಾವೋಗಳು ಅನೇಕ ದಶಕಗಳ ಹಿಂದೆ ನೀಡಿರುವ ‘ಗೊರಿಲ್ಲಾ ಯುದ್ಧ ತಂತ್ರದ ಉಪಯೋಗ ಮಾಡಬೇಕು, ಈ ರೀತಿಯ ಆದೇಶ ಕೂಡ ಕೇಂದ್ರ ಸಮಿತಿಯಿಂದ ನಕ್ಸಲ್ ಕಮಾಂಡರ್ಸ್ ಗೆ ನೀಡಿದ್ದಾರೆ.
೪. ಪೊಲೀಸರ ಹೆಚ್ಚಿರುವ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು, ‘ಒಂದೇ ಸ್ಥಳದಲ್ಲಿ ಹೆಚ್ಚು ದಿನ ನಿಲ್ಲಬಾರದು, ಅಲ್ಲಲ್ಲಿ ಪಸರಿಸಿ ಸತತ ನಡೆಯುತ್ತಿರಿ’, ಎಂದು ಕಮಾಂಡರ್ಸ್ ಗಳಿಗೆ ಸೂಚನೆ ನೀಡಲಾಗಿದೆ.
नक्षली चळवळीची पिछेहाट झाली असल्याची कबुलीच माओवाद्यांनी दिली आहे#Naxal #Maoist #Naxal #Naxalism https://t.co/gRkWCfLskG
— ABP माझा (@abpmajhatv) July 12, 2023
ಸಂಪಾದಕೀಯ ನಿಲುವುಇಂತಹ ಹೇಳಿಕೆಯಿಂದ ನಕ್ಸಲರಿಂದ ಮತ್ತೆ ಪೊಲೀಸರು ಮತ್ತು ಸೈನಿಕರ ಮೇಲೆ ಗೊರಿಲ್ಲಾ ಯುದ್ಧ ಹೂಡಬಹುದು ಎಂಬುದು ನಿರಾಕರಿಸಲಾಗುವುದಿಲ್ಲ. ಎಲ್ಲಿಯವರೆಗೆ ದೇಶದಲ್ಲಿನ ನಕ್ಸಲರ ಮತ್ತು ಮಾವೋವಾದಿಗಳು ಬೇರು ಸಹಿತ ನಾಶವಾಗುವುದಿಲ್ಲವೋ ಅಲ್ಲಿಯವರೆಗೆ ನಕ್ಸಲರಿಂದ ದೇಶಕ್ಕೆ ಅಪಾಯ ಇದೆ, ಇದು ಸರಕಾರ ಮತ್ತು ಪೊಲೀಸ ಇಲಾಖೆಯವರು ಗಮನದಲ್ಲಿಟ್ಟುಕೊಳ್ಳಬೇಕು. |