ಜಳಗಾಂವ್ ನಲ್ಲಿ 33 ಹಸುಗಳ ಕಾಲು ಕಟ್ಟಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂವರ ಬಂಧನ !

13 ಹಸುಗಳ ಉಸಿರುಗಟ್ಟಿ ಸಾವು

Home

ಜಳಗಾಂವ್ – ಪರವಾನಿಗೆ ಇಲ್ಲದೇ 33 ಹಸುಗಳ ಕಾಲು ಕಟ್ಟಿ ಟ್ರಕ್ ನಲ್ಲಿ ತುರುಕಿ ಒಯ್ಯುತ್ತಿದ್ದ ಮಧ್ಯಪ್ರದೇಶದ ಮೂವರನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಟ್ರಕ್ ನಲ್ಲಿದ್ದ ಹಸುಗಳನ್ನು ವಶಕ್ಕೆ ಪಡೆದಿದ್ದಾರೆ. ಮಾರುಕಟ್ಟೆಯಲ್ಲಿ ಈ ಹಸುಗಳ ಬೆಲೆ 1 ಲಕ್ಷ 13 ಸಾವಿರ ರೂಪಾಯಿ ಇದೆಯೆಂದು ತಿಳಿದು ಬಂದಿದೆ. ಪಶುವೈದ್ಯಕೀಯ ಅಧಿಕಾರಿಗಳ ತಪಾಸಣೆಯ ಬಳಿಕ 13 ಹಸುಗಳು ಉಸಿರುಗಟ್ಟಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಟ್ರಕ್ ವಶಕ್ಕೆ ಪಡೆದು ಸಂಶಯಿತರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. (ಹಸುಗಳಿಗೆ ಇಂತಹ ಸ್ಥಿತಿಗೆ ತಂದಿರುವವರಿಗೆ ಕಠಿಣ ಶಿಕ್ಷೆಯಾಗಲೇ ಬೇಕು – ಸಂಪಾದಕರು)

ಬೆಳಿಗ್ಗೆ ಗಸ್ತು ನಡೆಸುತ್ತಿದ್ದ ಪೊಲೀಸರಿಗೆ ಒಂದು ಟ್ರಕ್ ಕಂಡು ಬಂದಿತು. ಆ ಟ್ರಕ್ ಚಾಲಕನನ್ನು ಕೆಲವರು ಥಳಿಸುತ್ತಿರುವುದನ್ನು ಕಂಡು ಪೊಲೀಸರು ತಮ್ಮ ವಾಹನ ನಿಲ್ಲಿಸಿದರು. ಆ ಸಮಯದಲ್ಲಿ ಥಳಿಸುತ್ತಿದ್ದವರು ಅಲ್ಲಿಂದ ಓಡತೊಡಗಿದರು. ಟ್ರಕ್ ನಲ್ಲಿ ಹಸುಗಳನ್ನು ತುಂಬಿರುವುದು ಮತ್ತು ಅವುಗಳ ಕಾಲನ್ನು ಕಟ್ಟಿರುವುದು ಪೊಲೀಸರಿಗೆ ಕಂಡು ಬಂದಿತು. ಟ್ರಕ್ ಚಾಲಕ ರಶೀದ ನಥೇಖಾ ಪಠಾಣ (ವಯಸ್ಸು 35 ವರ್ಷಗಳು) ಇದ್ದನು. ಇವನೊಂದಿಗೆ ದಯಾಳ ದೇವಿದಾಸ ಬೈರಾಗಿ (ವಯಸ್ಸು 38 ವರ್ಷಗಳು) ಮತ್ತು ಮಹಮ್ಮದ ಸದ್ದಾಮ ಮಹಮ್ಮದ ಬದರುದ್ದೀನ (ವಯಸ್ಸು 26 ವರ್ಷಗಳು) ಇವರಿಬ್ಬರೂ ಇದ್ದರು. ಅವರ ಬಳಿ ಹಸುಗಳನ್ನು ಸಾಗಿಸಲು ವಾಹನ ಪರವಾನಿಗೆ ಇರಲಿಲ್ಲ. ಈಗ ಪಂಚನಾಮೆ ಮಾಡಿ ಹಸುಗಳನ್ನು ಬಿಡುಗಡೆ ಮಾಡಲಾಗಿದೆ.

ಸಂಪಾದಕರ ನಿಲುವು

ಇನ್ನೂ ಎಷ್ಟು ಗೋವುಗಳು ಅಸುನೀಗಿದ ಬಳಿಕ ಗೋಹತ್ಯೆ ನಿಷೇಧ ಕಾನೂನನ್ನು ಕಠಿಣವಾಗಿ ಜಾರಿಗೊಳಿಸಲು ಕ್ರಮ ಕೈಕೊಳ್ಳಲಾಗುವುದು ?